10 ವರ್ಷದ ಮಗನನ್ನು ಕೊಂದ ಪಾಪಿ ತಂದೆ: ಆರೋಪಿಗಾಗಿ ಬೆನ್ನಟ್ಟಿದ ಪೊಲೀಸರು! Delhi

Dead woman lying on the floor under white cloth with focus on hand
Dead woman lying on the floor under white cloth with focus on hand
Published on

Delhi: ವ್ಯಕ್ತಿಯೊಬ್ಬ ತನ್ನ 10 ವರ್ಷದ ಮಗನನ್ನು ಕೊಂದಿರುವ ಆಘಾತಕಾರಿ ಘಟನೆಯೊಂದು ದೆಹಲಿಯ ನರೇಲಾ ಪ್ರದೇಶದಲ್ಲಿ ಮಂಗಳವಾರ (ಜುಲೈ 29) ನಡೆದಿದೆ.

ಆರೋಪಿ ನರೇಂದರ್​ ಎಂದು ಗುರುತಿಸಲಾಗಿದ್ದು, ಆರೋಪಿ ತನ್ನ ಮಗನನ್ನು ಕೊಂದ ನಂತರ ಹೆಂಡತಿಗೆ ವಿಷಯ ತಿಳಿಸಿ ಪರಾರಿಯಾಗಿದ್ದಾನೆ. ಮಗುವಿನ ತಾಯಿ ಆರೋಪಿ ನರೇಂದರ್​ ವಿರುದ್ಧ ದೆಹಲಿಯ ನರೇಲಾ ಪೊಲೀಸರಿಗೆ ದೂರು ದಾಖಲಿಸಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿ ನರೇಂದರ್​ ಮೇಲೆ ಭಾರತೀಯ ನ್ಯಾಯ ಸಂಹಿತಾ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದೂರು ದಾಖಲಾಗಿದ್ದು, ಕಾಣೆಯಾದ ಆರೋಪಿಯನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಕಾರಣ ಏನು?

ಕೋಮಲ, ನರೇಂದರ್ ದಂಪತಿಗಳಾಗಿದ್ದು, ಕೋಮಲ ಪತಿಯಿಂದ ಕೆಲ ವರ್ಷಗಳಿಂದ ದೂರ ವಾಸ ಮಾಡುತ್ತಿದ್ದಾಳೆ. ತಾಯಿ ಹತ್ತಿರ ವಾಸ ಮಾಡುತ್ತಿದ್ದ 10 ವರ್ಷದ ಬಾಲಕ, ಶಾಲೆಯಿಂದ ಮನೆಗೆ ವಾಪಸ್​​ ಬರದ ಹಿನ್ನೆಲೆ ಆತನಿಗಾಗಿ ಹುಡುಕಾಟ ಶುರುವಾಗಿದೆ. ಅಷ್ಟರಲ್ಲೇ  ಪತಿ ಕೋಮಲಳ ಬಳಿ ಮಗುವನ್ನು ಕೊಂದಿರುವುದಾಗಿ ತಿಳಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಭಯಗೊಂಡ ತಾಯಿ ಶವದ ಬಳಿಗೆ ತೆರಳಿದ್ದಾಳೆ. ಬಳಿಕ ಆರೋಪಿ ವಿರುದ್ದ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಬಾಲಕನ್ನು ಆತನ ತಂದೆ ಸಾಯಿಸಿದ್ದು, ಕುತ್ತಿಗೆಯ ಮೇಲೆ ಬಲವಾದ ಗಾಯದ ಗುರುತುಗಳಿದ್ದವು. ಆದರೆ, ಯಾವ ಕಾರಣಕ್ಕಾಗಿ ಆತ ಕೊಲೆ ಮಾಡಿದ್ದಾನೆ ಎಂಬುದು ತಿಳಿಯದು. ಆದರೆ, ಆತನ ಬಂಧನದ ಬಳಿಕ ಮಾಹಿತಿ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net