ಕೋಟೆಕಾರ್ ಸಹಕಾರ ಸಂಘದಿಂದ ಸಮಾಜಮುಖಿ ಕೆಲಸ

Ull_Kotekar-bank
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ವಿದ್ಯಾರ್ಥಿಗಳು, ಕಷಿಕರಿಗೆ ಪ್ರೋತ್ಸಾಹ ನೀಡುವ ಜತೆ ಸಾಧಕರನ್ನು ಗುರುತಿಸಿ ಗೌರವಿಸುವ ಸವಾಜಮುಖಿ ಕೆಲಸಗಳ ಮೂಲಕ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂ ಪ್ರಸಿದ್ಧಿ ಗಳಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುವಾರ್ ಹೇಳಿದರು.

ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂದ ಸ್ಥಾಪಕಾಧ್ಯಕ್ಷ ಕೆ.ಸುಬ್ಬಣ್ಣಯ್ಯ ಹೆಸರಲ್ಲಿ ಕೋಟೆಕಾರ್ ಗ್ರಾಮದ ಬೀರಿಯಲ್ಲಿ ನಿರ್ಮಿಸಲಾಗಿರುವ ಕೆ.ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರ್ ಸಹಕಾರ ಸೌಧ ಲೋಕಾರ್ಪಣೆಗೊಳಿಸಿ ವಾತನಾಡಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಕೋಟೆಕಾರು ವ್ಯ.ಸೇ.ಸ.ಸಂ ಉತ್ತಮ ಕೆಲಸ ವಾಡುವ ಮೂಲಕ ದೇಶಕ್ಕೆ ವಾದರಿಯಾಗಿ ನಿಂತಿರುವ ಸಹಕಾರಿ ಸಂಗಳಲ್ಲಿ ಒಂದಾಗಿದೆ. ಗ್ರಾಹಕರಿಗೆ ವಿಶ್ವಾಸಭರಿತ ಸೇವೆಯನ್ನು ಯಾವುದೇ ಕುಂದುಕೊರತೆಗಳು ಬಾರದ ರೀತಿಯಲ್ಲಿ ಈ ಸಂ ನೀಡುತ್ತಿರುವುದಲ್ಲದೆ, ಎಲ್ಲರಿಗೂ ಪ್ರೇರಣೆಯಾಗುವ ರೀತಿಯಲ್ಲಿ ಅದ್ವಿತೀಯ ಸಾಧನೆ ವಾಡಿದೆ ಎಂದರು.

ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುವಾರ್, ಇಂಜಿನಿಯರ್ ಸಂತೋಷ್ ಕುವಾರ್ ಶೆಟ್ಟಿ, ಗುತ್ತಿಗೆದಾರ ಪುರುಷೋತ್ತಮ ಶೆಟ್ಟಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಕೆ.ಸುಬ್ಬಣ್ಣಯ್ಯ ಅವರ ಕುಟುಂಬದ ಸದಸ್ಯ ಗಣೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ್, ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹಾಗೂ ಉಪಾಧ್ಯಕ್ಷ ಅಬೂಸಾಲಿ ಕಿನ್ಯ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ನಾಮಫಲಕ ಅನಾವರಣ ವಾಡಿದರು. ವಿಧಾನ ಪರಿಷತ್ ವಾಜಿ ಸದಸ್ಯ ಬಿ.ಎಂ.ಫಾರೂಕ್, ಗೇರು ಅಭಿವದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ವಾರಾಟ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕಷ್ಣ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುವಾರ್ ರೈ ಬೋಳಿಯಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುವಾರ್, ಕೋಟೆಕಾರ್ ಪ.ಪಂ. ಅಧ್ಯಕ್ಷೆ ದಿವ್ಯಾ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಹರ್ಷರಾಜ್ ಮುದ್ಯ, ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನೋದ್ ಕುವಾರ್ ಸೂರಿಂಜೆ, ಗಣೇಶ್ ಭಟ್ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಉಪಾಧ್ಯಕ್ಷ ಅಬುಸಾಲಿ ಕೆ.ಬಿ., ನಿರ್ದೇಶಕರಾದ ಗಂಗಾಧರ ಉಳ್ಳಾಲ್, ಉದಯ ಕುವಾರ್ ಶೆಟ್ಟಿ, ಅರುಣ್ ಕುವಾರ್, ರಾವ ಆರ್.ಉಚ್ಚಿಲ್, ಪದ್ಮಾವತಿ ಎಸ್.ಶೆಟ್ಟಿ, ಸುರೇಖಾ ಚಂದ್ರಹಾಸ, ರಾವ ಉಚ್ಚಿಲ್, ನಾರಾಯಣ ತಲಪಾಡಿ, ಬಾಬು ನಾಯ್ಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್ ಮೊದಲಾದವರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ್ ಪ್ರಸ್ತಾವಿಸಿದರು. ಪತ್ರಕರ್ತ ಸತೀಶ್ ಪುಂಡಿಕೈ ನಿರೂಪಿಸಿದರು. ನಿರ್ದೇಶಕ ಕೆ.ಕೃಷ್ಣಪ್ಪ ಸಾಲ್ಯಾನ್ ವಂದಿಸಿದರು.

