ಜ.2ರಂದು ಮದುವೆಯಾಗಿ ಒಂದು ವಾರದ ಹಿಂದಷ್ಟೇ ಕರ್ತವ್ಯಕ್ಕೆ ಮರಳಿದ್ದ ಯೋಧ ಕಾಶ್ಮೀರದಲ್ಲಿ ನಿಧನ

Soldier
Published on

ಮಲಪ್ಪುರಂ: ಮದುವೆಯಾಗಿ ಒಂದು ವಾರದ ಹಿಂದಷ್ಟೇ ಕರ್ತವ್ಯಕ್ಕೆ ಮರಳಿದ ಯೋಧನೊಬ್ಬ ಕಾಶ್ಮೀರದ ಲಡಾಕ್​ನಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತ ಯೋಧನನ್ನು ಕೋಲೋತ್ತೋಡಿ ನುಫೈಲ್ (27) ಎಂದು ಗುರುತಿಸಲಾಗಿದೆ. ಕೇರಳದ ಕುನಿ ಮೂಲದ ನುಫೈಲ್​, ಆರ್ಮಿ ಪೋಸ್ಟಲ್​ ಸರ್ವಿಸ್​ನಲ್ಲಿ ಸಿಪಾಯಿ ಆಗಿದ್ದರು.

ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಮಾಹಿತಿ ಸ್ವೀಕರಿಸಿದ್ದಾರೆ. ಮೃತದೇಹವನ್ನು ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ನುಫೈಲ್​ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎರಡು ವರ್ಷಗಳಿಂದ ಕಾಶ್ಮೀರದಲ್ಲಿದ್ದರು.

ಡಿಸೆಂಬರ್​ ಕೊನೆಯ ವಾರದಲ್ಲಿ ತವರಿಗೆ ಮರಳಿದ್ದರು. ಜನವರಿ 2ರಂದು ಮುಕ್ಕಮ್​ನ ಕುಲನಗರದ ನಿವಾಸಿಯನ್ನು ಮದುವೆಯಾದ ಬಳಿಕ ಜ.22ರಂದು ಕರ್ತವ್ಯಕ್ಕೆ ಮರಳಿದ್ದರು. ಕೊಯಮತ್ತೂರಿಗೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿದ್ದ ನುಫೈಲ್​, ಇದೀಗ ಅಕಾಲಿಕ ಮರಣ ಹೊಂದಿದ್ದಾರೆ.

ಗುರುವಾರ ಬೆಳಗ್ಗೆ 10.30ಕ್ಕೆ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ, ಅದೇ ದಿನ ರಾತ್ರಿ 9:30ಕ್ಕೆ ಕೊನೆಯುಸಿರೆಳೆದಿದ್ದಾರೆ. ತಾಯಿ ಅಮೀನಾ ಹಾಗೂ ಸಹೋದರಿ ಹಾಗೂ ಪತ್ನಿಯನ್ನು ಬಿಟ್ಟು ಅಗಲಿದ್ದಾರೆ. ನುಫೈಲ್​ ಅವರು ಅಸ್ಸಾಂ ಮತ್ತು ಮೇಘಾಲಯದಲ್ಲೂ ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net