ನೀವೇಕೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ? ನಟಿ ಶ್ರದ್ಧಾ ಶ್ರೀನಾಥ್ ಕೊಟ್ಟ ಖಡಕ್​ ಉತ್ತರವಿದು...Shraddha Srinath

Shraddha Srinath
Published on

Shraddha Srinath : ಶ್ರದ್ಧಾ ಶ್ರೀನಾಥ್ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ವಿಶೇಷ ಮನ್ನಣೆ ಗಳಿಸಿದ ಜನಪ್ರಿಯ ನಾಯಕಿ. ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಬೆಡಗಿ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು. ಆದರೆ, ಈಗ ಅವಕಾಶಗಳ ಕೊರೆತೆಯಿಂದಾನೋ ಏನೋ ವಿರಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಶ್ರದ್ಧಾ ಅವರ ಮೊದಲ ವೆಬ್ ಸರಣಿ 'ದಿ ಗೇಮ್: ಯು ನೆವರ್ ಪ್ಲೇ ಅಲೋನ್ ವೆಬ್ ಸರಣಿ' ಬಿಡುಗಡೆಯಾಗಿದೆ. ಸಂತೋಷ್ ಪ್ರತಾಪ್ ನಟಿಸಿರುವ ಈ ವೆಬ್ ಸರಣಿಯನ್ನು ರಾಜೇಶ್ ಎಂ. ಸೆಲ್ವಾ ನಿರ್ದೇಶಿಸಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

ವೆಬ್ ಸರಣಿ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಶ್ರದ್ಧಾ ಶ್ರೀನಾಥ್, ಈ ಸರಣಿಯಲ್ಲಿ ನಾನು ಮತ್ತು ಸಂತೋಷ್ ಪ್ರತಾಪ್ ಗೇಮ್ ಡೆವಲಪರ್‌ಗಳ ಪಾತ್ರವನ್ನು ನಿರ್ವಹಿಸಿದ್ದೇವೆ. ಡೆವಲಪರ್‌ಗಳಾಗಿ ಸಾಮಾಜಿಕ ಜಾಲತಾಣ ತಮಗೆ ಹೇಗೆ ನೋವುಂಟು ಮಾಡಿದೆ? ತಮ್ಮ ಸುತ್ತಲಿನವರನ್ನು ಸಮಸ್ಯೆಗಳ ಚಕ್ರದಲ್ಲಿ ಸಿಲುಕಿಸಿದ್ದು ಹೇಗೆ? ಮುಂತಾದ ಆಸಕ್ತಿದಾಯಕ ವಿಷಯಗಳೊಂದಿಗೆ 'ದಿ ಗೇಮ್' ವೆಬ್ ಸರಣಿಯನ್ನು ಮಾಡಲಾಗಿದೆ ಎಂದು ಶ್ರದ್ಧಾ ಹೇಳಿದರು. ಒಟ್ಟು 7 ಎಪಿಸೋಡ್​ಗಳ ಈ ಸರಣಿಗಾಗಿ ಇಡೀ ಸಿನಿಮಾ ಘಟಕವು ತುಂಬಾ ಶ್ರಮಿಸಿದೆ ಎಂದು ಹೇಳಿದರು.

ಇನ್ನು ಹೆಚ್ಚು ಔಪಚಾರಿಕ ಪಾತ್ರಗಳಲ್ಲಿ ನಟಿಸಲು ಮುಖ್ಯ ಕಾರಣವೇನೆಂದರೆ, ಪ್ರೇಕ್ಷಕರು ಅವರನ್ನು ಅಂತಹ ಪಾತ್ರಗಳಲ್ಲಿ ನೋಡಲು ಬಯಸುತ್ತಾರೆ ಎಂದರು. ಪ್ರೀತಿ ಮತ್ತು ಪ್ರಣಯದ ಜೊತೆಗೆ, ಸಾಹಸ, ಥ್ರಿಲ್ಲರ್ ಮತ್ತು ಸೀಕ್ರೆಟ್ ಏಜೆಂಟ್ ನಂತಹ ಆಕ್ಷನ್ ಕಥೆಗಳಲ್ಲಿ ನಟಿಸುವ ಆಶಯವನ್ನು ವ್ಯಕ್ತಪಡಿಸಿದರು.

ಕೆಲವರು ನೀವೇಕೆ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ ಎಂದು ಕೇಳುತ್ತಾರೆ. ಹೆಚ್ಚು ಚಲನಚಿತ್ರಗಳಲ್ಲಿ ನಟಿಸುವುದು ನನ್ನ ಗುರಿಯಲ್ಲ. ಕಡಿಮೆ ಸಿನಿಮಾಗಳನ್ನು ಮಾಡಿದರೂ, ಅವುಗಳಲ್ಲಿ ಚೆನ್ನಾಗಿ ನಟಿಸುವುದು ಮತ್ತು ಅಭಿಮಾನಿಗಳನ್ನು ರಂಜಿಸುವುದು ನನಗೆ ತುಂಬಾ ಮುಖ್ಯ ಎಂದು ಶ್ರದ್ಧಾ ಶ್ರೀನಾಥ್​ ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net