ನಾಗಚೈತನ್ಯ ಮದುವೆ ಪ್ರಸ್ತಾಪ ಮಾಡಿದ್ದು ಗೋವಾದಲ್ಲಿ; ಅದಕ್ಕೂ ಮೊದಲು.. ಸೋಭಿತಾ ಧೂಳಿಪಾಲ ಹೇಳೀದಿಷ್ಟು.. | Sobhita Dhulipala

Untitled design - 2024-12-17T152730.949
Published on

ಮುಂಬೈ: ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ನಟಿ ಸೋಭಿತಾ ಧೂಳಿಪಾಲ( Sobhita Dhulipala) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿಸೆಂಬರ್ 4 ರಂದು ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾದರು. ಈ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಅಂದ್ಹಾಗೆ ಮದುವೆಯಾದ ಬಳಿಕ ಮೊದಲ ಬಾರಿಗೆ ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ತಮ್ಮ ಸಂಬಂಧ ಆರಂಭವಾದ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ನಾಗಾರ್ಜುನ ಅವರ ಮನೆಗೆ ಹೋಗಿದ್ದೆ. ಬಳಿಕ 2022ರಲ್ಲಿ ನಾಗ ಚೈತನ್ಯ ಅವರೊಂದಿಗೆ ಸ್ನೇಹವು ಆರಂಭವಾಯಿತು ಎಂದು ಹೇಳಿದ್ದಾರೆ. 2021ರಲ್ಲಿ ನಾಗಚೈತನ್ಯ ಅವರು ಸಮಂತಾಗೆ ವಿಚ್ಛೇದನ ನೀಡಿದ್ದಾರೆ.

ಏಪ್ರಿಲ್​​ 2022ರಲ್ಲಿ ನಾಗಾಚೈತನ್ಯ ಅವರು ಪೋಸ್ಟ್​​ ಮಾಡಿದ್ದ ಇನ್ಸ್​ಸ್ಟಾಗ್ರಾಮ್​ ಸ್ಟೋರಿಗೆ ಸೋಭಿತಾ ಧೂಳಿಪಾಲಾ ಪ್ರತಿಕ್ರಿಯಿಸಿದ್ದಾರೆ. ಅಂದಿನಿಂದ ಅವರ ಕಮ್ಯೂನಿಕೇಷನ್​ ಆರಂಭವಾಯಿತು. ಇದಾದ ನಂತರ ಮುಂಬೈನಲ್ಲಿ ಭೇಟಿಯಾದೇವು. ಬಳಿಕ ಅಮೆಜಾನ್ ಪ್ರೈಮ್ ವಿಡಿಯೋ ಈವೆಂಟ್‌ನಲ್ಲಿ ಭೇಟಿಯಾಗಿರುವುದು ನಿಮಗೆ ಗೊತ್ತೆ ಇದೆ ಎಂದು ಹೇಳಿದರು. ಅದೇ ವರ್ಷ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಕ್ಕೆ ಹೋಗಿದ್ದಾಗಿ, ಅಲ್ಲಿ ನಮ್ಮ ಭಿನ್ನಾಭಿಪ್ರಾಯಗಳು ನಿಜವಾಗಿಯೂ ನಮಗೆ ಪರಸ್ಪರ ಆಸಕ್ತಿ ಮತ್ತು ಕುತೂಹಲವನ್ನುಂಟು ಮಾಡಿದವು ಎಂದಿದ್ದಾರೆ.

ಇದಾದ ನಂತರ ಆಗಸ್ಟ್​ನಲ್ಲಿ ನಾಗ ಚೈತನ್ಯ ಗೋವಾದಲ್ಲಿ ಪ್ರವಾಸದಲ್ಲಿದ್ದಾಗ ಈ ಮದುವೆ ಪ್ರಸ್ತಾಪ ಬಂದಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರವೇ ಈ ನಿರ್ಧಾರ ಕೈಗೊಂಡೆವು. ಮರುವರ್ಷ ಚೈತು ನಮ್ಮ ಮನೆಯವರನ್ನು ಭೇಟಿಯಾದರು ಎಂದು ಹೇಳಿದರು.

ಇದೇ ಸಂದರ್ಶನದಲ್ಲಿ ನಾಗಚೈತನ್ಯ, ಚಿತ್ರರಂಗದಲ್ಲಿ ನಾವು ಅನೇಕ ಭಾಷೆಯ ಭಾಷಿಗರನ್ನು ಭೇಟಿಯಾಗುತ್ತೇವೆ. ಅವರಲ್ಲಿ ತೆಲುಗು ಭಾಷಿಗರನ್ನು ಕಂಡರೆ ನನಗೆ ತುಂಬಾ ಸಂತೋಷವಾಗುತ್ತದೆ. ಅಲ್ಲದೆ ನಾನು ಅವರೊಂದಿಗೆ ಬಹುಬೇಗನೆ ಸಂಪರ್ಕ ಸಾಧಿಸುತ್ತೇನೆ. ಅದಕ್ಕಾಗಿಯೇ ನಾನು ಸೋಭಿತಾಳನ್ನು ಭೇಟಿಯಾದಾಗ, ನಾನು ಯಾವಾಗಲೂ ನನ್ನೊಂದಿಗೆ ತೆಲುಗಿನಲ್ಲೇ ಮಾತನಾಡಲು ಕೇಳುತ್ತಿದ್ದೆ ಎಂದಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net