ಆರೋಗ್ಯಕ್ಕೆ ಪ್ರಯೋಜನಕಾರಿಯಾದ ದಾಳಿಂಬೆ ಲಸ್ಸಿ ಮಾಡೋದು ಬಹಳ ಸಿಂಪಲ್

juice 2
Published on

ಬೆಂಗಳೂರು: ದಾಳಿಂಬೆಯು ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ವಿಧಗಳಲ್ಲಿ ನಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ. ಇನ್ನು ಸದಾ ದಾಳಿಂಬೆ ಹಣ್ಣು ಸೇವಿಸುವುದಕ್ಕೆ ಬೋರಾಗಿದ್ದರೆ ನೀವು ಅದನ್ನು ಲಸ್ಸಿ ಮಾಡಿಕೊಂಡು ಕೂಡ ಸೇವಿಸಬಹುದು. ಹೇಗೆ ಅಂತೀರಾ, ಇಲ್ಲಿದೆ ನೋಡಿ ಮಾಹಿತಿ.

ಬೇಕಾಗುವ ಪದಾರ್ಥಗಳು:
500 ಗ್ರಾಂ ತಾಜಾ ಮೊಸರು
ಎರಡು ಗ್ಲಾಸ್ ದಾಳಿಂಬೆ ರಸ
ಗುಲಾಬಿ ಎಲೆಗಳು
ಐಸ್
ಒಂದು ಬೌಲ್ ಸಕ್ಕರೆ

ತಯಾರಿಸುವ ವಿಧಾನ
ಮೊದಲು, ದಾಳಿಂಬೆ ರಸ, ಮೊಸರು, ಸಕ್ಕರೆ ಮತ್ತು ಐಸ್ ಅನ್ನು ಮಿಕ್ಸಿಗೆ ಹಾಕಿ. ಆ ನಂತರ ಚೆನ್ನಾಗಿ ಬೀಟ್ ಮಾಡಿ. ಈಗ ಗುಲಾಬಿ ದಳಗಳಿಂದ ಅಲಂಕರಿಸಿ, ರುಚಿ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net