ಬೆಂಗಳೂರು: ಇತ್ತೀಚೆಗೆ ನಾನು ನಂದಿನಿ… ಬೆಂಗಳೂರಿಗ್ ಬಂದೀನಿ ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತು. ಯಾವುದೇ ರೀಲ್ಸ್ ನೋಡಿದರೂ ಇದೇ ಹಾಡು ಗುನುಗುತ್ತಿತ್ತು. ಈ ಹಾಡನ್ನು ಸೃಷ್ಟಿಸಿದ ವಿಕಿಪೀಡಿಯಾ ತಂಡಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಇದೇ ಹಾಡಿನ ಧಾಟಿಯಲ್ಲಿ ನಟಿ ಸಿಂಧು ಲೋಕನಾಥ್ ಬರೆದಿರುವ ಲಿರಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಮೂಲಕ ಸ್ಯಾಂಡಲ್ವುಡ್ಗೆ ಟಾಂಗ್ ಕೊಟ್ರಾ ಎಂಬ ಟಾಕ್ ಕೂಡ ಕೇಳಿಬರುತ್ತಿವೆ.
ಸಿಂಧು ಬರೆದ ಹಾಡಿನ ಸಾಲು ಹೀಗಿದೆ ನೋಡಿ…
ನಾನು ನಂದಿನಿ ಬೆಂಗಳೂರಿಗೆ ಬಂದೀನಿ
ಸಿನಿಮಾ ಮಾಡ್ತೀನಿ, ಹೀರೋಯಿನ್ ಆಗ್ತೀನಿ
ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ
ಬಂದಿದ್ದ್ ದುಡ್ಡೆಲ್ಲ ಮಜಾ ಉಡಾಯಿಸ್ತೀನಿ
ಬಾರೇ ನಂದಿನಿ ಬೆಂಗಳೂರು ತೋರಸ್ತೀನಿ
ಬೇ ಬೇ ಬೇಡಾ
ಬಾರೇ ನಂದಿನಿ ಡ್ರೈವ್ ಕರ್ಕೊಂಡು ಹೋಗ್ತೀನಿ
ಓಹ್ ಬೇಡ ಓಹ್ ಬೇಡ.
ಬಾರೇ ನಂದಿನಿ ಟಾಲಿವುಡ್ ತೋರಸ್ತೀನಿ
ಬೇ ಬೇ ಬೇಡ
ಬಾರೇ ನಂದಿನಿ ಕಾಲಿವುಡ್ ತೋರಸ್ತೀನಿ
ಬೇ ಬೇ ಬೇಡ..
ನೋಡಮ್ಮ ಇಲ್ಲಿ ನೀನು ಆಕ್ಟಿಂಗ್ ಕಲಿಬೇಕು
ಇಲ್ಲದಿದ್ರೆ ನಿಂಗಿಲ್ಲ ಕಷ್ಟ ಆಗುತ್ತದೆ
ಸರ್ ನಾನು ಗ್ಲಾಮರಸ್ ಬಟ್ಟೆ ಹಾಕೊತೀನಿ
ಯಾಕಂದ್ರೆ ನನ್ ಆಕ್ಟಿಂಗ್ ಅಷ್ಟಕ್ ಅಷ್ಟೆ, ಐ ಕ್ಯಾನ್ ಟ್ರೈ, ಐ ಕ್ಯಾನ್ ಆಕ್ಟ್, ಇಫ್ ನಾಟ್ ಐ ವಿಲ್ ಫ್ಲೈ ಟು ಬಾಲಿವುಡ್
ನಾನು ನಂದಿನಿ ಬೆಂಗಳೂರಿಗೆ ಬಂದೀನಿ
ಸಿನಿಮಾ ಮಾಡ್ತೀನಿ, ಹೀರೋಯಿನ್ ಆಗ್ತೀನಿ
ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ
ಈ ರೀತಿಯಾಗಿ ಲಿರಿಕ್ಸ್ ಬರೆದು ವೈರಲ್ ಆಗಿರುವ ವಿಕಿಪೀಡಿಯಾ ಪೋಸ್ಟ್ಗೆ ನಟಿ ಸಿಂಧು ಲೋಕನಾಥ್ ಕಾಮೆಂಟ್ ಬಾಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕರು ಸಿಂಧು ಲೋಕನಾಥ್ ಹಾಡಿನ ಸಾಲುಗಳನ್ನು ಮೆಚ್ಚಿದ್ದಾರೆ. ಸ್ಯಾಂಡಲ್ವುಡ್ನಲ್ಲಿಯೂ ಇದೇ ಪರಿಸ್ಥಿತಿ ಎಂದಿದ್ದಾರೆ. ಇನ್ನು ಕೆಲವರು ಈ ಹಾಡಿನ ಸಾಲುಗಳು ನಟಿ ರಶ್ಮಿಕಾ ಮಂದಣ್ಣಗೆ ಹೇಳಿ ಮಾಡಿಸಿದಂತಿವೆ ಎಂದಿದ್ದಾರೆ.
ಇನ್ನು ಈ ಹಾಡಿನ ಸಾಲುಗಳಲ್ಲಿ ಸಿಂಧು ಲೋಕನಾಥ್ ಅವರ ನಿರಾಸೆಯು ಎದ್ದು ಕಾಣುತ್ತದೆ. ಏಕೆಂದರೆ, ಇತ್ತೀಚಗೆ ಅವರಿಗೆ ಸಿನಿಮಾಗಳ ಅವಕಾಶ ಕಡಿಮೆಯಾಗಿವೆ. ಅವರ ನಟನೆಯ ಸಿನಿಮಾ ತೆರೆಕಂದು ವರ್ಷಗಳೇ ಕಳೆದಿವೆ. ಸ್ಯಾಂಡಲ್ವುಡ್ನಲ್ಲಿ ಅವಕಾಶಗಳು ಇಲ್ಲದಿರುವುದರಿಂದ ತಮ್ಮ ಆಕ್ರೋಶವನ್ನು ಸಿಂಧು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ ಎಂದು ಕೆಲ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.