

ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿನ ಸಿಂಧೂರ ಸಂಜೀವಿನಿ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಒಕ್ಕೂಟ ಅಧ್ಯಕ್ಷೆ ಸಂಗೀತ ಅಧ್ಯಕ್ಷತೆ ವಹಿಸಿದ್ದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿ, ಸಂಜೀವಿನಿ ಸದಸ್ಯರಿಗೆ ಸರ್ಕಾರದಿಂದ ಸಿಗುವ ಯೋಜನೆ, ವಾಹಿತಿ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಪಂ ಸದಸ್ಯರಾದ ವಾಸು ಪೂಜಾರಿ, ವಿದ್ಯಾ ಸಾಲ್ಯಾನ್, ರಾಬರ್ಟ್, ಕಾರ್ಯದರ್ಶಿ ಸುಮತಿ ಅಂಚನ್, ಎನ್‌ಎಲ್‌ಆರ್‌ಎಂ ಟಕ ಬ್ರಹ್ಮಾವರ ವಲಯ ಮೇಲ್ವಿಚಾರಕಿ ಸ್ವಾತಿ ಕುವಾರಿ, ಆರ್ಥಿಕ ಸಾಕ್ಷರತೆ ತಂಡದ ಸಂಯೋಜಕಿ ಅರ್ಪಿತಾ, ರೈತ ಸಂಪರ್ಕ ಕೇಂದ್ರ ಬ್ರಹ್ಮಾವರ ಅಧಿಕಾರಿ ಅನುಷಾ, ಫಸಲ್‌ಭಿವಾ ವಿವಾ ಜಿಲ್ಲಾ ಸಂಯೋಜಕ ರವೀಂದ್ರ ಮೊಗವೀರ, ರುಡ್‌ಸೆಟ್ ಸಂಸ್ಥೆಯ ಬೊಮ್ಮಯ್ಯ, ಕೃಷಿ ಇಲಾಖೆಯ ಶಿವರಾಜ್ ಹಾಗೂ ಜ್ಯೋತಿ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ: ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಾಲಿನಿ, ಉಪಾಧ್ಯಕ್ಷರಾಗಿ ಪಾವನಾ, ಕಾರ್ಯದರ್ಶಿ ಲಲಿತಾ, ಜತೆ ಕಾರ್ಯದರ್ಶಿ ಸವಿತಾ, ಕೋಶಾಧಿಕಾರಿ ರೂಪಾ ಆಯ್ಕೆಯಾದರು.
ಸಂಜೀವಿನಿ ಸಂದ ವಸಂತಿ ಸ್ವಾಗತಿಸಿದರು. ಶ್ಯಾಮಲಾ ಪುತ್ರನ್ ವಂದಿಸಿದರು. ಎಲ್‌ಸಿಆರ್‌ಪಿ ಸುಜಾತಾ ಸಭೆಯ ನಡಾವಳಿ ವಾಚಿಸಿದರು. ವಸಂತಿ ಕಾರ್ಯಕ್ರಮ ಸಂಯೋಜಿಸಿದರು. ಎಂಬಿಕೆ ವಾಣಿಶ್ರೀ ಜವಾ ಖರ್ಚು, ವಾರ್ಷಿಕ ವರದಿ ಮಂಡಿಸಿದರು.