

ಬೆಂಗಳೂರು: ಒಬ್ಬೊಬ್ಬ ಹೀರೋ ಪ್ರತಿ ವರ್ಷ ಎಂಟ್ಹತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಆ ಸಂಖ್ಯೆ ಬಹಳ ಕಡಿಮೆ ಆಗಿದೆ. ಕೆಲವು ಹೀರೋಗಳು ವರ್ಷಕ್ಕೆ ಎರಡು ಸಿನಿಮಾ ಮಾಡಿದರೆ, ಇನ್ನೂ ಕೆಲವರು ಎರಡು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗಲೇ, ಧನಂಜಯ್ ಈ ವರ್ಷ ಹೊಸ ದಾಖಲೆ ಮಾಡಿದ್ದಾರೆ.
ಇದನ್ನೂ ಓದಿ: 9 ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಈ ವರ್ಷ ಮುಕ್ತಾಯ …
ಈ ವರ್ಷ 210 ಪ್ಲಸ್ ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ಅತೀ ಹೆಚ್ಚು ಚಿತ್ರಗಳಲ್ಲಿ ಧನಂಜಯ್ ನಟಿಸಿದ್ದಾರೆ ಎನ್ನುವುದು ವಿಶೇಷ. ಧನಂಜಯ್ ಅಭಿನಯದ ಆರು ಚಿತ್ರಗಳು ಈ ವರ್ಷ ಬಿಡುಡೆಯಾಗಿದೆ. ಯೋಗಿ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾದರೆ, ಪುನೀತ್ ರಾಜಕುಮಾರ್, ದಿಗಂತ್ ಮತ್ತು 'ಡಾರ್ಲಿಂಗ್' ಕೃಷ್ಣ ಅಭಿನಯದ ತಲಾ ಮೂರು ಚಿತ್ರಳು ಈ ವರ್ಷ ಬಿಡುಗಡೆಯಾಗಿವೆ. ಶಿವರಾಜಕುಮಾರ್, ಗಣೇಶ್, ರಿಷಭ್ ಶೆಟ್ಟಿ ಮತ್ತು ಶರಣ್ ಅವರ ತಲಾ ಎರಡು ಚಿತ್ರಗಳು ಹೊರಬಂದಿವೆ. ಈ ವರ್ಷ ಯಾವ್ಯಾವ ಪ್ರಮುಖ ನಟ ಎಷ್ಟೆಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬ ಪಟ್ಟಿ ಇಲ್ಲಿದೆ.
ಧನಂಜಯ್ - 21 ಹವರ್ಸ್, ಬೈರಾಗಿ, ಮಾನ್ಸೂನ್ ರಾಗ, ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ, ತೋತಾಪುರಿ
ಯೋಗಿ - ಒಂಬತ್ತನೇ ದಿಕ್ಕು, ಕಿರಿಕ್ ಶಂಕರ್, ಹೆಡ್ ಬುಷ್, ನಾನು ಅದು ಮತ್ತು ಸರೋಜ
ಪುನೀತ್ - ಜೇಮ್ಸ್, ದಿ ಲಕ್ಕಿ ಮ್ಯಾನ್, ಗಂಧದ ಗುಡಿ
ಕೃಷ್ಣ - ಲವ್ ಮಾಕ್ಟೇಲ್ 2, ಲೋಕಲ್ ಟ್ರೈನ್, ದಿಲ್ ಪಸಂದ್, ದಿ ಲಕ್ಕಿ ಮ್ಯಾನ್
ದಿಗಂತ್ - ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಗಾಳಿಪಟ 2, ತಿಮ್ಮಯ್ಯ ಅಂಡ್ ತಿಮ್ಮಯ್ಯ
ಶಿವರಾಜಕುಮಾರ್ - ಬೈರಾಗಿ, ವೇದ
ಗಣೇಶ್ - ಗಾಳಿಪಟ 2, ತ್ರಿಬ್ಬಲ್ ರೈಡಿಂಗ್
ಶರಣ್ - ಅವತಾರ ಪುರುಷ, ಗುರು ಶಿಷ್ಯರು
ರಿಷಭ್ ಶೆಟ್ಟಿ - ಹರಿಕಥೆ ಅಲ್ಲ ಗಿರಿಕಥೆ, ಕಾಂತಾರ
ಪೃಥ್ವಿ ಅಂಬರ್ - ಬೈರಾಗಿ, ಶುಗರ್ಲೆಸ್
ಸತೀಶ್ ನೀನಾಸಂ - ಪೆಟ್ರೋಮ್ಯಾಕ್ಸ್, ಡಿಯರ್ ವಿಕ್ರಂ (ಓಟಿಟಿ)
ಸುದೀಪ್ - ವಿಕ್ರಾಂತ್ ರೋಣ
ಉಪೇಂದ್ರ - ಹೋಂ ಮಿನಿಸ್ಟರ್
ಯಶ್ - ಕೆಜಿಎಫ್ 2
ರಕ್ಷಿತ್ ಶೆಟ್ಟಿ - 777 ಚಾರ್ಲಿ
ರವಿಚಂದ್ರನ್ - ರವಿ ಬೋಪಣ್ಣ
ಜಗ್ಗೇಶ್ - ತೋತಾಪುರಿ
ವಿನೋದ್ ಪ್ರಭಾಕರ್ - ವರದ
ಪ್ರಜ್ವಲ್ ದೇವರಾಜ್ - ಅಬ್ಬರ
ಅಜೇಯ್ ರಾವ್ - ಶೋಕಿವಾಲ, ದಿಲ್ ಪಸಂದ್ (ಅತಿಥಿ ಪಾತ್ರ)