ಎಸ್ಸೆಸ್ಸೆಲ್ಸಿ ತಂಡ ಸ್ನೇಹ ಸ್ನೇಹ ಸಂಗಮ ವಿದ್ಯಾರ್ಥಿಗಳ ಕೊಡುಗೆ

sneha sangam
ಎಸ್ಸೆಸ್ಸೆಲ್ಸಿ ತಂಡ ಸ್ನೇಹ ಸಂಗಮದ ವಿದ್ಯಾರ್ಥಿಗಳು 1.70 ಲಕ್ಷ ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಿದ ಕಚೇರಿಯ ಒಳವಿನ್ಯಾಸವನ್ನು ನಿವೃತ್ತ ಮುಖ್ಯಶಿಕ್ಷಕಿ ಸ್ನೇಹಲತಾ ಟಿ.ಜಿ. ಉದ್ಘಾಟಿಸಿದರು
Published on

ಹೆಬ್ರಿ: ಮುನಿಯಾಲು ಕೆಪಿಎಸ್ ಶಾಲೆಯ 1994- 95ನೇ ಸಾಲಿನ ಎಸ್ಸೆಸ್ಸೆಲ್ಸಿ ತಂಡ ಸ್ನೇಹ ಸಂಗಮದ 80 ವಿದ್ಯಾರ್ಥಿಗಳು 1.70 ಲಕ್ಷ ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಿದ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರ ಕಚೇರಿ ಒಳವಿನ್ಯಾಸವನ್ನು ನಿವೃತ್ತ ಮುಖ್ಯಶಿಕ್ಷಕಿ ಸ್ನೇಹಲತಾ ಟಿ.ಜಿ. ಸೋಮವಾರ ಉದ್ಘಾಟಿಸಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಹರೀಶ್ ಪೂಜಾರಿ, ಪ್ರಾಂಶುಪಾಲೆ ಬೇಬಿ ಶೆಟ್ಟಿ, 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಂಘ ಸ್ನೇಹಸಂಗಮದ ಅಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಗೋಪಿನಾಥ ಭಟ್, ಉಪಪ್ರಾಂಶುಪಾಲ ರವೀಂದ್ರ ರಾವ್, ಸ್ನೇಹಸಂಗಮ ಉಪಾಧ್ಯಕ್ಷ ಸದಾನಂದ ಮೂಲ್ಯ, ಕಾರ್ಯದರ್ಶಿ ನಳಿನಾಕ್ಷಿ ಹೆಗ್ಡೆ, ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ, ಸದಸ್ಯರಾದ ವರಂದ ಗ್ರಾಪಂ ಸದಸ್ಯ ರತ್ನಾಕರ ಪೂಜಾರಿ, ಲಯನ್ಸ್ ಕ್ಲಬ್ ಜಿಲ್ಲಾ ಪದಾಧಿಕಾರಿ ಹೆಬ್ರಿ ಟಿ.ಜಿ.ಆಚಾರ್ಯ ಇದ್ದರು. 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸದಸ್ಯ ಪ್ರಕಾಶ್ ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net