More

    ವಿರಾಟ್​ ಒಬ್ಬನೇ ಒತ್ತಡ ಸಹಿಸಲು ಸಾಧ್ಯವಿಲ್ಲ; ಬ್ಯಾಟ್ಸ್​ಮನ್​ಗಳ ಅಗತ್ಯ ನೆರವು ಆರ್​ಸಿಬಿಗೆ ಬೇಕಿದೆ: ಆಸ್ಟ್ರೇಲಿಯಾ ಕ್ರಿಕೆಟಿಗ

    ಬೆಂಗಳೂರು: ಹೊಸ ಅಧ್ಯಾಯವನ್ನು ಸೋಲುಗಳ ಮೂಲಕ 17ನೇ ಆವೃತ್ತಿಯ ಐಪಿಎಲ್​ ಅಭಿಯಾನ ಅರಂಭಿಸಿರುವ ಆರ್​ಸಿಬಿಗೆ ಲಖನೌ ವಿರುದ್ಧದ ಪಂದ್ಯದಲ್ಲಿ ಸರ್ವಾಂಗೀಣ ವೈಫಲ್ಯದ ಫಲವಾಗಿ 28ರನ್​ಗಳ ಸೋಲು ಕಾಣುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಅದಕ್ಕೆ ಪೂರಕವೆಂಬಂತೆ ಆಸ್ಟ್ರೇಲಿಯಾ ಆಟಗಾರ ಸ್ಟೀವ್​ ಸ್ಮಿತ್​ ಆರ್​ಸಿಬಿ ಪ್ರದರ್ಶನದ ಕುರಿತು ಮಾತನಾಡಿದ್ದಾರೆ.

    ಆರ್​ಸಿಬಿ ಬ್ಯಾಟ್ಸ್​ಮನ್​ಗಳ ಸತತ ವೈಫಲ್ಯದ ಫಲವಾಗಿ ವಿರಾಟ್​ ಕೊಹ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ತಂಡದ ಸಹ ಆಟಗಾರರು ಸರಿಯಾದ ಪ್ರದರ್ಶನ ನೀಡದ ಕಾರಣ ವಿರಾಟ್​ ಕೊಹ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ. ಆರ್​ಸಿಬಿ ಪರ ಹಾಲಿ ಆವೃತ್ತಿಯಲ್ಲಿ 67.66ರ ಸರಾಸರಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 203 ರನ್ ಗಳಿಸಿದ್ದಾರೆ.

    ಕೊಹ್ಲಿಯ ಸ್ಥಿರ ಪ್ರದರ್ಶನದ ಹೊರತಾಗಿಯೂ ಆರ್​ಸಿಬಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಒಂದರಲ್ಲಿ ಗೆದ್ದಿದೆ. ವಿರಾಟ್​ ಕೊಹ್ಲಿಯ ಜೊತೆಗೆ ತಂಡದ ಇತರ ಪ್ರಮುಖ ಬ್ಯಾಟರ್​ಗಳು ಜೊತೆಯಾಗಿ ನಿಲ್ಲಬೇಕಿದೆ. ಒಂದು ವೇಳೆ ತಂಡದ ಇತರ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಆಟ ಕಂಡು ಬಂದಲ್ಲಿ ವಿರಾಟ್​ ಕೊಹ್ಲಿ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

    ಇದನ್ನೂ ಓದಿ: 3 ಮಕ್ಕಳ ತಾಯಿಗೆ 7 ವರ್ಷದಿಂದ ಅಕ್ರಮ ಸಂಬಂಧ; ಪ್ರಿಯಕರ ಜತೆ ಇರಲಿ ಎಂದು ಟ್ರಾನ್ಸ್​ಫಾರ್ಮರ್​ ಏರಿದ ಮಹಿಳೆ

    ವಿರಾಟ್​ ಕೊಹ್ಲಿ ತಮ್ಮ ಮೇಲೆ ತಾವು ಹೆಚ್ಚಿನ ಒತ್ತಡ ಹಾಕಿಕೊಳ್ಳುತ್ತಿದ್ದಾರೆ ಎಂದು ನನಗೆ ಅನುಮಾನವಿದೆ. ಪ್ರತಿ ಪಂದ್ಯದಲ್ಲೂ ಕೊಹ್ಲಿ ರನ್​ ಗಳಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಐಪಿಎಲ್‌ನಲ್ಲಿ ಚೆನ್ನಾಗಿ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಅವರಿಗೆ ಸ್ವಲ್ಪ ಬೆಂಬಲದ ಅಗತ್ಯವಿದೆ. ಅವರು ಪ್ರತಿ ಸಂದರ್ಭದಲ್ಲೂ ರನ್ ಗಳಿಸಲು ಹೋಗುವುದಿಲ್ಲ.

    ವಿರಾಟ್​ ಕೊಹ್ಲಿ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಆಡುತ್ತಾರೆ. ಅವರು ಸ್ಟ್ರೈಕ್​ರೇಟ್​ ಬಗ್ಗೆ ಎಂದು ತಲೆಕೆಡಿಸಿಕೊಂಡವರಲ್ಲ. ಮುಂದಿನ ದಿನಗಳಲ್ಲಿ ಆರ್​ಸಿಬಿ ಉತ್ತಮವಾಗಿ ಕಮ್​ಬ್ಯಾಕ್​ ಮಾಡುತ್ತದೆ ಎಂದು ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್​ ಸ್ಮಿತ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts