

ನವದೆಹಲಿ: ಭಾರತವು ಆತುರದಿಂದ ತಲೆಗೆ ಬಂದೂಕು ಇಟ್ರೂ ವ್ಯಾಪಾರ ಒಪ್ಪಂದಗಳನ್ನು ಮಾಡುವುದಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್(Piyush Goyal) ಶುಕ್ರವಾರ (ಅ,24) ಹೇಳಿದ್ದಾರೆ.
ಈ ಬಗ್ಗೆ ಜರ್ಮನಿಯಲ್ಲಿ ನಡೆದ ಬರ್ಲಿನ್ ಸಂವಾದದಲ್ಲಿ ಮಾತನಾಡಿದ ಗೋಯಲ್, ಭಾರತವು ಯುರೋಪಿಯನ್ ಒಕ್ಕೂಟ (EU) ಮತ್ತು ಅಮೆರಿಕ ಸೇರಿದಂತೆ ದೇಶಗಳು ಮತ್ತು ಪ್ರದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳ ಕುರಿತು ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಗೋಯಲ್, ನಾವು EU ಜೊತೆ ಸಕ್ರಿಯ ಸಂವಾದದಲ್ಲಿದ್ದೇವೆ. ಅಲ್ಲದೆ, ನಾವು US ಜೊತೆ ಮಾತನಾಡುತ್ತಿದ್ದೇವೆ. ಆದರೆ, ನಾವು ಆತುರದಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಮತ್ತು ನಮ್ಮ ತಲೆಗೆ ಬಂದೂಕು ಹಿಟ್ಟುಕೊಂಡು ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿಕೊಂಡಿದ್ದಾರೆ.
ವ್ಯಾಪಾರ ಒಪ್ಪಂದವನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ನೋಡಬೇಕು ಎಂದು ಹೇಳಿದ ಗೋಯಲ್, ಭಾರತ ಎಂದಿಗೂ ಆತುರದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ. ಹೆಚ್ಚಿನ ಸುಂಕಗಳನ್ನು ಎದುರಿಸಲು ಭಾರತ ಹೊಸ ಮಾರುಕಟ್ಟೆಗಳನ್ನು ನೋಡುತ್ತಿದೆ ಎಂದು ಅವರು ತಿಳಿಸಿದರು.
ಭಾರತವು ದೀರ್ಘಾವಧಿಯ ನ್ಯಾಯಯುತ ವ್ಯಾಪಾರ ಒಪ್ಪಂದವನ್ನು ಷರತ್ತುಗಳೊಂದಿಗೆ ಪಡೆಯುತ್ತಿದೆಯೇ ಎಂದು ಕೇಳಿದಾಗ, ಗೋಯಲ್, ರಾಷ್ಟ್ರೀಯ ಹಿತಾಸಕ್ತಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪರಿಗಣನೆಗಳ ಆಧಾರದ ಮೇಲೆ ಭಾರತ ತನ್ನ ಸ್ನೇಹಿತರು ಯಾರು ಎಂದು ನಿರ್ಧರಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ನೀವು EU ಜೊತೆ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಯಾರಾದರೂ ನನಗೆ ಹೇಳುತ್ತಾರೆ. ಅದರೆ, ನಾನು ಇದನ್ನು ಸ್ವೀಕರಿಸುವುದಿಲ್ಲ. ನಾನು ಕೀನ್ಯಾ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ಅದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಒಂದು ದೇಶದಿಂದ ನಿರ್ದಿಷ್ಟ ಉತ್ಪನ್ನವನ್ನು ಖರೀದಿಸುವ ನಿರ್ಧಾರವು ಇಡೀ ಜಗತ್ತು ನಿರ್ಧಾರ ತೆಗೆದುಕೊಳ್ಳಬೇಕಾದ ವಿಷಯವಾಗಿದೆ ಎಂದು ಗೋಯಲ್ ಹೇಳಿದರು.
ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಅಮೆರಿಕ ಭಾರತದ ಮೇಲೆ ಒತ್ತಡ ಹೇರುತ್ತಿರುವ ಈ ಸಂದರ್ಭದಲ್ಲಿ ಈ ಹೇಳಿಕೆಗಳು ಮಹತ್ವದ್ದಾಗಿವೆ. (ಏಜೆನ್ಸೀಸ್)