15 ದಿನಗಳಿಂದ ಕಾಣದ ಭವಾನಿ ರೇವಣ್ಣಗೆ ಕಾದು ಕುಳಿತಿರುವ ಎಸ್​ಐಟಿ! ಹೆಚ್ಚಾಗುತ್ತಿದೆ ಬಂಧನದ ಕಾವು

WhatsApp Image 2024-06-01 at 3.20.11 PM (1)
Published on

ಬೆಂಗಳೂರು: ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸ್​ನಲ್ಲಿ ಇದೀಗ ಮಾಜಿ ಶಾಸಕ ಎಚ್​.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದ್ದು, ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಳೆದ 15 ದಿನಗಳಿಂದ ನಾಪತ್ತೆಯಾಗಿರುವ ಭವಾನಿಯ ಹುಡುಕಾಟದಲ್ಲಿರುವ ಎಸ್​ಐಟಿ ಅಧಿಕಾರಿಗಳು, ಇಂದು ನೇರವಾಗಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪ್ರಕರಣದಲ್ಲಿ ಪತಿ ಎಚ್​.ಡಿ. ರೇವಣ್ಣ ಅವರ ಬಳಿಕ ತಾನು ಕೂಡ ಸಿಲುಕಿಕೊಂಡಿರುವ ಭವಾನಿ ರೇವಣ್ಣ, ಎಸ್​ಐಟಿ ಅಧಿಕಾರಿಗಳು ನೀಡಿರುವ ವಿಚಾರಣೆ ನೋಟಿಸ್​ಗೆ ಹಾಜರಾಗದೆ, ತಲೆಮರೆಸಿಕೊಂಡಿರುವುದು ಇದೀಗ ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಭವಾನಿ ಹುಡುಕಾಟದಲ್ಲಿರುವ ಎಸ್​ಐಟಿ, ನೇರವಾಗಿ ಅವರ ನಿವಾಸದ ಮುಂದೆಯೇ ಕಾದಿದ್ದಾರೆ.

ನಿನ್ನೆಯಷ್ಟೇ ವಿದೇಶದಿಂದ ರಾಜ್ಯಕ್ಕೆ ಬಂದಿಳಿದಿರುವ ಪ್ರಜ್ವಲ್ ರೇವಣ್ಣರನ್ನು ಇದೀಗ ನಿರಂತರ ವಿಚಾರಣೆಗೆ ಹಾಜರುಪಡಿಸಿರುವ ಎಸ್​ಐಟಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಸದ್ಯ ಭವಾನಿ ಮಾತ್ರ ಎಸ್​ಐಟಿ ಕಣ್ಣಿನಿಂದ ತಪ್ಪಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಭವಾನಿಗೆ ಬಂಧನದ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net