More

    ಸತತ ಐದನೇ ದಿನವೂ ಏರಿಕೆಯಲ್ಲೇ ಮುಂದುವರಿದ ಷೇರುಪೇಟೆ

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿಗಳು ಸತತ ಐದನೇ ದಿನವೂ ಏರಿಕೆಯನ್ನೇ ದಾಖಲಿಸಿ ದಿನದ ವಹಿವಾಟು ಕೊನೆಗೊಳಿಸಿದೆ.

    ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್​ 39,326.98ರ ಗರಿಷ್ಠ ಮಟ್ಟ ತಲುಪಿತ್ತು. ಕೊನೆಯ ಕ್ಷಣದ ಮಾರಾಟ ಒತ್ತಡದಿಂದಾಗಿ ಕೊಂಚ ಇಳಿಕೆಯನ್ನು ದಾಖಲಿಸಿದರೂ 39.55 ಅಂಶ (0.10%) ಏರಿಕೆಯೊಂದಿಗೆ 39,113.47ರಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ ಕೂಡ ದಿನದ ವಹಿವಾಟಿ ಅಂತ್ಯಕ್ಕೆ 9.65 ಅಂಶ (0.08%) ಏರಿಕೆಯೊಂದಿಗೆ 11,559.25ರಲ್ಲಿ ವಹಿವಾಟು ಕೊನೆಗೊಳಿಸಿದೆ.

    ಇದನ್ನೂ ಓದಿ: ಖುಷಿಗಾಗಿ ಕಡಲತೀರಕ್ಕೆ ಬಂದ ದಂಪತಿ ಬದುಕಲ್ಲಿ ಬಿರುಗಾಳಿ, ಪತ್ನಿ ಕಣ್ಣೆದುರಲ್ಲೇ ಪತಿ ಸಾವು

    ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್​ ಇಂಡ್ ಬ್ಯಾಂಕ್ ಟಾಪ್ ಗೇನರ್ ಆಗಿದ್ದು, ಶೇಕಡ 6ಕ್ಕೂ ಹೆಚ್ಚು ಲಾಭಾಂಶ ದಾಖಲಿಸಿದೆ. ಇದರ ಬೆನ್ನಿಗೆ ಎಂಆ್ಯಂಡ್ಎಂ, ಎಸ್​ಬಿಐ, ಎಚ್​ಡಿಎಫ್​ಸಿ, ಏಕ್ಸಿಸ್​ ಬ್ಯಾಂಕ್​, ಸನ್​ ಫಾರ್ಮಾ, ಮಾರುತಿಯ ಷೇರುಗಳು ಲಾಭಾಂಶ ಗಳಿಸಿದ್ದವು. ಇನ್ನೊಂದೆಡೆ, ಒಎನ್​ಜಿಸಿ, ಬಜಾಜ್ ಆಟೋ, ಆರ್​ಐಎಲ್​, ಕೊಟಾಕ್ ಬ್ಯಾಂಕ್​, ಅಲ್ಟ್ರಾಟೆಕ್​ ಸಿಮೆಂಟ್ ಷೇರುಗಳು ನಷ್ಟ ಅನುಭವಿಸಿವೆ. ​(ಏಜೆನ್ಸೀಸ್)

    ಕರೋನಾ ಸೋಂಕು ಆಗಸ್ಟ್​ ಅಲ್ಲ ಸೆಪ್ಟಂಬರ್​ಗೂ ಮುಗಿಯಲ್ವಂತೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts