ಅನುಪಮ್ ಖೇರ್ ಕಚೇರಿ ದರೋಡೆ ಪ್ರಕರಣ: ಇಬ್ಬರನ್ನು ಬಂಧಿಸಿದ ಮುಂಬೈ ಪೊಲೀಸರು

anupham
Published on

ಮುಂಬೈ: ಬಾಲಿವುಡ್​ ನಟ ಅನುಪಮ್ ಖೇರ್ ಅವರ ಕಚೇರಿಯಲ್ಲಿ ಕಳ್ಳತನ ನಡೆದ ಘಟನೆಗೆ ಸಂಬಂಧಿಸಿದಂತೆ ಮಜೀದ್ ಶೇಖ್ ಮತ್ತು ಮೊಹಮ್ಮದ್ ದಲೇರ್ ಬಹ್ರೀಮ್ ಖಾನ್ ಎಂಬುವರನ್ನು ಮುಂಬೈನ ಓಶಿವಾರ ಪೊಲೀಸರು ಬಂಧಿಸಿದ್ದಾರೆ.

ಇಬ್ಬರೂ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಕಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಮುಂಬೈನ ವೀರ ದೇಸಾಯಿ ರಸ್ತೆಯ ಕಚೇರಿಗೆ ನುಗ್ಗಿದ್ದ ಕಳ್ಳರು ನಗದು ಮತ್ತು ಫಿಲ್ಮ್​ ನೆಗೆಟಿವ್‌ಗಳನ್ನು ಕದ್ದೊಯ್ದಿದ್ದರು ಎಂದು ತಮ್ಮ ಎಕ್ಸ್‌ಗೆ ಖಾತೆಯಲ್ಲಿ ಅನುಪಮ್ ಮುರಿದ ಬಾಗಿಲಿನ ವೀಡಿಯೊವನ್ನು ಹಂಚಿಕೊಂಡಿದ್ದರು.

ಗುರುವಾರ ಬೆಳಗ್ಗೆ 9.45ರ ಸುಮಾರಿಗೆ ಅನುಪಮ ಕಚೇರಿಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಕಚೇರಿ ಸಿಬ್ಬಂದಿ ಬಂದು ನೋಡಿದಾಗ ಬೀಗ ಮುರಿದಿದು ತಿಜೋರಿಯಲ್ಲಿಟ್ಟಿದ್ದ 4.15 ಲಕ್ಷ ರೂ.ಗಳನ್ನು ಕಳ್ಳರು ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net