

ಡಿಜಿಟಲ್ ಯುಗದಲ್ಲಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಕೆಲಸದಲ್ಲಿ ನಿಮ್ಮ ಕಣ್ಣುಗಳನ್ನು ಆಯಾಸಗೊಳಿಸುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಗಂಟೆಗಟ್ಟಲೆ ಸ್ಕ್ರೋಲಿಂಗ್ ಮಾಡುವುದು, ಇಂದಿನ ಜೀವನಶೈಲಿ ಕಣ್ಣುಗಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತವೆ. ಆಹಾರ ಮತ್ತು ದೃಷ್ಟಿಯ ನಡುವಿನ ಸಂಪರ್ಕವು ಗಾಢವಾಗಿದೆ. ಪೌಷ್ಠಿಕ ಆಹಾರಗಳನ್ನು ಸೇವಿಸುವುದು ಕಣ್ಣಿನ ಆರೋಗ್ಯ ಮತ್ತು ಒಟ್ಟಾರೆ ದೃಷ್ಟಿ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ವಿಟಮಿನ್ ಎ, ಸಿ ಮತ್ತು ಇ ನಂತಹ ಪೋಷಕಾಂಶಗಳು ಸತು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಖನಿಜಗಳೊಂದಿಗೆ ಉತ್ತಮ ದೃಷ್ಟಿ ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ವಿಟಮಿನ್ ಎ ರೆಟಿನಾವನ್ನು ಬೆಂಬಲಿಸುತ್ತದೆ ಮತ್ತು ರಾತ್ರಿ ಕುರುಡುತನವನ್ನು ತಡೆಯುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ರೆಟಿನಾದ ಆರೋಗ್ಯಕ್ಕೆ ಅವಶ್ಯಕವಾಗಿದೆ ಮತ್ತು ಡ್ರೈ ಐ ಸಿಂಡ್ರೋಮ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾದರೆ ನಮ್ಮ ಕಣ್ಣಿನ ದೃಷ್ಟಿ ಉತ್ತಮಗೊಳಿಸಿಕೊಳ್ಳಲು ದೈನಂದಿನ ಆಹಾರದಲ್ಲಿ ಯಾವುದನ್ನು ಹೆಚ್ಚು ರೂಢಿಸಿಕೊಳ್ಳಬೇಕು. ಇಲ್ಲಿದೆ ಮಾಹಿತಿ