ಮಳೆಗಾಲವು ತಂಪು ತರುವುದರ ಜತೆಗೆ ಅನೇಕ ಸೋಂಕುಗಳಿಂದ ರೋಗ ಹರಡುತ್ತದೆ. ಆರೋಗ್ಯದ ಕಡೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಮಳೆ ಬಂದರೆ ಜನರಿಗೆ ಗಂಟಲು ನೋವು, ಅಲರ್ಜಿ, ಗಂಟಲಿನಲ್ಲಿ ನುಂಗಲು ತೊಂದರೆ, ಕೆಮ್ಮು, ಕೆಲವೊಮ್ಮೆ ಜ್ವರ ಬರುವುದು ಸಾಮಾನ್ಯವಾಗಿದೆ. ಹವಾಮಾನದ ಏರಿಳಿತಗಳು ಮತ್ತು ಮಾನ್ಸೂನ್ ಸಮಯದಲ್ಲಿ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಹರಡುವಿಕೆಯು ಗಂಟಲು ನೋವನ್ನು ಸಾಮಾನ್ಯ ಕಾಯಿಲೆಯಾಗಿ ಮಾಡುತ್ತದೆ. ಇದರಿಂದ ಪಾರಾಗಳು ಕಡಿಮೆ ಸಮಯದಲ್ಲಿ ಕಂಡುಕೊಳ್ಳಬಹುದಾದ ಪರಿಹಾರದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಹೊಳೆಯುವ ತ್ವಚೆ ಪಡೆಯುವ ಆಸೆಯೇ; ಇಲ್ಲಿದೆ ಚರ್ಮದ ಆರೈಕೆ ಮಾಡುವ ಸಿಂಪಲ್ ವಿಧಾನ
- ಕರಿಮೆಣಸು: ನೋಯುತ್ತಿರುವ ಗಂಟಲಿಗೆ ಪರಿಹಾರವನ್ನು ಪಡೆಯಲು ಕರಿಮೆಣಸು ಉತ್ತಮ ಮಾರ್ಗವಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ, ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿದ್ದು ಗಂಟಲು ನೋವನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಕರಿಮೆಣಸನ್ನು ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇವಿಸಬಹುದು.
- ಶುಂಠಿ: ಶುಂಠಿಯ ಕಷಾಯವು ನೋಯುತ್ತಿರುವ ಗಂಟಲಿಗೆ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಕಷಾಯ ಅಥವಾ ಚಹಾ ಮಾಡುವಾಗ ಅದಕ್ಕೆ ಶುಂಠಿ ಸೇರಿಸಿ. ಅಥವಾ ಶುಂಠಿಯನ್ನು ಸಣ್ಣ ತುಂಡಾಗಿ ಹೆಚ್ಚಿ ಬಾಯಲ್ಲಿ ಜಗಿಯುತ್ತ ಅದರ ರಸ ಕುಡಿಯಬಹುದು.
- ಜೇನುತುಪ್ಪ: ದಿನಕ್ಕೆ ಕನಿಷ್ಠ ಎರಡು ಬಾರಿ ಅರ್ಧ ಟೀಚಮಚ ಲೈಕೋರೈಸ್ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಗಂಟಲು ನೋವು ತಕ್ಷಣವೇ ನಿಲ್ಲುತ್ತದೆ.
- ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಮೆಂತ್ಯ: ಮೆಂತ್ಯವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದಕ್ಕೂ ಹಲವು ರೂಪಗಳಿವೆ. ನೀವು ಮೆಂತ್ಯ ಬೀಜಗಳನ್ನು ತಿನ್ನಬಹುದು. ಮೆಂತ್ಯ ಚಹಾವನ್ನು ಕುಡಿಯಬಹುದು. ಮೆಂತ್ಯ ಚಹಾವನ್ನು ಸೇವಿಸುವುದರಿಂದ ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಣ್ಣಿನ ದೃಷ್ಟಿ ಹೆಚ್ಚಿಸಿಕೊಳ್ಳುವುದು ಹೇಗೆ?; ಇಲ್ಲಿದೆ ಸುಲಭ ಮನೆ ಮದ್ದು