

ಹೆಬ್ರಿ: ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ- ಕರ್ನಾಟಕ ಜೀವನೋಪಾಯ ಅಭಿಯಾನ, ತಾಪಂ ಹೆಬ್ರಿ, ಗ್ರಾಪಂ ಹೆಬ್ರಿ ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕುಮಟ್ಟದ ಒಕ್ಕೂಟ ಹೆಬ್ರಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಾಮಾಜಿಕ ಕ್ರೋಡೀಕರಣ, ಹೆಬ್ಬೇರಿ ಸಂಜೀವಿನಿ ಮಹಿಳಾ ಚೆಂಡೆ ಬಳಗ ಹೆಬ್ರಿ ಉದ್ಘಾಟನೆ ಹಾಗೂ ಪರಿವರ್ತನಾ ಕಾರ್ಯಕ್ರಮ ಇತ್ತೀಚೆಗೆ ಹೆಬ್ರಿ ಗ್ರಾಪಂ ಸಭಾಂಗಣದಲ್ಲಿ ಜರುಗಿತು.
ಹೆಬ್ರಿ ತಾಪಂ ಯೋಜನಾಧಿಕಾರಿ ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹೆಣ್ಣಿಗೆ ಸಮಾನತೆ ಸಿಕ್ಕಿದೆ, ಇನ್ನೂ ಸಿಗಬೇಕು. ಚೆಂಡೆಯ ಬಳಗ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರು.
ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಸದಾಶಿವ್ ಸೆರ್ವೇಗಾರ್, ಚಂಡೆ ತರಬೇತುದಾರ ದಿನೇಶ್ ಪೂಜಾರಿ, ಸುಜಾತಾ ಎಸ್., ಸುಕೇತಾ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಉಡುಪಿ ಜಿಪಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನವ್ಯಾ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಸುಜಾತಾ ಕಾರ್ಯಕ್ರಮ ನಿರೂಪಿಸಿದರು. ಅಮಿತಾ ಸ್ವಾಗತಿಸಿ, ಫರೀಹಾ ಬಾನು ವಂದಿಸಿದರು.