ಆರು ಸಂಸದರು ರಾಜ್ಯಸಭಾ ಕಲಾಪದಿಂದ ಹೊರಕ್ಕೆ

rs
Published on

ನವದೆಹಲಿ : ಇಂದಿನ ರಾಜ್ಯಸಭಾ ಕಲಾಪದ ನಡುವೆ ಫಲಕಗಳನ್ನು ಹಿಡಿದು ಸದನದ ಬಾವಿಗೆ ನುಗ್ಗಿದ ಆರು ಜನ ಸಂಸದರಿಗೆ ಕಲಾಪದಿಂದ ಹೊರಗುಳಿಯುವಂತೆ ಆದೇಶಿಸಲಾಯಿತು. ಈ ಆರು ಸಂಸದರೆಂದರೆ ತೃಣಮೂಲ ಕಾಂಗ್ರೆಸ್​ನ ಡೋಲ ಸೇನ್, ನದೀಮುಲ್ ಹಕ್, ಅರ್ಪಿತ ಘೋಷ್, ಮೌಸಮ್ ನೂರ್, ಶಾಂತಾ ಛೆಟ್ರಿ ಮತ್ತು ಅಬೀರ್ ರಂಜನ್ ಬಿಸ್ವಾಸ್.

ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡದ್ದಕ್ಕಾಗಿ ಈ ಸಂಸದರಿಗೆ ಸದನದಿಂದ ಹೊರಹೋಗಲು ಮತ್ತು ದಿನದ ಉಳಿದ ಕಲಾಪದಲ್ಲಿ ಪಾಲ್ಗೊಳ್ಳದಿರಲು, ರಾಜ್ಯಸಭಾ ಚೇರ್​ಮನ್ ಎಂ.ವೆಂಕಯ್ಯ ನಾಯ್ಡು ಸೂಚಿಸಿದರು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net