

Dirty Cholesterol : ನಮ್ಮ ಸಣ್ಣ ಆಹಾರ ಪದ್ಧತಿಗಳು ನಮ್ಮ ಹೃದಯಕ್ಕೆ ದೊಡ್ಡ ಸಮಸ್ಯೆಯಾಗಬಹುದು ಎಂದು ನೀವು ಎಂದಾದರು ಯೋಚನೆ ಮಾಡಿದ್ದೀರಾ? ಹೌದು, ನಾವು ಹೇಳುತ್ತಿರುವುದು ಅಕ್ಷರಶಃ ನಿಜ! ಸರಿಯಾದ ತಿಳುವಳಿಕೆ ಕೊರತೆಯಿಂದಾಗಿ, ನಾವು ಬೆಳಗಿನ ಉಪಾಹಾರದಿಂದ ರಾತ್ರಿಯ ಊಟದವರೆಗೂ ನಾವು ಸೇವಿಸುವ ಆಹಾರದಲ್ಲಿ "ಕೆಟ್ಟ ಕೊಲೆಸ್ಟ್ರಾಲ್" (LDL) ಮಟ್ಟವನ್ನು ನಮಗೆ ಗೊತ್ತಿಲ್ಲದಂತೆಯೇ ಹೆಚ್ಚಿಸುತ್ತೇವೆ.
ಅಂದಹಾಗೆ, ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ, ನಮ್ಮ ಯಾವ ಆಹಾರ ಅಭ್ಯಾಸಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಹಾನಿ ಮಾಡುತ್ತವೆ ಮತ್ತು ಅವುಗಳನ್ನು ಸರಿಪಡಿಸುವುದು ಹೇಗೆ ಎಂಬುದನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.
ಅಂದಹಾಗೆ, ಕೊಲೆಸ್ಟ್ರಾಲ್ ಅನ್ನೋದು ಕೆಟ್ಟ ಅಂಶವೇನಲ್ಲ. ಇದು ನಮ್ಮ ದೇಹಕ್ಕೆ ತುಂಬಾ ಅತ್ಯಗತ್ಯ. ಆದರೆ, ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊಲೆಸ್ಟ್ರಾಲ್ ಹೆಚ್ಚಾದರೆ ಅದು "ಕೊಳಕು ಕೊಲೆಸ್ಟ್ರಾಲ್" ಆಗುತ್ತದೆ. ಇದಕ್ಕೆ ಕಾರಣವಾಗುವ 5 ಸಾಮಾನ್ಯ ಆಹಾರ ಪದ್ಧತಿಗಳನ್ನು ನಾವೆಲ್ಲರೂ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.
ಪ್ಯಾಕ್ ಮಾಡಿದ ತಿಂಡಿಗಳು ಮತ್ತು ಡೀಪ್-ಫ್ರೈಡ್ ಆಹಾರಗಳು ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಅಧಿಕವಾಗಿರುತ್ತವೆ. ಇವು ನೇರವಾಗಿ LDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ ಮತ್ತು ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತವೆ. ಹೀಗಾಗಿ ಈ ಅಭ್ಯಾಸವನ್ನು ನಾವು ಸಂಪೂರ್ಣವಾಗಿ ಕಡಿಮೆ ಮಾಡಬೇಕು. ಬಿಟ್ಟುಬಿಟ್ಟರೆ ಇನ್ನೂ ಒಳ್ಳೆಯದು.
ನಿಮ್ಮ ಆಹಾರದಲ್ಲಿ ಸಾಕಷ್ಟು ಫೈಬರ್ ಇಲ್ಲದಿರುವುದು ಅಧಿಕ ಕೊಲೆಸ್ಟ್ರಾಲ್‌ಗೆ ಮತ್ತೊಂದು ಕಾರಣವಾಗಿದೆ. ಓಟ್ಸ್, ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಂತಹ ಫೈಬರ್ ಭರಿತ ಆಹಾರಗಳು ದೇಹವು LDL ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ನೀವು ಬಹಳಷ್ಟು ಹಿಟ್ಟು ಮತ್ತು ಪಾಲಿಶ್ ಮಾಡಿದ ಅಕ್ಕಿಯನ್ನು ಸೇವಿಸಿದರೆ, ನಿಮಗೆ ಫೈಬರ್ ಕೊರತೆಯಿರಬಹುದು.
