ಸಂಸ್ಕಾರಯುತ ಬದುಕಿಗೆ ಧಾರ್ಮಿಕ ಶಿಕ್ಷಣ : ಜ್ಞಾನ ಭಾರತ್ ಅಧ್ಯಕ್ಷ ದಿನೇಶ್ ಎಂ.ಕೊಡವೂರ್

parents meeting
ಜ್ಞಾನ ಭಾರತ್ ಬಾಲ ಸಂಸ್ಕಾರ ಪಾಲಕರ ಸಭೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಪಠ್ಯದ ಜತೆಗೆ ಧಾರ್ಮಿಕ ಶಿಕ್ಷಣ ನೀಡುವ ಕೆಲಸದಲ್ಲಿ ನಮ್ಮ ಪಾಲಕರು ತೊಡಗಬೇಕು ಎಂದು ಜ್ಞಾನ ಭಾರತ್ ಅಧ್ಯಕ್ಷ ದಿನೇಶ್ ಎಂ.ಕೊಡವೂರ್ ಹೇಳಿದರು. ಗಣಿತ ನಗರದ ಜ್ಞಾನಸುಧಾ ಆವರಣದಲ್ಲಿ ಜ್ಞಾನ ಭಾರತ್ ಬಾಲ ಸಂಸ್ಕಾರ ಪಾಲಕರ ಸಭೆ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.

ಪಠ್ಯ ಶಿಕ್ಷಣ ಮಕ್ಕಳ ಮುಂದಿನ ಜೀವನದಲ್ಲಿ ಉದ್ಯೋಗಕಷ್ಟೇ ಸೀಮಿತವಾದರೆ, ಧಾರ್ಮಿಕ ಶಿಕ್ಷಣ ಅವರ ಸಂಸ್ಕಾರಯುತ ಬದುಕಿಗೆ ಪೂರಕವಾಗಿ ಜೀವನದ ಕಷ್ಟನಷ್ಟಗಳನ್ನು ಎದುರಿಸುವ ಶಕ್ತಿ ನೀಡುತ್ತದೆ. ಇಂದಿನ ಜನಾಂಗಕ್ಕೆ ನಮ್ಮ ಧರ್ಮದ ಆಚಾರ, ವಿಚಾರಗಳನ್ನು ತಿಳಿಸಿ, ನಿತ್ಯ ಜೀವನದಲ್ಲಿ ಅನುಷ್ಠಾನಗೊಳಿಸುವ ಕಾರ್ಯ ನಡೆಯಬೇಕಿದೆ. ಈ ದೆಸೆಯಲ್ಲಿ ಜ್ಞಾನಭಾರತ್ ವೃಂದ ಬಾಲ ಸಂಸ್ಕಾರ ಕಾರ್ಯ ಪ್ರವೃತ್ತವಾಗಿದೆ ಎಂದರು.

ನಿವೃತ್ತ ಶಿಕ್ಷಕಿ ಪೂರ್ಣಿಮಾ ಪೈ, ಸಂಚಾಲಕ ಸುಮಿತ್ ಇ., ಕಾರ್ಯದರ್ಶಿ ಸಂಗೀತಾ ಕುಲಾಲ್, ಸದಸ್ಯರಾದ ಉಷಾ ರಾವ್ ಯು., ವಾಣಿ ಕೆ., ಶೈಲೇಶ್ ಶೆಟ್ಟಿ, ರಾಜ್‌ಕಿರಣ್, ಗಾಯತ್ರಿ, ಚೇತನಾ, ಸಂತೋಷ್, ಲಕ್ಷ್ಮೀ, ಅಕ್ಷತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net