ಖುಷಿಗಾಗಿ ಕಡಲತೀರಕ್ಕೆ ಬಂದ ದಂಪತಿ ಬದುಕಲ್ಲಿ ಬಿರುಗಾಳಿ, ಪತ್ನಿ ಕಣ್ಣೆದುರಲ್ಲೇ ಪತಿ ಸಾವು

death
Published on

ಉತ್ತರಕನ್ನಡ: ಗೋಕರ್ಣದ ಮುಖ್ಯ ಕಡಲತೀರದಲ್ಲಿ ಪತ್ನಿಯ ಕಣ್ಣೆದುರಲ್ಲೇ ಪತಿ ದುರ್ಮರಣಕ್ಕೀಡಾದ ಘಟನೆ ಗುರುವಾರ ಸಂಭವಿಸಿದೆ.

ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ನಿವಾಸಿ ಅರವಿಂದ ಪಾಂಡುರಂಗ ಶೆಣೈ (45) ಮೃತ ದುರ್ದೈವಿ. ಅರವಿಂದ ತನ್ನ ಪತ್ನಿಯೊಂದಗೆ ಗೋಕರ್ಣಕ್ಕೆ ಬಂದಿದ್ದರು. ದೇವರ ದರ್ಶನ ಪಡೆದ ಬಳಿಕ ಅವರಿಬ್ಬರೂ ಕಡಲತೀರಕ್ಕೆ ಹೋಗಿದ್ದರು. ಇದನ್ನೂ ಓದಿರಿ ಸ್ನೇಹಿತನ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ನಾಲ್ವರಲ್ಲಿ ಇಬ್ಬರು ದಾರಿಯಲ್ಲೇ ಹೆಣವಾದರು!

ಗೋಕರ್ಣದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಲೇ ದಂಪತಿ ಇಬ್ಬರೂ ಖುಷಿಖುಷಿಯಾಗೇ ಕಡಲ ತೀರಕ್ಕೆ ಹೆಜ್ಜೆ ಹಾಕಿದ್ದರು. ಸಮುದ್ರದಲ್ಲಿ ಈಜಾಡುತ್ತಿದ್ದ ಪತಿ ಅರವಿಂದ ಪಾಂಡುರಂಗ ಶೆಣೈ ನೀರಿನ ಅಲೆಗೆ ಸಿಲುಕಿ ಜಲಸಮಾಧಿಯಾದರು. ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net