More

    ರಾಪಿಡ್​ ಎಟಿ ಬುಕ್ಕಿಂಗ್ ಆರಂಭಿಸಿದೆ ಸ್ಕೋಡಾ ಆಟೋ ಇಂಡಿಯಾ

    ನವದೆಹಲಿ: ಸೇಡಾನ್ ರಾಪಿಡ್ ಎಟಿ(ಆಟೋಮ್ಯಾಟಿಕ್​)ನ ಬುಕ್ಕಿಂಗ್​ ಅನ್ನು ಆರಂಭಿಸಿರುವುದಾಗಿ ಸ್ಕೋಡಾ ಆಟೋ ಇಂಡಿಯಾ ಗುರುವಾರ ತಿಳಿಸಿದೆ. ದೇಶಾದ್ಯಂತ ಇರುವ ಸ್ಕೋಡಾದ ಅಧಿಕೃತ ಡೀಲರ್​ಶಿಪ್​ಗೆ ಭೇಟಿ ನೀಡಿ ಗ್ರಾಹಕರು ಸೇಡಾನ್​ ರಾಪಿಡ್ ಎಟಿಯನ್ನು ಮುಂಗಡ ಕಾಯ್ದಿರಿಸಬಹುದು. ಈಗ ಮುಂಗಡ ಕಾಯ್ದಿರಿಸುವ ಕಾರುಗಳನ್ನು ಸೆಪ್ಟೆಂಬರ್​ 18ರಿಂದ ಡೆಲಿವರಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

    ರಾಪಿಡ್ ಎಟಿ ಬುಕ್ಕಿಂಗ್ ಮಾಡುವುದಕ್ಕೆ ಗ್ರಾಹಕರು 25,000 ರೂಪಾಯಿ ಪಾವತಿಸಬೇಕಾಗುತ್ತದೆ. ಇದು ರಿಫಂಡೆಬಲ್​ ಮೊತ್ತ ಎಂಬುದನ್ನೂ ಕಂಪನಿ ಸ್ಪಷ್ಟಪಡಿಸಿದೆ. ಆದರೆ, ರಾಪಿಡ್ ಎಟಿಯ ದರ ಎಷ್ಟು ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

    ಇದನ್ನೂ ಓದಿ: ಸತತ ಐದನೇ ದಿನವೂ ಏರಿಕೆಯಲ್ಲೇ ಮುಂದುವರಿದ ಷೇರುಪೇಟೆ

    ಹೊಸ ರಾಪಿಡ್ ಎಟಿಯು ಬ್ರ್ಯಾಂಡ್​ನ ಅತ್ಯುತ್ತಮ ಕಾರಾಗಿದ್ದು, ಉತ್ತಮ ವಿನ್ಯಾಸ, ಸರಿಸಾಟಿ ಇಲ್ಲದ ಕಾರ್ಯಕ್ಷಮತೆ, ಹಣಕ್ಕೆ ತಕ್ಕ ವಾಹನವಾಗಿ ಸುಧಾರಿತ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ ಎಂದು ಕಂಪನಿಯ ಬ್ರ್ಯಾಂಡ್ ಡೈರೆಕ್ಟರ್​ ಝಾಕ್ ಹೋಲಿಸ್ ತಿಳಿಸಿದ್ದಾರೆ. (ಪಿಟಿಐ)

    ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts