More

    ‘ಕಂಬ್ಳಿಹುಳ’ ಸಿನಿಮಾ ನೋಡಿ ಪ್ರೇಕ್ಷಕರಿಗೆ ಹೊಸ ಆಫರ್ ಕೊಟ್ಟ ‘ಸಿಂಪಲ್’ ಸುನಿ

    ಬೆಂಗಳೂರು: ಕಳೆದ ಶುಕ್ರವಾರ ‘ಬನಾರಸ್​’ ಜತೆಗೆ ಬಿಡುಡೆಯಾದ ಇನ್ನೊಂದು ಚಿತ್ರ ‘ಕಂಬ್ಳಿಹುಳ’. ಮಲೆನಾಡ ಪ್ರತಿಭೆಗಳು ಕಟ್ಟಿಕೊಟ್ಟಿರುವ ಈ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಲೆನಾಡಿನ ಪ್ರೇಮಕಥೆಯೊಂದನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ಹೊಸ ನಿರ್ದೇಶಕ ನವನ್​ ಶ್ರೀನಿವಾಸ್​ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಹೊಸ ಚಿತ್ರದಲ್ಲಿ ಮಾಸ್ಟರ್​ ಚೆಫ್​ ಆದ ಅನುಷ್ಕಾ ಶೆಟ್ಟಿ …

    ಈ ಚಿತ್ರವನ್ನು ಮೆಚ್ಚಿಕೊಂಡಿರುವವರ ಸಾಲಿಗೆ ನಿರ್ದೇಶಕ ಸಿಂಪಲ್​ ಸುನಿ ಸಹ ಸೇರಿದ್ದಾರೆ. ಅವರು ಚಿತ್ರವನ್ನು ಮೆಚ್ಚಿರುವುದಷ್ಟೇ ಅಲ್ಲ, ಪ್ರೇಕ್ಷಕರಿಗೆ ಹೊಸ ಆಫರ್​ ಸಹ ಕೊಟ್ಟಿದ್ದಾರೆ.
    ‘ಕಂಬ್ಳಿಹುಳ’ ಸಿನಿಮಾ ನೋಡಿ ಮೆಚ್ಚಿರುವ ಸುನಿ ಇದೀಗ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ‘ಕಂಬ್ಳಿಹುಳ’ ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ ಪ್ರಭುಗಳು ಸಿನಿಮಾ ಚೆನ್ನಾಗಿಲ್ಲ ಎಂದರೆ, ಅವರಿಗೆ ಟಿಕೆಟ್​ನ ಅರ್ಧಹಣವನ್ನು ವಾಪಾಸ್ಸು ಮಾಡುವುದಾಗಿ ಹೇಳಿದ್ದಾರೆ. ಈ ಆಫರ್ ಮುಂದಿನ ಮೂರು ದಿನಗಳು ಮಾತ್ರ ಲಭ್ಯವಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕೊಂಡಿದ್ದಾರೆ. ಸುನಿ ತೋರಿಸಿರುವ ಸಿನಿಮಾ ಪ್ರೀತಿಗೆ ಚಿತ್ರತಂಡ ಖುಷಿಯಾಗಿದೆ.

    ಇನ್ನು, ಚಿತ್ರ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ.

    ಇದನ್ನೂ ಓದಿ: ನಾನಿನ್ನೂ ಸತ್ತಿಲ್ಲ; ತಮ್ಮ ಅನಾರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರ ಬಗ್ಗೆ ಸಮಂತಾ ಬೇಸರ

    ‘ಕಂಬ್ಳಿಹುಳ’ ಚಿತ್ರದಲ್ಲಿ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ ಮತ್ತು ಶಿವಪ್ರಸಾದ್ ಸಂಗೀತ ಈ ಚಿತ್ರಕ್ಕಿದೆ.

    ಹೊಸ ಮನೆ ಗೃಹಪ್ರವೇಶ ಮಾಡಿದ ಕೃಷ್ಣ-ಮಿಲನಾ … ಮನೆ ಹೆಸರೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts