

ಯೋಗವು ಕೆಳ ಬೆನ್ನಿನ ಸ್ನಾಯುಗಳನ್ನು ಬಲಪಡಿಸಲು ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ, ಒತ್ತಡ ಮತ್ತು ನೋವನ್ನು ನಿವಾರಿಸುತ್ತದೆ. ಯೋಗವು ಕಡಿಮೆ ಬೆನ್ನು ನೋವನ್ನು ನಿವಾರಿಸಲು ಪರಿಣಾಮಕಾರಿ, ಬಿಗಿಯಾದ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ಬಲವನ್ನು ನಿರ್ವಿುಸಲು ಪರಿಣಾಮಕಾರಿ ಮಾರ್ಗವಾಗಿದೆ. ಈ ಆರಂಭಿಕ ಹಂತದ ಭಂಗಿಗಳನ್ನು ಪ್ರಯತ್ನಿಸಿ. ನೋವು ಉಲ್ಬಣಗೊಂಡರೆ ನಿಧಾನವಾಗಿ ಮಾಡಿ ಮತ್ತು ನಿಲ್ಲಿಸಲು ಮರೆಯದಿರಿ.
ಸೊಂಟನೋವು, ಬೆನ್ನು ನೋವಿಗೆ ಹಲವಾರು ಕಾರಣಗಳಿವೆ.: ಅವುಗಳೆಂದರೆ, =ತುಂಬಾ ಹೊತ್ತು ಕುಳಿತುಕೊಂಡು ವಾಹನ ಪ್ರಯಾಣ. =ತುಂಬಾ ಹೊತ್ತು ಕಂಪ್ಯೂಟರ್ ಎದುರು ಕುಳಿತುಕೊಂಡು ಕೆಲಸ ನಿರ್ವಹಣೆ. =ಅಧಿಕ ತೂಕದ ವ್ಯಕ್ತಿಗಳು ವಯಸ್ಸಾದಂತೆ ಬೆನ್ನು, ಸೊಂಟ ನೋವಿನಿಂದ ಬಳಲುವಿಕೆ. =ದಿನದಿಂದ ದಿನಕ್ಕೆ ಅಗತ್ಯವಿರುವಲ್ಲಿ ಬಾಗುವ ಕೆಲಸವನ್ನು ಮಾಡದೇ ಇರುವುದು. (ಇಂದಿನ ದಿನಗಳಲ್ಲಿ ಹೆಚ್ಚಾಗಿ ನಿಂತುಕೊಂಡೇ ಅಡುಗೆ ವ್ಯವಸ್ಥೆ.)= ಆಹಾರ ಸೇವನೆ ಮತ್ತು ಪದ್ಧತಿಯಲ್ಲಿ ವ್ಯತ್ಯಾಸವಾಗಿರುವುದು. =ಚಳಿಗೆ ಮೈ ತೆರೆದುಕೊಂಡಿರುವುದು. =ಬೆನ್ನಿನ ಮೇಲೆ ಹೆಚ್ಚು ಒತ್ತಡ ಬೀಳುವ ಕೆಲಸಗಳು. =ದೀರ್ಘಕಾಲ ಸರಿಯಾದ ಭಂಗಿಯಲ್ಲಿ ಕೂಡದೆ ಇರುವುದು. = ಶಿಸ್ತಿನ ಜೀವನವನ್ನು ಪಾಲಿಸದೇ ಇರುವುದು. = ದೈಹಿಕ ವ್ಯಾಯಾಮದ ಕೊರತೆ. =ಅಥ್ಲೀಟ್ಗಳು ತುಂಬಾ ಆಡಿದಾಗ.
