ಪ್ರತಾಪಗಢ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ- ಆರು ಮಕ್ಕಳು ಸೇರಿ 14 ಜನ ಸಾವು

pratapgarh accident
Published on

ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಮಾಣಿಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಕ್ಕಳು ಸೇರಿ 14 ಜನ ಮೃತಪಟ್ಟಿದ್ದಾರೆ. ಕೆಲವು ಗಾಯಗೊಂಡಿದ್ದಾರೆ.

ಪ್ರಯಾಗ್​ರಾಜ್​ - ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇಶ್​ರಾಜ್​ ಕಾ ಇನಾರಾ ಗ್ರಾಮದ ಸಮೀಪ ಗುರುವಾರ ತಡರಾತ್ರಿ ರಸ್ತೆ ಬದಿ ನಿಂತಿದ್ದ ಟ್ರಕ್​​​ಗೆ ಎಸ್​ಯುವಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಎಸ್​ಯುವಿ ಚಾಲಕನಿಗೆ ನಿಂತಿದ್ದ ಟ್ರಕ್ ಕಾಣಿಸದೇ ಹೋದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಊಹಿಸಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೃತರನ್ನು ದಿನೇಶ್ ಕುಮಾರ್ (40), ಪವನ್ ಕುಮಾರ್ (10) ದಯಾರಾಮ್​ (40), ಅಮನ್ (7), ರಾಮ್​ಸಮುಜ್​ (40), ಅಂಶ್​ (9), ಗೌರವ್ ಕುಮಾರ್ (10), ನಾನ್ ಭೈಯಾ (55), ಸಚಿನ್ (12), ಹಿಮಾಂಶು (12), ಮಿಥಿಲೇಶ್​ ಕುಮಾರ್ (17), ಅಭಿಮನ್ಯು (28), ಪ್ರಶಾಂತ್ (40), ಬೊಲೆರೋ ಚಾಲಕ ಬಬ್ಲು (22) ಎಂದು ಗುರುತಿಸಲಾಗಿದೆ. ಚಾಲಕ ಮತ್ತು ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಜಿಗ್ರಪುರ ಗ್ರಾಮದವರು. ಇವರೆಲ್ಲ ಶೇಖಪುರ ಗ್ರಾಮಕ್ಕೆ ವಿವಾಹ ಸಮಾರಂಭಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net