ತನಿಖೆ ಪೂರ್ತಿ ಮುಗಿಯುವವರೆಗೂ ಜೈಲಿನಲ್ಲಿರಲು ಸಿದ್ಧ: ಬೇಡಿಕೆ ಈಡೇರಿಕೆಗೆ ಸೋನಮ್​ ವಾಂಗ್‌ಚುಕ್ ಆಗ್ರಹ | Sonam Wangchuk

ವಿಜಯವಾಣಿ (27)
Published on

Sonam Wangchuk: ರಾಜ್ಯ ಸ್ಥಾನಮಾನಕ್ಕಾಗಿ ಲಡಾಖ್ ರಾಜಧಾನಿ ಲೇಹ್‌ನಲ್ಲಿ ನಡೆದ ಶಾಂತಿಯುತ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ನಾಲ್ವರು ಯುವಕರು ದಾರುಣ ಅಂತ್ಯ ಕಂಡರು. ಈ ಪ್ರತಿಭಟನೆಯ ಸಮಯದಲ್ಲಿ, ದೀರ್ಘಕಾಲದವರೆಗೆ ಲಡಾಖ್‌ಗೆ ಪೂರ್ಣ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಡಿದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್​ರನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಸದ್ಯ ಜೈಲಿನಲ್ಲಿರುವ ಸೋನಮ್​, ನನ್ನ ಬೇಡಿಕೆಗಳು ಈಡೇರುವವರೆಗೂ ಬಂಧನದಿಂದ ಮುಕ್ತಿ ಪಡೆಯುವುದಿಲ್ಲ ಎಂದಿದ್ದಾರೆ.

ಸೆ.25ರಂದು ಲಡಾಖ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಲೇಹ್ ಪ್ರತಿಭಟನೆಯ ವೇಳೆ ನಾಲ್ವರು ಸಾವಿಗೀಡಾದರು. ಈ ಪ್ರತಿಭಟನೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಸೋನಮ್​ರನ್ನು ಪೊಲೀಸರು ಅರೆಸ್ಟ್ ಮಾಡಿದರು. ಇದೀಗ ಕೇಸ್​ಗೆ ಸಂಬಂಧಿಸಿದಂತೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಸೋನಮ್ ವಾಂಗ್‌ಚುಕ್, ನನ್ನ ಬೇಡಿಕೆಗಳು ಈಡೇರುವವರೆಗೆ ನಾನು ಜೈಲಿನಲ್ಲಿಯೇ ಇರಲು ಸಿದ್ಧ ಎಂದು ಹೇಳಿದ್ದಾರೆ.

ಜೈಲಿನಿಂದಲೇ ತಮ್ಮ ಅನುಯಾಯಿಗಳಿಗೆ ಸಂದೇಶ ಕಳುಹಿಸಿರುವ ಸೋನಮ್​, "ಇಲ್ಲಿ ನನಗೆ ಯಾವುದೇ ತೊಂದರೆಯಿಲ್ಲ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಚೆನ್ನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದ. ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಇನ್ನೂ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net