ಜನಪದರ ಪಾಲ್ಗೊಳ್ಳುವಿಕೆಗೆ ಅವಕಾಶ: ಕನ್ನಡ ತೇರು ಸಮಾರಂಭ ಉದ್ಘಾಟಿಸಿ ತಾರಾನಾಥ ಎಸ್.ಬಂಗೇರ ಬಣ್ಣನೆ

janapada
ಕನ್ನಡ ತೇರು ಕಾರ್ಯಕ್ರಮವನ್ನು ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್.ಬಂಗೇರ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಜನ ಸಾಮಾನ್ಯರನ್ನು ತಲುಪುವ ಈ ಕನ್ನಡ ತೇರು ಒಂದು ಮಾದರಿ ಕಾರ್ಯಕ್ರಮ. ಜನಪದರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಗಲಿ ಎಂದು ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಎಸ್.ಬಂಗೇರ ಹೇಳಿದರು.

ಗ್ರಾಪಂ ಸಭಾಭವನದಲ್ಲಿ ಮಂಗಳವಾರ ಕನ್ನಡ ತೇರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಸಾಪ ಹೆಬ್ರಿ ತಾಲೂಕು ಘಟಕ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಸಾಹಿತ್ಯಾಸಕ್ತರಾದ ಉಪ್ಪಳ ಶೋಭಾ ಆರ್.ಕಲ್ಕೂರ್ ಜನಪದ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು.

ಪಿಡಿಒ ಸದಾಶಿವ ಸೇರ್ವೆಗಾರ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹೆಬ್ರಿ ಧನಲಕ್ಷ್ಮೀ ಸಂಜೀವಿನಿ ಒಕ್ಕೂಟ ನಂದಿನಿ, ಉಡುಪಿ ಜಿಲ್ಲಾ ಕಸಾಪ ಪದಾಧಿಕಾರಿ ನರಸಿಂಹಮೂರ್ತಿ, ಹೆಬ್ರಿ ಗ್ರಾಪಂ ಸದಸ್ಯರು, ಕಸಾಪ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯರಾದ ಪದ್ಮಾವತಿ, ಉಷಾ, ನಂದಿನಿ, ಪ್ರೀತಿ ಬಿರಾದಾರ್ ಅವರು ನಟ್ಟಿ ಗದ್ದೆ ಹಾಡು, ಭತ್ತ ಕುಟ್ಟುವ ಹಾಡು ಹಾಡಿದರು.

ಹೆಬ್ರಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ಕುಮಾರ್ ಸ್ವಾಗತಿಸಿ, ಹೆಬ್ರಿ ಗ್ರಾಪಂ ಸಿಬ್ಬಂದಿ ಪ್ರಸಾದ್ ಶೆಟ್ಟಿ ವಂದಿಸಿದರು. ಕಸಾಪ ಹೆಬ್ರಿ ತಾಲೂಕು ಘಟಕ ಗೌರವ ಕಾರ್ಯದರ್ಶಿ ಮಂಜುನಾಥ ಕೆ.ಶಿವಪುರ ಕಾರ್ಯಕ್ರಮ ನಿರೂಪಿಸಿದರು.

ಹೆಬ್ರಿ ತಾಲೂಕಿನ ಪ್ರತಿ ಗ್ರಾಪಂಗಳಲ್ಲಿ ಗ್ರಾಪಂ ಸಹಯೋಗದೊಂದಿಗೆ ಸಂಜೀವಿನಿ, ಸ್ತ್ರೀ ಶಕ್ತಿ, ಇತರ ಸ್ಥಳೀಯ ಸಂಸ್ಥೆಗಳ ಜತೆ ಸೇರಿಕೊಂಡು ನಡೆಸುವ ಗ್ರಾಮೀಣ ಪ್ರದೇಶದ ಸಾಹಿತ್ಯ ಆಸಕ್ತರಿಗೆ ಪ್ರೋತ್ಸಾಹ ನೀಡುವ ಜನಪದ ಸಾಹಿತ್ಯ ಸಂಬಂಧಿ ಸರಣಿ ಕಾರ್ಯಕ್ರಮ ಇದಾಗಿದೆ. ಸಾಹಿತ್ಯವನ್ನು ಎಲ್ಲರೂ ಪ್ರೋತ್ಸಾಹಿಸಿ.-ಮುದ್ದೂರು ಶ್ರೀನಿವಾಸ ಭಂಡಾರಿ, ಅಧ್ಯಕ್ಷ, ಕಸಾಪ ಹೆಬ್ರಿ ತಾಲೂಕು ಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net