ಒಂದು ವೇಳೆ ಹಾವಿನ ಮರಿ ಕಚ್ಚಿದರೆ ಅಪಾಯ ಕಡಿಮೆಯೇ? ಇಲ್ಲಿದೆ ಉರಗ ತಜ್ಞನ ಅಚ್ಚರಿ ಉತ್ತರ! Snake Bite

Snake Bite
Published on

Snake Bite : ನಮ್ಮ ದೇಶದಲ್ಲಿ ಯಾವ ಹಾವು ಅತ್ಯಂತ ಅಪಾಯಕಾರಿ ಎಂಬ ಪ್ರಶ್ನೆಗೆ ಒಂದೇ ಒಂದು ಉತ್ತರವಿದೆ. ಅದು ರಸೆಲ್ಸ್ ವೈಪರ್ ( ಕೊಳಕು ಮಂಡಲ ಹಾವು). ಈ ಹಾವು ಕಚ್ಚಿದರೆ ಸಾವಿನ ಸಾಧ್ಯತೆ ತುಂಬಾ ಹೆಚ್ಚು. ಅದಕ್ಕೆ ಕಾರಣ ಈ ಹಾವು ತುಂಬಾನೇ ವಿಷಕಾರಿ.

ಅಂದಹಾಗೆ, ಕೊಳಕು ಮಂಡಲದ ಮರಿ ಕಚ್ಚಿದರೆ ದೊಡ್ಡ ಅಪಾಯವಿರುವುದಿಲ್ಲ ಎಂಬ ಸಾಮಾನ್ಯ ನಂಬಿಕೆ ಜನರಲ್ಲಿದೆ. ಯಾವುದೇ ಹಾವಿನ ಮರಿಯಾಗಿರಲಿ ಅದು ಕಚ್ಚಿದರೆ ಅಪಾಯದ ಪ್ರಮಾಣ ಕಡಿಮೆ ಅನ್ನೋ ನಂಬಿಕೆ ಇದೆ. ಕೆಲವರಲ್ಲಿ ಈ ಕುರಿತ ಸಂದೇಹವೂ ಇದೆ. ಈ ಬಗ್ಗೆ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಮಾತನಾಡಿದ್ದು, ತಮ್ಮ ಸ್ವಂತ ಅನುಭವದೊಂದಿಗೆ ವಿವರಿಸಿದ್ದಾರೆ.

ಸಣ್ಣ ಹಾವು ಕಚ್ಚಿದರೆ ಯಾವುದೇ ದೊಡ್ಡ ತೊಂದರೆಗಳು ಉಂಟಾಗುವುದಿಲ್ಲ ಎಂದು ಜನರು ಹೆಚ್ಚಾಗಿ ಹೇಳುತ್ತಾರೆ. ಆದರೆ, ನಾವು ವಿಡಿಯೋ ಮಾಡುವಾಗ ಸಣ್ಣ ಹಾವಿಗೂ ಸಹ ವಿಶೇಷ ಕಾಳಜಿ ವಹಿಸಬೇಕು ಎಂದು ವಾವಾ ಸುರೇಶ್​ ನಿರ್ದಿಷ್ಟವಾಗಿ ಹೇಳುತ್ತಾರೆ.

ಇದು ಏಳೆಂಟು ವರ್ಷಗಳ ಹಿಂದೆ ನಡೆದ ಘಟನೆ. ಸಣ್ಣ ಹಾವು ಕಚ್ಚಿದ ಪರಿಣಾಮ ನಾನು 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ನನ್ನ ಕೈಗೆ ಹಾವು ಕಚ್ಚಿದ ಸಮಯದಲ್ಲಿ ಅದಕ್ಕೆ ಕೇವಲ ಮೂರು ಅಥವಾ ನಾಲ್ಕು ದಿನಗಳ ವಯಸ್ಸಾಗಿತ್ತು. ಅದರಿಂದಾಗಿ, ನಾನು ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ 15 ದಿನಗಳನ್ನು ಚಿಕಿತ್ಸೆಯಲ್ಲಿ ಕಳೆದೆ. ನನ್ನ ಸ್ವಂತ ಅನುಭವದಲ್ಲಿ ಹೇಳುವುದಾದರೆ, ಸಣ್ಣ ವೈಪರ್ ಕಡಿತವೂ ಅಪಾಯಕಾರಿ ಎಂದು ವಾವಾ ಸುರೇಶ್​ ಹೇಳಿದ್ದಾರೆ.

ಕರೊನಾ ಅವಧಿಯಲ್ಲಿ, ಆಯೂರ್‌ನ ಒಂದು ಮನೆಯಲ್ಲಿ ಗ್ಯಾಸ್ ಸಿಲಿಂಡರ್‌ನ ಕೆಳಭಾಗದಲ್ಲಿರುವ ಉಂಗುರದಲ್ಲಿ ಹಾವು ಇತ್ತು. ಈ ರೀತಿಯ ಅನೇಕ ಘಟನೆಗಳು ನಡೆದಿವೆ. ಗ್ಯಾಸ್ ತರುವಾಗ, ಯಾರೂ ಕೂಡ ಅದರ ಹಿಂದೆ ಕೈ ಹಾಕುವುದಿಲ್ಲ. ಆದ್ದರಿಂದ, ಗ್ಯಾಸ್ ತರುವಾಗ, ಯಾವಾಗಲೂ ಜಾಗರೂಕರಾಗಿರಿ ಮತ್ತು ಅದನ್ನು ಪರೀಕ್ಷಿಸಿ ಒಳಗೆ ತನ್ನಿ ಎಂದು ವಾವಾ ಸುರೇಶ್​ ಸಲಹೆ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net