More

    ಭಾರತದ ಮೊದಲ ಪ್ರಧಾನಿ ನೆಹರೂ ಅಲ್ಲ; ನಟಿ ಕಂಗನಾ ಪ್ರಕಾರ ಯಾರು? ಮುಂದಾಗಿದ್ದೇನು

    ನವದೆಹಲಿ: ಸದಾ ತಮ್ಮ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

    ಟೈಮ್ಸ್​ ನೌ ಸುದ್ದಿ ಮಾಧ್ಯಮದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಕಂಗನಾಗೆ ನಿರೂಪಕಿ ಭಾರತದ ಮೊಟ್ಟ ಮೊದಲ ಪ್ರಧಾನಿ ಯಾರೆಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ಕಂಗನಾ ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಹೇಳುತ್ತಾರೆ. ಕೂಡಲೇ ನಿರೂಪಕಿ, ಬೋಸ್ ಅವರು ಭಾರತದ ಮೊದಲ ಪ್ರಧಾನಿ ಅಲ್ಲ ಎಂದು ನೆನಪಿಸಿದರು. ತಕ್ಷಣ ಎಚ್ಚೆತ್ತ ಕಂಗನಾ, ಬೋಸ್‌ ಅವರು ಪ್ರಧಾನಿ ಆಗಿರಲಿಲ್ಲ ಹೌದು, ಆದರೆ ಏಕೆ? ಅವರು ಎಲ್ಲಿಗೆ ಹೋದರು? ಅವರು ಹೇಗೆ ಕಣ್ಮರೆಯಾದರು ಎಂದು ಪ್ರಶ್ನಿಸಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರ ಪ್ರಕಾರ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಮೊದಲ ಪ್ರಧಾನಿಯಂತೆ ನಟಿಯನ್ನು ಟ್ರೋಲ್​ ಮಾಡಲಾಗುತ್ತಿದೆ. ಈ ಹಿಂದೆ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಎಂದು ಹೇಳುವ ಮೂಲಕ ನಟಿ ಕಂಗನಾ ಟೀಕೆಗೆ ಗುರಿಯಾಗಿದ್ದರು.

    ಇದನ್ನೂ ಓದಿ: ವಾಣಿಜ್ಯ​ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 10ಕ್ಕೂ ಹೆಚ್ಚು ಜನರ ರಕ್ಷಣೆ

    ಇತ್ತ ತಮ್ಮ ಹೇಳಿಕೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ನಟಿ ಕಂಗನಾ, ಭಾರತದ ಮೊದಲ ಪ್ರಧಾನಮಂತ್ರಿ ಯಾರೆಂದು ನನಗೆ ಹೇಳಲು ಬರುತ್ತಿರುವವರು ಮೊದಲು ಕೆಳಗೆ ಸ್ಕ್ರೀನ್​ಶಾಟ್​ಅನ್ನು ಒಮ್ಮೆ ನೋಡಿ. ನನಗೆ ಸಾಮಾನ್ಯ ಜ್ಞಾನದ ಪಾಠ ಮಾಡಲು ಬರುವ ಎಲ್ಲಾ ಪ್ರತಿಭೆಗಳಿಗೆ ನಾನು ತುರ್ತುಸ್ಥಿತಿ ಎಂಬ ಚಲನಚಿತ್ರವನ್ನು ಬರೆದು, ನಿರ್ದೇಶಿಸಿ, ನಟಿಸಿದ್ದೇನೆ ಎಂಬುದು ಮೊದಲು ಅರ್ಥ ಮಾಡಿಕೊಳ್ಳಲಿ.

    ಇದು ಪ್ರಾಥಮಿಕವಾಗಿ ನೆಹರು ಕುಟುಂಬದ ಸುತ್ತ ಸುತ್ತುತ್ತದೆ ಆದ್ದರಿಂದ ಯಾವುದೇ ಮಾನನಷ್ಟವಿಲ್ಲ ದಯವಿಟ್ಟು ನಾನು ನಿಮ್ಮ ಐಕ್ಯೂಗಿಂತ ಮುಂಚಿತವಾಗಿ ಮಾತನಾಡಿದರೆ ನೀವು ಎಂದು ನೀವು ಭಾವಿಸುತ್ತೀರಿ, ತಮಾಷೆ ನಿಮ್ಮ ಮೇಲಿದೆ ಮತ್ತು ಅದು ಹಳೆಯದಾಗಿದೆ ಎಂದು ನಟಿ ಕಂಗನಾ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts