

ಗುಜರಾತ್: ನನ್ನ ಮತ್ತು ಹೆಂಡತಿಯ ನಡುವೆ ವಿಚ್ಛೇದನಕ್ಕೆ ಕಾರಣಳಾಗಿದ್ದಾಳೆ ಎಂಬ ಕಾರಣಕ್ಕೆ ಆನ್ಲೈನ್ನಲ್ಲಿ ಬಾಂಬ್(Bomb) ತಯಾರಿಸುವುದು ಕಲಿತ ಅಳಿಯ, ಬಾಂಬ್ವೊಂದನ್ನು ತಯಾರಿಸಿ ಕೊನೆಗೆ ಅತ್ತೆಗೆ ಕಳುಹಿಸಿದ್ದಾರೆ. ಪಾರ್ಸೆಲ್ ಓಪನ್ ಮಾಡಿದ ಅತ್ತೆ ಜೊತೆಗೆ ಮತ್ತೊಬ್ಬರು ಗಾಯಗೊಂಡಿದ್ದು, ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಸಬರಮತಿ ಮೂಲದ 44 ವರ್ಷ ಹರೆಯದ ರೂಪೆನ್ ರಾವ್ ಎಂಬಾತನ್ನು ಬಂಧಿಸಲಾಗಿದೆ. ಜತೆಗೆ ಈ ಕೃತ್ಯಕ್ಕೆ ಕಾರಣನಾದ ಮತ್ತು ಮಾಸ್ಟರ್ಮೈಂಡ್ ಎಂದೇ ಗುರುತಿಸಲಾದ ರೂಪೆನ್ ರಾವ್ ಸಹಚರ ರೋಹನ್ ರಾವಲ್ ಕೂಡ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ವಿಚ್ಛೆದನಕ್ಕೆ ಕಾರಣಳಾಗಿದ್ದಾಳೆ ಅತ್ತೆಯನ್ನು ಬುದ್ಧಿ ಕಲಿಸಲು ಈ ಕೃತ್ಯ ಮಾಡಿರುವುದಾಗಿ ರೂಪೆನ್ ರಾವ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕೃತ್ಯದಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿದ್ದು, ಅನ್ಲೈನ್ನಲ್ಲಿ ಬಾಂಬ್ ಮತ್ತು ಬಂದೂಕುಗಳನ್ನು ತಯಾರಿಸುತ್ತಿದ್ದರು. ಮನೆಯಲ್ಲಿ ಕೆಲ ಬಾಂಬ್ ಮತ್ತು ಬಂದೂಕುಗಳು ದೊರೆತ್ತಿದ್ದು, ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಮತ್ತು ಬಾಂಬ್ ತಯಾರಿಕ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿಯ ಅತ್ತೆ, ತಂದೆ ಮತ್ತು ಆಕೆಯ ಸ್ನೇಹಿತ ಸುಖದಿಯಾ ಈ ಮೂವರನ್ನು ಗುರಿಯಾಸಿಕೊಂಡು ಇದೇ ಡಿ.22ರಂದು ಮನೆಗೆ ಆರೋಪಿ ರೂಪೆನ್ ರಾವ್ ಪಾರ್ಸೆಲ್ ಕಳುಹಿಸಿದ್ದಾನೆ. ಪಾರ್ಸೆಲ್ ಬಂದ ಬಳಿಕ ಅತ್ತೆ ಓಪನ್ ಮಾಡಿದ್ದಾರೆ. ಪಾರ್ಸೆಲ್ ಒಳಗೆ ಇದ್ದ ಬಾಂಬ್ ಸ್ಪೋಟಗೊಂಡಿದೆ. ಇದರ ಪರಿಣಾಮ ಅತ್ತೆ ಜತೆ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಕುಟುಂಬದವರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಬೆನ್ನತ್ತಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ,(ಏಜೆನ್ಸೀಸ್).