ಅರಳಿ ಎಲೆ ಮೇಲೆ ಅರಳಿದ ಯೋಗಾಸನಗಳು! ಶಿವಕುಮಾರ್ ಪ್ರತಿಭೆಗೆ ನೆಟ್ಟಿಗರು ಫಿದಾ..

ravi leaf
Published on

ಹೈದರಾಬಾದ್​: ಕಲೆಯನ್ನು ನಾನಾ ವಿಧದಲ್ಲಿ ಪ್ರದರ್ಶಿಸುವವರನ್ನು ಕಾಣಬಹುದು. ಅದೇ ರೀತಿ ಇಲ್ಲೊಬ್ಬ ಕಲಾವಿದ ಯೋಗದಿನಾಚರಣೆ ಪ್ರಯುಕ್ತ ಅರಳಿ ಎಲೆ ಮೇಲೆ ಯೋಗಾಸನಗಳನ್ನು ಬಿಡಿಸಿ ಗಮನ ಸೆಳೆದಿದ್ದಾರೆ.

ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್‌ನ ಕಲಾವಿದ ಗುಂಡು ಶಿವಕುಮಾರ್ ಅರಳಿ ಎಲೆಗಳ ಮೇಲೆ ಸೂರ್ಯ ನಮಸ್ಕಾರ ಮಾಡುವ ಆಸನಗಳನ್ನು ಅದ್ಭುತವಾಗಿ ಅನಾವರಣಗೊಳಿಸಿದ್ದು, ಚಿತ್ರಗಳು ನೆಟ್ಟಿಗರ ಮನಸೂರೆಗೊಳ್ಳುತ್ತಿದೆ.

ಅರಳೆಲೆಯ ಮೇಲೆ ಹುಡುಗಿಯ ಒಂಬತ್ತು ಬಗೆಯ ಸೂರ್ಯ ನಮಸ್ಕಾರದ ಚಿತ್ರಗಳನ್ನು ಬಿಡಿಸಿದ್ದು, ವೀಡಿಯೋದಲ್ಲಿ ಈ ಕಲಾವಿದ ಸೂರ್ಯ ನಮಸ್ಕಾರ ಮಾಡುತ್ತಾ ಎಲೆ ತೋರಿಸುತ್ತಿದ್ದಾರೆ. ಯೋಗವು ಹೃದಯ, ದೇಹ ಮತ್ತು ಮನಸ್ಸಿಗೆ ಉತ್ತಮ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net