ಮುಖದ ಕಾಂತಿಯನ್ನು ಹೆಚ್ಚಿಸಲು ಒಂದಲ್ಲ ಒಂದು ಪ್ರಾಡೆಕ್ಟ್ ಉಪಯೋಗಿಸುತ್ತೇವೆ. ಅದು ಮಾರುಕಟ್ಟೆಯಲ್ಲಿ ಸಿಗುವ ಅಥವಾ ಮನೆಯಲ್ಲಿಯೇ ಇರುವ ವಸ್ತುಗಳಾಗಿರಬಹದು. ಚರ್ಮಕ್ಕೆ ಒಳ್ಳೆಯದು ಅಥವಾ ಇಲ್ಲವೇ ಎಂದು ತಿಳಿಯದೇ ಮುಖದ ಮೇಲೆ ಹಚ್ಚುವುದರಿಂದ ತ್ವರಿತ ಫಲಿತಾಂಶ ನೀಡಿದರೂ ಬಳಿಕ ಹಾನಿಯುಂಟು ಮಾಡುತ್ತದೆ. ಹಾನಿಯುಂಟು ಮಾಡುವು ವಸ್ತುಗಳು ಯಾವುವು ಮತ್ತು ಏಕೆ ಅದನ್ನು ಬಳಸಬಾರದು ಎಂದು ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ದೇಹದಲ್ಲಿನ ವಿಷ ಫಿಲ್ಟರ್ ಮಾಡುವ ಲಿವರ್ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?: ಇಲ್ಲಿದೆ ಸುಲಭ ಮಾರ್ಗ
- ನಿಂಬೆ ರಸ ಬಳಸಬೇಡಿ: ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನಿಂಬೆ ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದು. ಆದರೆ ನಿಮ್ಮ ಮುಖದ ಮೇಲೆ ಹಸಿ ನಿಂಬೆ ಹೋಳುಗಳು ಅಥವಾ ನಿಂಬೆ ರಸವನ್ನು ಅನ್ವಯಿಸುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗಬಹುದು. ಇದನ್ನು ನೇರವಾಗಿ ಮುಖದ ಮೇಲೆ ಹಚ್ಚುವುದರಿಂದ ತ್ವಚೆ ಕೆಂಪಗಾಗುತ್ತದೆ ಮತ್ತು ದದ್ದುಗಳು ಅಥವಾ ಅಲರ್ಜಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ನೀವು ಅದನ್ನು ಕೆಲವು ಪರಿಹಾರಗಳಲ್ಲಿ ಬೆರೆಸಿ ಬಳಸಿದರೆ ಉತ್ತಮ.
- ಸಕ್ಕರೆ: ಅನೇಕರು ಫೇಸ್ ಸ್ಕ್ರಬ್ ಆಗಿ ಸಕ್ಕರೆಯನ್ನು ಬಳಸುತ್ತಾರೆ. ಇದು ಕೆಲವು ಅದ್ಭುತವಾದ ಎಕ್ಸ್‌ಫೋಲಿಯಂಟ್ ಗುಣಗಳನ್ನು ಹೊಂದಿದ್ದರೂ ಚರ್ಮಕ್ಕೆ ಕಿರಿಕಿರಿ ಉಂಟುಮಾಡುತ್ತದೆ.
- ಸಾಸಿವೆ ಎಣ್ಣೆ: ಪ್ರತಿಯೊಬ್ಬರ ತ್ವಚೆಯು ವಿಭಿನ್ನವಾಗಿರುತ್ತದೆ. ಇದು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರದಿದ್ದರೆ, ಚರ್ಮವು ಕಪ್ಪಾಗುವ ಸಾಧ್ಯತೆಯಿದೆ ಆದ್ದರಿಂದ ಸಾಸಿವೆ ಎಣ್ಣೆಯನ್ನು ಬಳಸಬೇಡಿ.
- ಟೂತ್‌ಪೇಸ್ಟ್: ಟೂತ್‌ಪೇಸ್ಟ್ ಕಪ್ಪು ಚುಕ್ಕೆಯನ್ನು ಹೋಗಲಾಡಿಸಲು ಬೆಸ್ಟ್ ಸಲ್ಯೂಷನ್ ಎಂದು ಜನಪ್ರಿಯವಾಗಿದೆ. ಆದರೆ ಟೂತ್‌ಪೇಸ್ಟ್ ಬಳಸುವುದರಿಂದ ಚರ್ಮವು ಸುಟ್ಟಗಾಯದ ರೀತಿ ಬದಲಾಗುತ್ತ ಹೋಗುತ್ತದೆ. ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಎಂದ ತಜ್ಞರು ಹೇಳುತ್ತಾರೆ.
- ಅಡಿಗೆ ಸೋಡಾ: ಅಡಿಗೆ ಸೋಡಾವನ್ನು ಮೊಡವೆಗಳನ್ನು ಗುಣಪಡಿಸಲು ಬಳಸಿರುತ್ತೀರಿ. ಆದರೆ ಅಡಿಗೆ ಸೋಡಾವು ಕ್ಷಾರೀಯವಾಗಿದೆ. ಇದನ್ನು ಬಳಸುವುದರಿಂದ ಚರ್ಮವು pH ಸಮತೋಲನವನ್ನು ಕಳೆದುಕೊಳ್ಳಬಹುದು. pH ಮಟ್ಟವು ಚರ್ಮವನ್ನು ಬ್ಯಾಕ್ಟೀರಿಯಾ ಮತ್ತು ಸಾಂಕ್ರಾಮಿಕ ರೋಗಕಾರಕಗಳಿಂದ ರಕ್ಷಿಸುತ್ತದೆ.
ಕೇಂದ್ರ ಬಜೆಟ್ ಮಂಡನೆ ಸಮಯ ಸಂಜೆ 5ರಿಂದ ಬೆಳಗ್ಗೆ 11ಕ್ಕೆ ಬದಲಾಗಿದ್ದು ಏಕೆ ಗೊತ್ತಾ?