ಸಿಹಿತಿಂಡಿಗಳು, ಸಿಹಿ ಪಾನೀಯಗಳು ಅಥವಾ ಸಕ್ಕರೆ ತಂಪು ಪಾನೀಯಗಳು, ಪ್ಯಾಕ್ ಮಾಡಿದ ರಸಗಳು ಮತ್ತು ಸಿಹಿತಿಂಡಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಟ್ರೈಗ್ಲಿಸರೈಡ್‌ಗಳ ಮಟ್ಟ ಹೆಚ್ಚಾಗುತ್ತದೆ. ಇವು ಹೃದಯದ ಆರೋಗ್ಯಕ್ಕೂ ಹಾನಿಕಾರಕ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತವೆ.
ಕೆಂಪು ಮಾಂಸ, ಗೋಮಾಂಸ ಮತ್ತು ಹಂದಿಮಾಂಸ ಹಾಗೂ ಡೈರಿ ಉತ್ಪನ್ನಗಳನ್ನು (ಪೂರ್ಣ ಕೊಬ್ಬಿನ ಹಾಲು, ಬೆಣ್ಣೆ, ಚೀಸ್) ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಸ್ಯಾಚುರೇಟೆಡ್ ಕೊಬ್ಬುಗಳು ಹೆಚ್ಚಾಗಿರುತ್ತವೆ. ಇವುಗಳನ್ನು ಹೆಚ್ಚು ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಚರ್ಮರಹಿತ ಅಥವಾ ಸ್ಕಿನ್ಲೆಸ್ ಕೋಳಿ ಅಥವಾ ಮೀನುಗಳಂತಹ ಕಡಿಮೆ ಕೊಬ್ಬಿನ ಪ್ರೋಟೀನ್‌ಗಳನ್ನು ಆಯ್ಕೆ ಮಾಡುವುದು ಉತ್ತಮ.
ಕೊಬ್ಬು ಎಂದರೆ ಅದನ್ನು ಸಂಪೂರ್ಣವಾಗಿ ತಪ್ಪಿಸುವುದು ಎಂದರ್ಥವಲ್ಲ. ಒಮೆಗಾ-3 ಕೊಬ್ಬಿನಾಮ್ಲಗಳಂತಹ ಉತ್ತಮ ಕೊಬ್ಬನ್ನು (ಏಕಅಪರ್ಯಾಪ್ತ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು) ಸೇವಿಸುವುದರಿಂದ LDL ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು HDL (ಉತ್ತಮ ಕೊಲೆಸ್ಟ್ರಾಲ್) ಹೆಚ್ಚಾಗುತ್ತದೆ. ಇದಕ್ಕಾಗಿ ನೀವು ಆಲಿವ್ ಎಣ್ಣೆ, ಬೀಜಗಳು, ಅಗಸೆ ಬೀಜಗಳು ಮತ್ತು ಮೀನುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
ಅಂದಹಾಗೆ, ನಿಮ್ಮ ಆಹಾರ ಪದ್ಧತಿಯಲ್ಲಿನ ಸಣ್ಣ ಬದಲಾವಣೆಗಳು ನಿಮ್ಮ ಹೃದಯದ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸಬಹುದು. ಸಂಸ್ಕರಿಸಿದ ಆಹಾರಗಳಿಗಿಂತ ಸಂಪೂರ್ಣ ಆಹಾರಗಳು, ಫೈಬರ್-ಭರಿತ ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಕೊಬ್ಬನ್ನು ಆರಿಸುವ ಮೂಲಕ, ನೀವು ನಿಮ್ಮ "ಕೆಟ್ಟ ಕೊಲೆಸ್ಟ್ರಾಲ್" ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಈ ಬದಲಾವಣೆಗಳು ನಿಮ್ಮ ಕೊಲೆಸ್ಟ್ರಾಲ್‌ಗೆ ಮಾತ್ರವಲ್ಲ, ನಿಮ್ಮ ಒಟ್ಟಾರೆ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ.
ಗಮನಿಸಿ: ನಿಮ್ಮ ಕುಟುಂಬದಲ್ಲಿ ನಿಮಗೆ ಕೊಲೆಸ್ಟ್ರಾಲ್ ಸಮಸ್ಯೆ ಅಥವಾ ಹೃದಯ ಸಮಸ್ಯೆಗಳ ಇತಿಹಾಸವಿದ್ದರೆ, ಸರಿಯಾದ ಆಹಾರ ಮಾರ್ಗಸೂಚಿಗಳು ಮತ್ತು ಚಿಕಿತ್ಸೆಗಾಗಿ ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ.