ದಶಕದ ಹಿಂದಿನ ಕನ್ನಡದ ಹಾಸ್ಯ ಧಾರಾವಾಹಿಗೆ ಮರುಪ್ರಸಾರದ ಭಾಗ್ಯ; ಕರೊನಾ ಹೊತ್ತಲ್ಲಿ ನಗಿಸಲು ಬರುತ್ತಿದ್ದಾರೆ ಡಾಕ್ಟರ್​ ವಿಠಲ್​ರಾವ್

ಸಿಲ್ಲಿ
Published on

ಬೆಂಗಳೂರು: ಈಗಾಗಲೇ ಮೂರು ದಶಕಗಳ ಹಿಂದಿನ ಧಾರಾವಾಹಿಗಳು ಕರೊನಾ ಲಾಕ್​ಡೌನ್ ಹಿನ್ನಲೆಯಲ್ಲಿ ಮತ್ತೆ ಮರುಪ್ರಸಾರ ಕಾಣುತ್ತಿವೆ. ರಾಮಾಯಣ, ಮಹಾಭಾರತ, ಶಕ್ತಿಮಾನ್​, ಭ್ಯೂಮಕೇಶ್​ ಭಕ್ಷಿ ಸೇರಿ ಹತ್ತಾರು ಹಿಂದಿ ಧಾರಾವಾಹಿಗಳು ಆ ಜನರೇಷನ್​ ಜನರನ್ನು ಮತ್ತೆ ಆ ದಿನಗಳಿಗೆ ಕರೆದೊಯ್ಯುತ್ತಿವೆ. ಅಷ್ಟೇ ಯಾಕೆ, ಕ್ರಿಕೆಟ್​ ಸರಣಿಗಳು ಸಹ ಮರುಪ್ರಸಾರ ಆರಂಭಿಸಿವೆ. ಇದೀಗ ಕನ್ನಡದಲ್ಲೂ ಅಂತ ಕಾರ್ಯ ಆರಂಭವಾಗಿದೆ. ಆರಂಭದಲ್ಲಿ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸಿಲ್ಲಿ ಲಲ್ಲಿ ಸೀಸನ್​ 1 ಧಾರಾವಾಹಿ ಇದೀಗ ಕಲರ್ಸ್​ ಕನ್ನಡದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಮರುಪ್ರಸಾರ ಆರಂಭಿಸಿದೆ.
ಡಾ. ವಿಠಲ್​ ರಾವ್​ ಫೇಮಸ್​ ಇನ್​ ಸರ್ಜರಿ ಆ್ಯಂಡ್​ ಭರ್ಜರಿ ಎಂಬ ಡೈಲಾಗ್​ ಮತ್ತೆ ಕಿವಿಗಪ್ಪಳಿಸಲಿದೆ. ಸಮಾಜ ಸೇವಕಿ ಲಲಿತಾಂಬಾ ಸಮಾಜ ಸೇವೆಯ, ರಂಗ, ಲಲ್ಲಿ ಹೀಗೆ ಎಲ್ಲ ಪಾತ್ರಗಳು ಮತ್ತೆ ಮೋಡಿ ಮಾಡಲಿವೆ. ಅಂದಹಾಗೆ, ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿ ಮರು ಪ್ರಸಾರ ಆಗುತ್ತಿದ್ದಂತೆ ಸೀರಿಯಲ್​ನ ಮುಖ್ಯ ಪಾತ್ರಧಾರಿ ಡಾ. ವಿಠಲ್​ ರಾವ್​ ಅಲಿಯಾಸ್​ ರವಿಶಂಕರ್​ ಗೌಡ, ಟ್ವಿಟರ್​ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಸ್ಪಂದಿಸಿ ಅವರ ನೆಚ್ಚಿನ ಧಾರವಾಹಿ ಸಿಲ್ಲಿ ಲಲ್ಲಿ ಮರು ಪ್ರಸಾರ ಮಾಡುತ್ತಿರುವದಕ್ಕೆ ಧನ್ಯವಾದ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net