

ಕಡಬ: ತಾಲೂಕು ಸಿರಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂದ ಸಹಯೋಗದಿಂದ ಭಾನುವಾರ ನಡೆಯಿತು.
ಕೊಂಬಾರು ಗ್ರಾ.ಪಂ ವಾಜಿ ಅಧ್ಯಕ್ಷ ಪ್ರಸನ್ನ ಕುಮಾರ್ ಕೆ.ಎನ್. ಕಾರ್ಯಕ್ರಮ ಉದ್ಘಾಟಿಸಿದ್ದು, ಅಧ್ಯಕ್ಷ ಮಧುಸೂದನ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ ಜಯರಾಮ, ಸದಸ್ಯರಾದ ಜಯಶ್ರೀ ರಾಮಚಂದ್ರ ಕಾಪಾರು, ಸರಿತಾ ನಿತ್ಯಾನಂದ, ಚೆನ್ನಕೇಶವ ಕೈಂತಿಲ, ಗಣೇಶ ಪಿಲಿಕಜೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂದ ಕಡಬ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಹೈಕೋರ್ಟ್ ವಕೀಲ ಪ್ರವೀಣ್ ಕುವಾರ್ ಕೆ.ಎನ್., ಕ್ಯಾಂಪ್ಕೊ ಉದ್ಯೋಗಿ ಗಣೇಶ್ ಕಟ್ಟೆ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಪಿ., ಹಳೆ ವಿದ್ಯಾರ್ಥಿ ಸಂದ ಅಧ್ಯಕ್ಷ ಮಧುಕೃಷ್ಣ ಕಟ್ಟೆ, ಮುಖ್ಯ ಶಿಕ್ಷಕ ವಿಜಯಕುವಾರ ನಡುತೋಟ ಉಪಸ್ಥಿತರಿದ್ದರು.
ವರ್ಗಾವಣೆಗೊಂಡ ಸಹ ಶಿಕ್ಷಕ ದಿನೇಶ್ ಆಚಾರ್ಯ ಹಾಗೂ ನಿವೃತ್ತಿಗೊಳ್ಳಲಿರುವ ಮುಖ್ಯಶಿಕ್ಷಕ ವಿಜಯಕುವಾರ ನಡುತೋಟ, ವಾರ್ಷಿಕೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕಿಯರಾದ ಹರಿಣಾಕ್ಷಿ ಟಿ.ಸ್ವಾಗತಿಸಿದರು. ವೀಣಾ ವಂದಿಸಿದರು. ಅಪೂರ್ವ ಪಿ. ನಿರೂಪಿಸಿದರು.