ಬಾಲಕಿ ದತ್ತು ಪ್ರಕರಣ; ಜಾಮೀನು ಸಿಕ್ಕರೂ ಸೋನುಗೌಡಗೆ ಜೈಲೇ ಗತಿ

Sonu Gowda
Published on

ಬೆಂಗಳೂರು: ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಬಿಗ್​ಬಾಸ್​ ಒಟಿಟಿ ಮಾಜಿ ಸ್ಪರ್ಧಿ , ರೀಲ್ಸ್​ ರಾಣಿ ಸೋನು ಗೌಡಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಜಾಮೀನು ದೊರೆತರು ಸಹ ಈಕೆಗೆ ಬಿಡುಗಡೆ ಭಾಗ್ಯ ದೊರೆತ್ತಿಲ್ಲ ಎಂದು ತಿಳಿದು ಬಂದಿದೆ.

ಸುದ್ದಿ ಮೂಲಗಳ ಪ್ರಕಾರ ಸೋನು ಗೌಡಗೆ ಬಾಲಕಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ದೊರೆತ್ತಿದ್ದು, ಬೇಲ್​ ಕಾಪಿ ಸಂಜೆ 7 ಗಂಟೆ ವೇಳೆಗೆ ಜೈಲಿನ ಅಧಿಕಾರಿಗಳ ಬಳಿ ತಲುಪಬೇಕಿತ್ತು. ಆದರೆ, ಜಾಮೀನು ಪ್ರತಿ ಇನ್ನೂ ಜೈಲು ಅಧಿಕಾರಿಗಳ ಬಳಿ ತಲುಪದ ಕಾರಣ ಸೋನುಗೌಡ ಜೈಲಿನಲ್ಲೇ ಇರಲಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ರೀಲ್ಸ್‌ ಸ್ಟಾರ್ ಸೋನುಗೌಡ ಅವರು ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿತ್ತು. ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡ ಅವರನ್ನು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net