More

    ‘ನೀವು ಆಗ ಯಾಕೆ ಮೌನವಾಗಿದ್ದು?’; ನಟ ಕಮಲ್ ಹಾಸನ್ ವಿರುದ್ಧ ಚಿನ್ಮಯಿ ಟ್ವೀಟ್

    ಕೆಲವು ಕುಸ್ತಿಪಟುಗಳು ಕಳೆದ ಹಲವು ದಿನಗಳಿಂದ, ರೆಸ್ಲಿಂಗ್ ಫೆಡರೇಷನ್‌ನ ಮುಖ್ಯಸ್ಥ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಕುರಿತು ಬಹುಭಾಷಾ ನಟ ಕಮಲ್ ಹಾಸನ್ ಧ್ವನಿ ಎತ್ತಿ, ‘ನಮ್ಮ ಕ್ರೀಡಾಪಟುಗಳು ದೇಶಕ್ಕೆ ಕೀರ್ತಿ, ಪದಕ ತರಲು ಮೈದಾನದಲ್ಲಿ ಹೋರಾಡುವ ಬದಲು ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಡುವ ಪರಿಸ್ಥಿತಿ ಬಂದಿದೆ’ ಎಂದು ಟ್ವೀಟ್ ಮಾಡಿದ್ದರು.

    ಇದಕ್ಕೆ ಪ್ರತಿಕ್ರಿಯೆಯಾಗಿ ಗಾಯಕಿ ಚಿನ್ಮಯಿ ಶ್ರೀಪಾದ, ‘ತಮಿಳು ಚಿತ್ರರಂಗದ ಹೆಸರಾಂತ ಸಾಹಿತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಕ್ಕೆ ಇಡೀ ಚಿತ್ರರಂಗ ನನ್ನನ್ನು ಬ್ಯಾನ್ ಮಾಡಿ ಐದು ವರ್ಷಗಳು ಕಳೆದಿವೆ. ಇಷ್ಟೆಲ್ಲ ಮಹಿಳಾ ರಕ್ಷಣೆ ಬಗ್ಗೆ ಮಾತನಾಡುವ ನೀವು ನಿಮ್ಮ ಮೂಗಿನ ನೇರಕ್ಕೆ ನಡೆದ ಘಟನೆ ಬಗ್ಗೆ ಯಾಕೆ ಪ್ರತಿಕ್ರಿಯೆ ನೀಡಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ನಡೆದ ಮೀಟೂ ಪ್ರಕರಣವನ್ನು ನೆನಪಿಸಿಕೊಂಡು ಮಾಡಿದ ಟ್ವೀಟ್‌ಗೆ ಕಮಲ್ ಅಭಿಮಾನಿಗಳು ಚಿನ್ಮಯಿ ವಿರುದ್ಧ ಮುಗಿಬಿದ್ದಿದ್ದು, ‘ನನ್ನ ವಿರುದ್ಧ ಎಷ್ಟೆಲ್ಲ ಧ್ವನಿ ಕೇಳಿಬರುತ್ತಿದೆ. ಅಧಿಕಾರದಲ್ಲಿರುವ ಆರೋಪಿಗಳು ಎಲ್ಲರೂ ಒಂದೇ, ಭಾಷೆ ಮಾತ್ರ ಬೇರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಮಲ್‌ಗೆ ಸುದಿಪ್ತೊ ಸೇನ್ ಪ್ರತಿಕ್ರಿಯೆ

    ಬಾಕ್ಸಾಫೀಸಿನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ನಟ ಕವಲ್ ಹಾಸನ್ ‘ಇದು ಪ್ರಚಾರಕ್ಕಾಗಿ ಮಾಡಿದ ಚಿತ್ರ’ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರದ ನಿರ್ದೇಶಕ ಸುದಿಪ್ತೊ ಸೇನ್, ‘ಚಿತ್ರವನ್ನು ನೋಡದೇ ಹೀಗೆ ಹೇಳುವವರಿಗೆ ಪ್ರತಿಕ್ರಿಯಿಸಲು ಇಷ್ಟವಿಲ್ಲ. ಹೀಗೆ ಹೇಳಿದವರು ನಂತರ ಚಿತ್ರವನ್ನು ನೋಡಿ ಚೆನ್ನಾಗಿದೆ ಎಂದಿದ್ದಾರೆ. ಬಿಜೆಪಿ ಇಷ್ಟಪಟ್ಟಿದೆ ಎಂದ ಮಾತ್ರಕ್ಕೆ ಇದು ಅವರ ಚಿತ್ರವಲ್ಲ. ಬಿಜೆಪಿ ಹೊರತಾಗಿ, ಕಾಂಗ್ರೆಸ್, ಬೇರೆ ಪಕ್ಷಗಳು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರವನ್ನು ಜನ ಇಷ್ಟಪಟ್ಟಿದ್ದಾರೆ. ನಮ್ಮ ದೇಶದಲ್ಲಿ ಮಾತ್ರ ಇಂಥಹ ಕೇವಲವಾದ ಮಾತುಗಳು ಕೇಳಿಬರುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts