More

    ಟಿಆರ್​ಪಿಯಲ್ಲಿ ಯೋಗ್ಯನಾದ ಅಯೋಗ್ಯ – 5 ವರ್ಷಗಳಲ್ಲಿ 150ಕ್ಕೂ ಅಧಿಕ ಬಾರಿ ಪ್ರಸಾರವಾದ ಚಿತ್ರ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಕೆಲವೊಂದು ಸಿನಿಮಾಗಳೇ ಹಾಗೆ, ಒಮ್ಮೆ ನೋಡಿದರೆ ಸಮಾಧಾನವೇ ಆಗುವುದಿಲ್ಲ. ಪ್ರತಿ ಬಾರಿ ಟಿವಿಯಲ್ಲಿ ಪ್ರಸಾರವಾದಾಗಲೂ ಇನ್ನೊಮ್ಮೆ, ಮತ್ತೊಮ್ಮೆ ನೋಡಬೇಕು ಅಂತನಿಸುತ್ತದೆ. 1999ರಲ್ಲಿ ರಿಲೀಸ್​ ಆದ ಅಮಿತಾಭ್​ ಬಚ್ಚನ್​, ಸೌಂದರ್ಯ ಅಭಿನಯದ ಹಿಂದಿ ಸಿನಿಮಾ “ಸೂರ್ಯವಂಶ್​’ ಕಳೆದ 24 ವರ್ಷಗಳಲ್ಲಿ ಟಿವಿಯಲ್ಲಿ ಸಾವಿರಾರು ಬಾರಿ ಪ್ರಸಾರಗೊಂಡಿದೆ. ಪ್ರತಿ ಬಾರಿ ಪ್ರಸಾರಗೊಂಡಾಗಲೂ ಉತ್ತಮ ರೇಟಿಂಗ್​ ಬಂದಿರುವ ಕಾರಣ, ವಾರಕ್ಕೊಮ್ಮೆಯಾದರೂ ವಾಹಿನಿಯವರು ಸಿನಿಮಾಗೆ ಸಮಯ ಕೊಡುತ್ತಾರೆ. ಕನ್ನಡದಲ್ಲೂ ಮಹೇಶ್​ ಗೌಡ ನಿರ್ದೇಶನದ, ನೀನಾಸಂ ಸತೀಶ್​ ಮತ್ತು ರಚಿತಾ ರಾಮ್​ ಅಭಿನಯದ “ಅಯೋಗ್ಯ’ ಆ ದಾಖಲೆ ಮಾಡಿದೆ. ಕರ್ಲಸ್​ ಕನ್ನಡ ವಾಹಿನಿಯಲ್ಲಿ ಕಳೆದ ಐದು ವರ್ಷಗಳಿಂದ 150ಕ್ಕೂ ಅಧಿಕ ಬಾರಿ ಸಿನಿಮಾ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಸಂತಸ ಹಂಚಿಕೊಳ್ಳುವ ನಾಯಕ ನಟ ನೀನಾಸಂ ಸತೀಶ್​, “ಥಿಯೇಟರ್​ನಲ್ಲೂ ಹಿಟ್​ ಆಗಿದ್ದ ಸಿನಿಮಾ “ಅಯೋಗ್ಯ’. ಐದು ವರ್ಷಗಳಲ್ಲಿ ನೂರಾರು ಬಾರಿ ಪ್ರಸಾರಗೊಂಡಿರುವುದು ಖುಷಿಯ ವಿಚಾರ. ಯಾವ ವಾಹಿನಿಯಲ್ಲೂ ಅಷ್ಟು ಬಾರಿ ಒಂದು ಸಿನಿಮಾ ಪ್ರಸಾರ ಮಾಡಿಲ್ಲ. ಅಷ್ಟರ ಮಟ್ಟಿಗೆ ಜನ ನಮ್ಮ ಸಿನಿಮಾ ಮೆಚ್ಚಿಕೊಂಡಿದ್ದಾರೆ. ನಮ್ಮನ್ನು ಉಳಿಸಿದ್ದಾರೆ. ಜತೆಯಲ್ಲಿ ನಿಂತು ಮತ್ತಷ್ಟು ಸಿನಿಮಾಗಳನ್ನು ಮಾಡಲು ಪ್ರೇರೇಪಿಸುತ್ತಿದ್ದಾರೆ. ಅವರು ನೀಡಿರುವ ಗೌರವವನ್ನು ಉಳಿಸಿಕೊಳ್ಳುತ್ತೇನೆ. ಈ ಯಶಸ್ಸು ನಮ್ಮ ಮೇಲಿನ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಉತ್ತಮ ಸಿನಿಮಾಗಳನ್ನು ಮಾಡುತ್ತೇನೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

    ಟಿಆರ್​ಪಿಯಲ್ಲಿ ಯೋಗ್ಯನಾದ ಅಯೋಗ್ಯ - 5 ವರ್ಷಗಳಲ್ಲಿ 150ಕ್ಕೂ ಅಧಿಕ ಬಾರಿ ಪ್ರಸಾರವಾದ ಚಿತ್ರ


    ಸತೀಶ್​ ಮಾತಿಗೆ ಧ್ವನಿಗೂಡಿಸುವ ನಿರ್ದೇಶಕ ಮಹೇಶ್​, “”ಕಿರಿಕ್​ ಪಾರ್ಟಿ’, “ಕೆಜಿಎ್​ ಚಾಪ್ಟರ್​ 1′, “777 ಚಾರ್ಲಿ’ಯಂತಹ ಹಿಟ್​ ಸಿನಿಮಾಗಳ ಜತೆಗೆ ನಾನು ನಿರ್ದೇಶಿಸಿದ ಮೊದಲ ಚಿತ್ರವನ್ನೇ ಜನ ಇಷ್ಟು ಆಪ್ತವಾಗಿ ಅಪ್ಪಿಕೊಂಡಿರುವುದು ನನಗೆ ಖುಷಿ ನೀಡಿದೆ. ಕೆಲವು ನೋಡುವ ಸಿನಿಮಾ, ಕೆಲವು ಕಾಡುವ ಸಿನಿಮಾ ಇರುತ್ತವೆ. ನಾನು ನಿರ್ದೇಶಿಸಿರುವ “ಮದಗಜ’ ಚಿತ್ರಕ್ಕೂ ಉತ್ತಮ ರೇಟಿಂಗ್​ ಇದೆ’ ಎಂದು ಹೇಳಿಕೊಳ್ಳುತ್ತಾರೆ.

    ಟಿಆರ್​ಪಿಯಲ್ಲಿ ಯೋಗ್ಯನಾದ ಅಯೋಗ್ಯ - 5 ವರ್ಷಗಳಲ್ಲಿ 150ಕ್ಕೂ ಅಧಿಕ ಬಾರಿ ಪ್ರಸಾರವಾದ ಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts