ಹೊಸ ಮನೆ ಗೃಹಪ್ರವೇಶ ಮಾಡಿದ ಕೃಷ್ಣ-ಮಿಲನಾ ... ಮನೆ ಹೆಸರೇನು ಗೊತ್ತಾ?

Krishna - Milana New House 3
Published on

ಬೆಂಗಳೂರು: ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಕೃಷ್ಣ ಮತ್ತು ಮಿಲನಾ, ಇದೀಗ ಹೊಸ ಮನೆ ಮಾಡಿಕೊಂಡಿದ್ದಾರೆ. ಸೋಮವಾರ ಈ ಮನೆಯ ಗೃಹಪ್ರವೇಶ ಸದ್ದಿಲ್ಲದೆ ಮುಗಿದಿದೆ. ಈ ಮನೆಯ ಗೃಹಪ್ರವೇಶದ ಕೆಲವು ಫೋಟೋಗಳನ್ನು ಮಿಲನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಅಂದಹಾಗೆ, ಕೃಷ್ಣ ಮತ್ತು ಮಿಲನಾ ಅವರ ಹೊಸ ಮನೆಯ ಹೆಸರೇನು ಗೊತ್ತಾ? ಕ್ರಿಸ್​ಮಿ ನೆಸ್ಟ್​ ಎಂದು. ಹೆಸರು ವಿಚಿತ್ರವಾಗಿದೆಯಲ್ಲಾ ಎಂದನಿಸಬಹುದು. ಸ್ವಲ್ಪ ಯೋಚಿಸಿದರೆ, ಈ ಹೆಸರಿನ ಅರ್ಥ ಹೊಳೆಯುತ್ತದೆ. ಕ್ರಿಷ್ಣ ಮತ್ತು ಮಿಲನಾ ಅವರ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ, ಕ್ರಿಸ್​ಮಿ ಎಂಬ ಹೆಸರನ್ನಿಡಲಾಗಿದೆ. ಇನ್ನು, ನೆಸ್ಟ್​ ಎಂದರೆ ಗೂಡು ಎಂದರ್ಥ. ಇವರಿಬ್ಬರು ಕಟ್ಟಿಕೊಂಡಿರುವ ಹೊಸ ಗೂಡೇ ಆ ಕ್ರಿಸ್​ಮಿ ನೆಸ್ಟ್​.

ಅಂದಹಾಗೆ, ಕೃಷ್ಣ ಮತ್ತು ಮಿಲನಾ ಇದುವರೆಗೂ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 'ನಮ್​ ದುನಿಯಾ ನಮ್​ ಸ್ಟೈಲ್​' ಎಂಬ ಚಿತ್ರದಲ್ಲಿ ನಟಿಸುವಾಗ ಇವರಿಬ್ಬರ ಪರಿಚಯವಾಯಿತು. 'ಚಾರ್ಲಿ' ಎಂಬ ಚಿತ್ರದಲ್ಲಿ ನಟಿಸುವಾಗ ಇಬ್ಬರ ನಡುವೆ ಪ್ರೇಮಾಂಕುರವಾಯಿತು. 'ಲವ್​ ಮಾಕ್ಟೇಲ್​' ನಂತರ ಮದುವೆಯೂ ಆಯಿತು. ಆ ನಂತರ ಇವರಿಬ್ಬರೂ 'ಲವ್​ ಮಾಕ್ಟೇಲ್​ 2' ಮತ್ತು 'ಲವ್​ ಬರ್ಡ್ಸ್​' ಚಿತ್ರಗಳಲ್ಲಿ ನಟಿಸುತ್ತಿದ್ದು, ಶಶಾಂಕ್​ ನಿರ್ದೇಶನದ 'ಕೌಸಲ್ಯ ಸುಪ್ರಜಾ ರಾಮ' ಎಂಬ ಹೊಸ ಚಿತ್ರದಲ್ಲೂ ಜತೆಯಾಗಿ ನಟಿಸುತ್ತಿರುವ ಸುದ್ದಿ ಇದೆ.

ಕೃಷ್ಣ ಅಭಿನಯದ 'ದಿಲ್​ ಪಸಂದ್​' ಚಿತ್ರವು ಇದೇ ಶುಕ್ರವಾರ (11 ನವೆಂಬರ್​ 2022) ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net