'ನನಗೆ ಅಂತಹ ಆಸೆ ಇಲ್ಲ ': ನಟಿ ಸಿಮ್ರಾನ್ ಹೀಗೆನ್ನಲು ಇದೇ ಕಾರಣ! | actress simran

ವಿಜಯ್​ ಅವರ 69ನೇ ಚಿತ್ರದಲ್ಲಿ 20 ವರ್ಷದ ಬಳಿಕ ಬಹುಭಾಷಾ ನಟಿ ಸಿಮ್ರನ್ ಅಭಿನಯಿಸಲು ಒಲವು ತೋರಿದ್ದರು. ಆದರೆ ಅದಕ್ಕೆ ವಿಜಯ್​ ಒಪ್ಪಿಕೊಂಡಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹರಡಿರುವ ವದಂತಿಗಳಿಗೆ ನಟಿ ಸಿಮ್ರಾನ್​ ಪ್ರತಿಕ್ರಿಯಿಸಿದ್ದಾರೆ.
ವಿಜಯ್​ ಜೊತೆ ಸಿಮ್ರಾನ್​
Published on

ಚೆನ್ನೈ: ಕಾಲಿವುಡ್‌ ಸೂಪರ್​ ಸ್ಟಾರ್​ ವಿಜಯ್​ ಅವರ 69ನೇ ಚಿತ್ರದಲ್ಲಿ 20 ವರ್ಷದ ಬಳಿಕ ಬಹುಭಾಷಾ ನಟಿ ಸಿಮ್ರನ್ ಅಭಿನಯಿಸಲು ಒಲವು ತೋರಿದ್ದರು. ಆದರೆ ಅದಕ್ಕೆ ವಿಜಯ್​ ಒಪ್ಪಿಕೊಂಡಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹರಡಿರುವ ವದಂತಿಗಳಿಗೆ ನಟಿ ಸಿಮ್ರಾನ್​ ಪ್ರತಿಕ್ರಿಯಿಸಿದ್ದಾರೆ. actress simran

ನಟ ವಿಜಯ್​ ಹೆಸರು ಹೇಳದೆ, ತಪ್ಪು ಮಾಹಿತಿ ಹರಡುವ ಮೊದಲು ಸುದ್ದಿಯನ್ನು ಪರಿಶೀಲಿಸುವಂತೆ ನೆಟ್ಟಿಗರು ಮತ್ತು ಇಂತಹ ಸುದ್ದಿ ಹಬ್ಬಿಸುವವರನ್ನು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಕೇಳಿಕೊಂಡಿದ್ದಾರೆ.

2004 ರಲ್ಲಿ ಬಂದ ಉದಯ್ ಚಿತ್ರದಲ್ಲಿ ಸಿಮ್ರನ್ ಮತ್ತು ದಳಪತಿ ವಿಜಯ್ ನಟಿಸಿದ್ದರು. ಈ ಚಿತ್ರ ಬಂದು ಇದೀಗ 20 ವರ್ಷ ಆಗಿದೆ. ಆದರೆ, ಅದಕ್ಕೂ ಮೊದಲು ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದರು. ಈ ಮೂಲಕ ಹಿಟ್ ಪೇರ್ ಅಂತಲೂ ಕರೆಸಿಕೊಂಡಿದ್ದರು.

ದೂರವಾದ ಜೋಡಿ:

ಅದ್ಯಾಕೋ ಏನೋ? ಈ ಕಲಾವಿದರು ಮತ್ತೆ ಒಟ್ಟಿಗೆ ನಟಿಸಲೇ ಇಲ್ಲ. ಆದರೆ, ಈಗ ಈ ಜೋಡಿ ಮತ್ತೊಮ್ಮೆ ನಟಿಸ್ತಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಜಯ್​ ಅಭಿಮಾನಿಗಳಲ್ಲಿ ಹೊಸದೊಂದು ಥ್ರಿಲ್ ಕೂಡ ಹುಟ್ಟುಹಾಕಿತ್ತು. ಮುಂದಿನ ತಿಂಗಳಲ್ಲಿಯೇ ಚಿತ್ರೀಕರಣ ಶುರು ಆಗುತ್ತಿದೆ. ಎಚ್ ವಿನೋದ್ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರುತ್ತಿದೆ ಎಂದೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಿದಾಡುತ್ತಿತ್ತು. ಆದರೆ ಚಿತ್ರತಂಡ ಅಧಿಕೃತವಾಗಿ ಹೇಳಿರಲಿಲ್ಲ ಎಂಬುದು ಬೇರೆ ಮಾತು.

ಆದರೆ ಈ ಪೋಸ್ಟ್ ಸಿಮ್ರಾನ್ ಹಠಾತ್ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕೃತ ಮಾಹಿತಿ ಇಲ್ಲದೇ ಸುಳ್ಳು ಸುದ್ದಿ ಹರಡುವವರ ವಿರುದ್ಧ ನಟಿ ಸಿಮ್ರಾನ್ ಕೆಂಡಾ ಮಂಡಲವಾಗಿದ್ದಾರೆ. ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. "ಯಾರೋ ಹೇಳುವುದನ್ನು ನನ್ನ ಸ್ನೇಹಿತರು ನಂಬುವುದು ನೋಡಿ ನನಗೆ ನೋವಾಗುತ್ತಿದೆ. ಇಲ್ಲಿವರೆಗೆ ನಾನು ಸೈಲೆಂಟ್ ಆಗಿ ಇದ್ದೆ. ಆದರೆ ಈ ಹೇಳ್ತಿದ್ದೀನಿ. ಯಾವ ದೊಡ್ಡ ಹೀರೊ ಜೊತೆ ನಟಿಸೋ ಆಸೆ ನನಗಿಲ್ಲ. ಈಗಾಗಲೇ ಅವರೊಟ್ಟಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೀನಿ. ಈಗ ನನ್ನ ಲಕ್ಷ್ಯ ಬೇರೆ" ಎಂದು ಸಿಮ್ರಾನ್ ಬರೆದುಕೊಂಡಿದ್ದಾರೆ. ಸಿಮ್ರಾನ್​ ಕೋಪದ ಹಿಂದಿನ ಕಾರಣದ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಸಿಮ್ರಾನ್ ಕನ್ನಡದಲ್ಲಿ ಶಿವರಾಜ್​ ಕುಮಾರ್​ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದು, ತೆಲುಗು, ತಮಿಳಿನಲ್ಲಿ 90ರ ದಶಕದಲ್ಲಿ ಸ್ಟಾರ್​ ನಟರ ಜೊತೆ ಹೆಜ್ಜೆ ಹಾಕಿ ಜನಪ್ರಿಯತೆ ಗಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net