

ಚೆನ್ನೈ: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಒಂದು ವಾರದೊಳಗೆ ಪ್ರಾರಂಭವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ಶುಕ್ರವಾರ (ಅ.24) ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರ ಪೀಠದ ಮುಂದೆ ಈ ವಿಷಯ ತಿಳಿಸಲಾಯಿತು. ಅಲ್ಲದೆ, ಟಿ. ನಗರ ಕ್ಷೇತ್ರದ 229 ಮತಗಟ್ಟೆಗಳ ಸಂಪೂರ್ಣ ಮತ್ತು ಪಾರದರ್ಶಕ ಪರಿಶೀಲನೆ ಕೋರಿ ಎಐಎಡಿಎಂಕೆ ಮಾಜಿ ಶಾಸಕ ಬಿ. ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.
ಅರ್ಜಿದಾರರ ಕಳವಳಗಳನ್ನು SIR ಪರಿಗಣಿಸುತ್ತದೆ ಎಂದು ಇಸಿಐ ಸ್ಥಾಯಿ ವಕೀಲ ನಿರಂಜನ್ ರಾಜಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಅರ್ಜಿಯ ವಿಚಾರಣೆ ನಡೆಸಿದ ಪೀಠವು ಪ್ರಕರಣವನ್ನು ಒಂದು ವಾರ ಮುಂದೂಡಿತು ಎಂದು ವರದಿಯಾಗಿವೆ.
ಕಳೆದ ತಮಿಳುನಾಡಿನಲ್ಲಿ 2021ರ ವಿಧಾನಸಭಾ ಚುನಾವಣೆಯಲ್ಲಿ ಟಿ ನಗರದಿಂದ ಸ್ಪರ್ಧಿಸಿದ್ದ ಸತ್ಯನಾರಾಯಣ, ಮತದಾರರ ಪಟ್ಟಿಯನ್ನು ನಿರ್ವಹಿಸುವಲ್ಲಿ ವ್ಯವಸ್ಥಿತ ವೈಫಲ್ಯಗಳನ್ನು ಆರೋಪಿಸಿದರು. ಅಲ್ಲದೆ, ನಿಜವಾದ ಮತದಾರರನ್ನು ಸಾಮೂಹಿಕವಾಗಿ ಅಳಿಸಿಹಾಕಿದ್ದರಿಂದ 2021 ರ ಚುನಾವಣೆಯಲ್ಲಿ 137 ಮತಗಳಿಂದ ಸೋತಿದ್ದೇನೆ ಎಂದು ಸತ್ಯನಾರಾಯಣ ತಿಳಿಸಿದ್ದಾರೆ.
100 ಮತಗಟ್ಟೆಗಳ ಮನೆ-ಮನೆ ಪರಿಶೀಲನೆಯಲ್ಲಿ ಡಬಲ್ ಮತಗಳು, ಅನಿವಾಸಿ ಮತದಾರರ ಹೆಸರುಗಳು ಮತ್ತು ಮೃತ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ. ಈ ವರದಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದರೂ, ಯಾವುದೇ ಸರಿಪಡಿಸುವ ಕ್ರಮ ಕೈಗೊಳ್ಳಲಾಗಿಲ್ಲ. ಬಿಎಲ್‌ಒಗಳು ನಿಜವಾದ ಕ್ಷೇತ್ರ ಭೇಟಿಗಳನ್ನು ನಡೆಸದೆ ವರದಿಗಳನ್ನು ಸಿದ್ಧಪಡಿಸಿದ್ದಾರೆ. ಇದು ಪರಿಶೀಲನಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಿದೆ ಎಂದು ಸತ್ಯನಾರಾಯಣ ಆರೋಪಿಸಿದರು.
ಚುನಾವಣಾ ಆಯೋಗದ ಕ್ರಮವು 1950 ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಸಂವಿಧಾನದ 326 ನೇ ವಿಧಿಯ ಅಡಿಯಲ್ಲಿ ಮತದಾನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ತಪ್ಪಾದ ಸೇರ್ಪಡೆಗಳು ಮತ್ತು ಅಳಿಸುವಿಕೆಗಳನ್ನು ಸರಿಪಡಿಸಲು ಸಂಪೂರ್ಣ ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ನಿರ್ಲಕ್ಷ್ಯವು ಚುನಾವಣೆಯ ಸಮಗ್ರತೆ ಮತ್ತು ಸಾರ್ವಜನಿಕ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ.
ಆಡಳಿತಾರೂಢ ಡಿಎಂಕೆ ನಾಯಕರು ರಾಜ್ಯದ ಮತದಾರರ ಪಟ್ಟಿಯ ಇಸಿಐನ ಎಸ್‌ಐಆರ್ ಅನ್ನು ಬಲವಾಗಿ ವಿರೋಧಿಸಿದರು. ದುರುಪಯೋಗ ಮತ್ತು ಜನಸಂಖ್ಯಾ ಬದಲಾವಣೆಗಳ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಡಿಎಂಕೆ ಸಚಿವ ದುರೈ ಮುರುಗನ್ ಈ ಹಿಂದೆ ಎಸ್‌ಐಆರ್ ಪ್ರಸ್ತಾವನೆಯನ್ನು ತಿರಸ್ಕರಿಸಿ, ತಮಿಳುನಾಡು ಬಿಹಾರವಲ್ಲ. ತಮಿಳುನಾಡು ಜನರು ಜಾಗೃತರಾಗಿರುವ ರಾಜ್ಯವಾಗಿದೆ. ಇಲ್ಲಿನ ಆಡಳಿತ ಬೇರೆಡೆಯಂತೆ ಅಲ್ಲ; ಇಲ್ಲಿ ನಮಗೆ ದಳಪತಿಯ ನಾಯಕತ್ವವಿದೆ. ಇಂತಹ ತಂತ್ರಗಳು ತಮಿಳುನಾಡಿನಲ್ಲಿ ಅಥವಾ ನಮ್ಮ ನಾಯಕನೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್)