More

    ಸೋಲೋ ಪಂದ್ಯವನ್ನು ಗೆಲ್ಲಿಸಿದವನಿಗೆ ಕೃತಜ್ಞತೆ ತೋರದ ಪಂಜಾಬ್​ ಕಿಂಗ್ಸ್​

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಐಪಿಎಲ್​ ಟೂರ್ನಿಯ 17ನೇ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ದ ಪಂದ್ಯದಲ್ಲಿ ಶಶಾಂಕ್​ ಸಿಂಗ್​ (61*ರನ್​, 29 ಎಸೆತ, 6 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಪಂಜಾಬ್​ ಕಿಂಗ್ಸ್​ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಶಿಖರ್​ ಧವನ್​ ಬಳಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಗುಜರಾತ್​ ತಂಡ ತವರು ಅಂಗಣದಲ್ಲಿ ಮೊದಲ ಸೋಲು ಅನುಭವಿಸಿತು.

    ಪಂಜಾಬ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಛತ್ತೀಸ್​ಗಢ ಮೂಲದ ಬ್ಯಾಟ್ಸ್​ಮನ್​ ಶಶಾಂಕ್​ ಸಿಂಗ್​ ಸ್ಫೋಟಕ ಬ್ಯಾಟಿಂಗ್​ ಮೂಲಕ​ ಗೆಲುವಿನಾಸೆಗೆ ಮರುಜೀವ ತುಂಬಿದರು. ಆದರೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರನಿಗೆ ಸಹ ಆಟಗಾರರು ಪ್ರಶಂಶಿಸದಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

    ಇದನ್ನೂ ಓದಿ: ವಿರಾಟ್​ ಒಬ್ಬನೇ ಒತ್ತಡ ಸಹಿಸಲು ಸಾಧ್ಯವಿಲ್ಲ; ಬ್ಯಾಟ್ಸ್​ಮನ್​ಗಳ ಅಗತ್ಯ ನೆರವು ಆರ್​ಸಿಬಿಗೆ ಬೇಕಿದೆ: ಆಸ್ಟ್ರೇಲಿಯಾ ಕ್ರಿಕೆಟಿಗ

    ಈ ಕುರಿತು ಪ್ರತಿಕ್ರಿಯಿಸಿರುವ ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್​ ಚೋಪ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ 50 ರನ್​ಗಳನ್ನು ಪೂರೈಸಿದಾಗ ಯಾರೂ ಕೂಡ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. 25 ಎಸೆತಗಳಲ್ಲಿ 50 ರನ್​ಗಳನ್ನು ಪೂರೈಸುವ ಮೂಲಕ ತಂಡದ ಪಾಲಿಗೆ ಸಿಪಿಆರ್​ ಆಗಿ ಕಾರ್ಯನಿರ್ವಹಿಸಿದ ವ್ಯಕ್ತಿಯನ್ನು ಪ್ರಶಂಶಿಸದೆ ಈ ರೀತಿ ಕುಳಿತುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಸೋಲಿನ ಭೀತಿಯಿಂದ ಈ ರೀತಿ ಮಾಡಿದ್ರಾ ಹೇಗೆ ಎಂದು ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್​ ಚೋಪ್ರಾ ಪಂಜಾಬ್​ ತಂಡವನ್ನು ಪ್ರಶ್ನಿಸಿದ್ದಾರೆ.

    ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ನಾಯಕ ಶಿಖರ್​ ಧವನ್​, ಉತ್ತಮ ಆರಂಭ ಪಡೆಯಬೇಕೆಂದು ಇದ್ದ ನಾವು ಆರಂಭದಲ್ಲೇ ಬೇಗನೆ ವಿಕೆಟ್​ಗಳನ್ನು ಕಳೆದುಕೊಂಡೆವು. ಶಶಾಂಕ್​ ಬ್ಯಾಟಿಂಗ್​ ಮಾಡಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ಶಶಾಂಕ್​ ಬಹಳ ಸಮಯದ ನಂತರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಮತ್ತು ಅವರು ತುಂಬಾ ಚೆನ್ನಾಗಿ ಆಡಿದ್ದಾರೆ ಎಂದು ನಾಯಕ ಶಿಖರ್​ ಧವನ್​ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಶಶಾಂಕ್​ ಸಿಂಗ್​ ಬ್ಯಾಟಿಂಗ್ ವೈಖರಿಯನ್ನು ಹಾಡಿ ಹೊಗಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts