ಬೆಂಗಳೂರು: ಜೀ಼ ಕನ್ನಡದ ಸಂಗೀತ ಶೋ ಸರಿಗಮಪ ಲಿಟಲ್ ಚಾಂಪ್ಸ್ ಹಾಗೂ ಡ್ರಾಮಾ ಜೂನಿಯರ್ಸ್ ಮತ್ತೆ ರಂಜಿಸಲು ನಿಮ್ಮ ಮುಂದೆ ಬರುತ್ತಿವೆ. ಆಡಿಷನ್ ಸಹ ಇನ್ನೇನು ಶುರುವಾಗಲಿದೆ. ಅರೇ, ಕರೊನಾ ಲಾಕ್ಡೌನ್ ಹೊತ್ತಲ್ಲಿ ಆಡಿಷನ್ ಹೇಗೆ ನಡೆಯುತ್ತದೆ? ಹೀಗೊಂದು ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೂ ಇದೀಗ ಉತ್ತರ ಸಿಕ್ಕಿದೆ. ಅಂದರೆ, ಮನೆಯಲ್ಲಿದ್ದುಕೊಂಡೆ, ಆಡಿಷನ್ ನೀಡಬಹುದು. ಈಗಾಗಲೇ ವರ್ಕ್ ಫ್ರಂ ಹೋಮ್ ರೀತಿಯಲ್ಲಿ ಆಡಿಷನ್ ಫ್ರಂ ಹೋಮ್ ನೀಡಬಹುದಾಗಿದೆ. ಹಾಗಾದರೆ ಹೇಗೆ ಆಡಿಷನ್ ನೀಡಬೇಕು? ನೀವು ಮಾಡಬೇಕಾಗಿರುವುದು ಇಷ್ಟೇ. ಮಕ್ಕಳ ಎರಡು ನಿಮಿಷದ ಆಡಿಯೋವನ್ನು (ಸರಿಗಮಪ-18 : 9513134434) ಅಭಿನಯದ ವಿಡಿಯೋವನ್ನು (ಡ್ರಾಮಾ ಜೂನಿಯರ್ಸ್ -4 : 9538066602 ) ಕಳುಹಿಸಬೇಕು.