ಚೆನ್ನಾಗಿ ನಿದ್ರೆ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ!

sleep
Published on

ಬೆಂಗಳೂರು: 8 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡುವುದರಿಂದಲೂ ಅನೇಕ ಪ್ರಯೋಜನಗಳಿವೆ. ಆದರೆ ಬಹುತೇಕರಿಗೆ ಈ ವಿಷಯ ತಿಳಿದಿಲ್ಲ. ಹಾಗಾದರೆ ನಿದ್ರೆ ಮಾಡುವುದರಿಂದ ಏನೆಲ್ಲಾ ಅನುಕೂಲಗಳಿವೆ ? ನೋಡೋಣ ಬನ್ನಿ...

ನಿದ್ರೆಯಿಂದ ರಕ್ತ, ಮಾಂಸಖಂಡಗಳ ವೃದ್ಧಿಯಾಗುತ್ತದೆ. ಗಾಯಗಳಾಗಿದ್ದಲ್ಲಿ ಬೇಗನೇ ಮಾಯುತ್ತವೆ. ದಿನಕ್ಕೆ ಕನಿಷ್ಠ ೬-೮ ಗಂಟೆ ಕಾಲ ನಿದ್ರಿಸುವುದರ ಪರಿಣಾಮ ಮೃತಜೀವಕೋಶಗಳನ್ನು ಹೊರಹಾಕುವ ಹಾಗೂ ಹೊಸ ತ್ವಚೆಯ ಕೋಶಗಳ ರಚನೆಯ ಪ್ರಕ್ರಿಯೆ ನಡೆಯುತ್ತದೆ. ಈ ಸಮಯದಲ್ಲಿ ಮಿದುಳಿನಲ್ಲಿ ಡೆಲ್ಟಾ ವಿದ್ಯುತ್ ತರಂಗಗಳು ಬಿಡುಗಡೆಯಾಗುತ್ತವೆ. ಇದರಿಂದ ತನುಮನಕ್ಕೆ ಶಾಂತಿಯ ಭಾವನೆ ದೊರೆಯುತ್ತದೆ. ಶರೀರದಿಂದ ಅನವಶ್ಯಕ ಉಷ್ಣತೆ ದೂರವಾಗಿ ಸಮತೋಲನವಿರುತ್ತದೆ. ಹೆಚ್ಚಿನ ರಕ್ತದೊತ್ತಡ ಕುಗ್ಗಿ ಸರಿಯಾದ ಸ್ಥಿತಿಗೆ ಬರುತ್ತದೆ. ಒಟ್ಟಿನಲ್ಲಿ ದೇಹದ ಪ್ರತಿಯೊಂದು ಅಂಗಕ್ಕೂ ಹೊಸ ಚೈತನ್ಯ ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net