ರೋಟರಿಯಿಂದ ಸಮಾಜಮುಖಿ ಕಾರ್ಯ: ಪದಪ್ರದಾನ ಸಮಾರಂಭದಲ್ಲಿ ಬಿ.ಎಂ.ಭಟ್ ಶ್ಲಾಘನೆ

rotary
ಶೇಡಿಕೊಡ್ಲು ಮಂದಾರ್ತಿಯಲ್ಲಿ ರೋಟರಿ ಕ್ಲಬ್ ಸಾಹೇಬರಕಟ್ಟೆ ಪದಪ್ರದಾನ ಕಾರ್ಯಕ್ರಮ ನಡೆಯಿತು
Published on

ಕೊಕ್ಕರ್ಣೆ: ಸಾಹೇಬರಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ವರ್ಷಗಳ ಹಿಂದೆ ಸ್ಥಾಪಿತಗೊಂಡ ರೋಟರಿ ಕ್ಲಬ್ ಹಲವು ಸಮಾಜಮುಖಿ ಕೆಲಸ ಮಾಡಿದ್ದು, ರೋಟರಿಯಿಂದ ಆಶಾ ಭಾವನೆ ಮೂಡಿಸುವಂತಾಗಿದೆ. ಮನುಕುಲದ ಸೇವೆಯೇ ರೋಟರಿ ಕಾಯಕ ಎಂಬ ಧ್ಯೇಯ ವಾಕ್ಯ ರೋಟರಿಗೆ ಪೂರಕವಾಗಿದೆ ಎಂದು ಬಿ.ಎಂ.ಭಟ್ ಹೇಳಿದರು.

ಶೇಡಿಕೊಡ್ಲು ಮಂದಾರ್ತಿಯಲ್ಲಿ ರೋಟರಿ ಕ್ಲಬ್ ಸಾಹೇಬರಕಟ್ಟೆ ಪದಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ, ವೈದ್ಯಕೀಯ ಹೀಗೆ ಸಮಾಜ ಸೇವೆ ಮೂಲಕ ಮನೆಮಾತಾಗಿರುವ ಕ್ಲಬ್ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.
ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಸಾಮಗ, ಅಲ್ವಿನ್ ಕ್ವಾಡ್ರಸ್, ರಾಜಾರಾಮ ಶೆಟ್ಟಿ, ವಿಜಯ ಶೆಟ್ಟಿ ಕಾಜ್ರಳ್ಳಿ, ನಿಕಟಪೂರ್ವ ಕಾರ್ಯದರ್ಶಿ ಗೌತಮ್ ಹೆಗ್ಡೆ, ಅಧ್ಯಕ್ಷ ರಾಮ್‌ಪ್ರಕಾಶ್, ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷೆ ಯಶಸ್ವಿನಿ ಹೆಗ್ಡೆ ಸ್ವಾಗತಿಸಿ, ವರದರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಶಾಂತ್ ಜೋಗಿ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net