ರಾಷ್ಟ್ರೀಕತ ಬ್ಯಾಂಕ್‌ಗಳ ಸಿಬ್ಬಂದಿಗೆ ಕನ್ನಡ ಭಾಷೆ ಗೊತ್ತಿಲ್ಲ. ಅವರು ಗ್ರಾಹಕರ ಜತೆ ಸರಿಯಾಗಿ ಸ್ಪಂದಿಸದ ಕಾರಣ ಬಹಳಷ್ಟು ಮಂದಿ ಸಹಕಾರಿ ಸಂಘಗಳ ಕಡೆ ಮುಖ ಮಾಡಿದ್ದಾರೆ. ಒಂದು ಬ್ಯಾಂಕ್ ಜತೆ ಇನ್ನೊಂದು ವಿಲೀನವಾಗಿರುವ ಕಾರಣ ಪ್ರಸ್ತುತ ದಿನಗಳಲ್ಲಿ ಹಲವು ಬ್ಯಾಂಕ್‌ಗಳು ಉಳಿದಿಲ್ಲ. ಬಡವರ, ರೈತರಿಗೆ ಮಗಳ ಮದುವೆಗೆ ಸಹಾಯ ಬೇಕಾದರೆ ಒಂದೇ ದಿನದಲ್ಲಿ ಒದಗಿಸಿಕೊಡುವುದು ಸಹಕಾರಿ ಸಂಘ. ಡಾ.ಎಂ.ಎನ್.ರಾಜೇಂದ್ರ ಕುವಾರ್, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್

ಡಾ.ಎಂ.ಎನ್.ರಾಜೇಂದ್ರ ಕುವಾರ್, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್

1956ರಲ್ಲಿ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂ 1956ರಲ್ಲಿ ಕೆ.ಸುಬ್ಬಣ್ಣಯ್ಯ ಸ್ಥಾಪಿಸಿದರು. ನಮ್ಮ ವ್ಯಾಪ್ತಿಗೊಳಪಟ್ಟ 14 ಗ್ರಾಮಗಳಲ್ಲಿ ಏಳು ಶಾಖೆಗಳಿದ್ದು, 60 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 38 ಸೆಂಟ್ಸ್ ಜಾಗದ ದಾಖಲೆ ಸರಿಪಡಿಸಿ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡ ಸ್ಥಾಪಕಾಧ್ಯಕ್ಷ ಕೆ.ಸುಬ್ಬಣ್ಣಯ್ಯ ಅವರಿಗೆ ಸಮರ್ಪಿಸಲಾಗಿದೆ. ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಅಧ್ಯಕ್ಷರು, ಕೋ.ವ್ಯ.ಸೇ.ಸ.ಸಂಘ

ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಅಧ್ಯಕ್ಷರು, ಕೋ.ವ್ಯ.ಸೇ.ಸ.ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net