ಯೋಗ ಚಿಕಿತ್ಸೆಯ ಸಂಕ್ಷಿಪ್ತ ಪಟ್ಟಿ: ಕುರ್ಚಿಯಲ್ಲಿ ತುಂಬಾ ಹೊತ್ತು ಕುಳಿತು ಕೆಲಸವನ್ನು ಹೊಂದಿದ್ದರೆ ಮತ್ತು ನಿರಂತರವಾಗಿ ಕಂಪ್ಯೂಟರ್ ಎದುರು ಸಮಯ ಕಳೆಯುತ್ತಿದ್ದರೆ, ಬೆನ್ನು ನೋವಿನಿಂದ ಬಳಲುತ್ತಿರುವ ಸಾಧ್ಯತೆಗಳು ಹೆಚ್ಚು. ಇದಲ್ಲದೆ ಕುರ್ಚಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಅತಿಯಾದ ತೂಕವು ಬೆನ್ನುಮೂಳೆಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಸೊಂಟನೋವು ಸಮಸ್ಯೆ ಇದ್ದವರು ಆರಂಭದಲ್ಲಿ ಮಕರಾಸನ ಭಂಗಿಯನ್ನು ದಿನಕ್ಕೆ ಮೂರು ಬಾರಿ ಅಭ್ಯಾಸ ಮಾಡಿ. ಸೊಂಟ ನೋವು ನಿಯಂತ್ರಣಕ್ಕೆ ಆರಂಭದಲ್ಲಿ ಮಲಗಿ ತಿರುಚುವಿಕೆಯ ಸರಳ ವ್ಯಾಯಾಮಗಳನ್ನು ಅಭ್ಯಾಸ ಮಾಡಿ. ಆಸನಗಳಲ್ಲಿ ಮಲಗಿ ಅಭ್ಯಾಸ ಮಾಡುವ ಉತ್ಥಿಥ ಏಕಪಾದಾಸನ, ಸೇತುಬಂದ ಸರ್ವಾಂಗಾಸನ, ಪವನ ಮುಕ್ತಾಸನ, ಹೊಟ್ಟೆಯ ಕೊಬ್ಬು ಇದ್ದವರು ಜಠರ ಪರಿವೃತ್ತಾನಾಸನ, ಸರಳ ಭುಜಂಗಾಸನ ಹಾಗೂ ಶಲಭಾಸನವನ್ನು ಎರಡು ವಾರದಿಂದ ಮೂರು ವಾರದವರೆಗೆ ಅಭ್ಯಾಸಮಾಡಿ. ಆನಂತರ ನಿಂತುಕೊಂಡು ಅಭ್ಯಾಸ ಮಾಡುವ ತಾಡಾಸನ, ಅರ್ಧಕಟಿ ಚಕ್ರಾಸನ, ಕಟಿ ಚಕ್ರಾಸನ, ವಜ್ರಾಸನ, ಶಶಾಂಕಾಸನ, ಮಾರ್ಜಾಲಾಸನ, ವಕ್ರಾಸನ, ಭಾರಧ್ವಾಜಾಸನ, ಉತ್ಥಾನ ಮಂಡೂಕಾಸನ ಜೋಡಿಸಿ ಅಭ್ಯಾಸ ಮಾಡಿ. ಆಸನಗಳನ್ನು ಅಭ್ಯಾಸ ಮಾಡುವಾಗ ಉಸಿರಿನ ಗತಿಯೊಂದಿಗೆ ಮೆತ್ತಗೆ ಮಾಡಿ. ಕೊನೆಯಲ್ಲಿ ಶವಾಸನ, ನಾಡೀಶುದ್ಧಿ, ಸರಳ ಧ್ಯಾನ ಅಭ್ಯಾಸ ಮಾಡಿ. ದಿನದ ಯಾವುದೇ ಹೊತ್ತಲ್ಲಿ ಅಭ್ಯಾಸ ಮಾಡಬಹುದಾದ ಮುದ್ರೆ ಗಳಲ್ಲಿ ಪ್ರಾಣ ಮುದ್ರೆ, ಚಿನ್ಮುದ್ರೆ, ತಲಾ ಹತ್ತು ನಿಮಿಷ, ವಾಯುಶೂನ್ಯ ಇಪ್ಪತ್ತು ನಿಮಿಷ, ಭುವನೇಶ್ವರಿ ಮುದ್ರೆ, ರುದ್ರ ನರಸಿಂಹ ಮುದ್ರೆ ತಲಾ ಹತ್ತು ನಿಮಿಷ, ಕೊನೆಯಲ್ಲಿ ಪುನಃ ಪ್ರಾಣಮುದ್ರೆ ಹತ್ತು ನಿಮಿಷ ಅಭ್ಯಾಸ ಮಾಡಿ.
ತೀವ್ರ ಬೆನ್ನು, ಸೊಂಟ ನೋವು ಇದ್ದವರು ವೈದ್ಯರ ತಪಾಸಣೆ, ಚಿಕಿತ್ಸೆ ಪಡೆದು, ಸರಳ ಯೋಗವನ್ನು ಅಳವಡಿಸಿಕೊಳ್ಳಬೇಕು. ಕರಿದ ಮಸಾಲೆ ಆಹಾರ ಸೇವನೆ ಬೇಡ. ಸತ್ವಯುತವಾದ ಸಾತ್ವಿಕ ಆಹಾರ ಸೇವಿಸಬೇಕು.ಯೋಗ ಮುದ್ರೆಗಳ ಮಾಹಿತಿ ಅರಿತು ಗುರುಮಾರ್ಗದರ್ಶನದಲ್ಲಿ ಕಲಿತು ನಿರಂತರ ಅಭ್ಯಾಸಮಾಡಿ.