More

    ಸಿಲ್ಕ್​ಯಾರಾ ಸುರಂಗ: ಮೊದಲ ದಿನವೇ 19.2 ಮೀಟರ್‌ಗಳ ಲಂಬ ಕೊರೆತ, ಇನ್ನುಳಿದಿರುವುದು 66.8 ಮೀಟರ್​!

    ಉತ್ತರಕಾಶಿ: ಕುಸಿದ ಸಿಲ್ಕ್​ಯಾರಾ ಸುರಂಗದೊಳಗೆ ಎರಡು ವಾರಗಳ ಕಾಲದಿಂದ ಸಿಲುಕಿರುವ 41 ಕಾರ್ಮಿಕರಿಗೆ ರಕ್ಷಣೆಗಾಗಿ ಪರ್ಯಾಯ ಮಾರ್ಗವಾಗಿ ಲಂಬ ಕೊರೆತ ಅರಂಭಿಸಲಾಗಿದೆ. ಅಂದರೆ, ನಿರ್ಮಾಣ ಹಂತದಲ್ಲಿರುವ ಸುರಂಗ ಮೇಲಿನಿಂದ ದೊಡ್ಡ ರಂಧ್ರ ಕೊರೆದು ಒಳಗೆ ಸಿಲುಕಿದವರನ್ನು ಹೊರಗೆ ಕರೆತರಲು ಉದ್ದೇಶಿಸಲಾಗಿದ. ಈ ಕಾರ್ಯ ಶುರುವಾದ ಭಾನುವಾರ (ನ. 26) ಮೊದಲ ದಿನವೇ
    19.2 ಮೀಟರ್‌ಗಳ ಲಂಬ ಕೊರೆತ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕುಸಿದಿರುವ ಸುರಂಗದ ಮೇಲಿನ ಬೆಟ್ಟದ ತುದಿಯಿಂದ ಲಂಬವಾದ ಮಾರ್ಗವನ್ನು ರೂಪಿಸುವ ಕೊರೆಯುವಿಕೆಯು ಭಾನುವಾರ ಪ್ರಾರಂಭವಾಗಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಮೇಲಿನಿಂದ 86 ಮೀಟರ್ ಕೆಳಗೆ ರಂಧ್ರ ಕೊರೆಯಬೇಕು. ಈಗ ಮಾಡಿರುವ ಲಂಬ ಕೊರೆತವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಇನ್ನು ಬಾಕಿ ಉಳಿದಿರುವುದು 66.8 ಮೀಟರ್​. ಇನ್ನು ನಾಲ್ಕು ದಿನಗಳ ಒಳಗಾಗಿ ಇದು ಪೂರ್ಣಗೊಳ್ಳುವ ಭರವಸೆ ಮೂಡಿದೆ.

    ಇನ್ನೂ ನಾಲ್ಕು ದಿನ:

    ಇಲ್ಲಿಯವರೆಗೆ ವರ್ಟಿಕಲ್ ಡ್ರಿಲ್ಲಿಂಗ್ 19.2 ಮೀಟರ್‌ಗೆ ತಲುಪಿದೆ ಎಂದು ಎನ್‌ಎಚ್‌ಐಡಿಸಿಎಲ್ ಎಂಡಿ ಮಹಮೂದ್ ಅಹ್ಮದ್ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದು, ಅಡೆತಡೆಗಳಿಲ್ಲದೆ ಹೀಗೆ ಸಾಗಿದರೆ ನವೆಂಬರ್ 30ರೊಳಗೆ ನಾಲ್ಕು ದಿನದಲ್ಲಿ ಮುಗಿಸುವ ಭರವಸೆ ಇದೆ ಎಂದರು.

    ಶನಿವಾರ, ಆಗರ್ ಯಂತ್ರದ ಬ್ಲೇಡ್‌ಗಳು ಅವಶೇಷಗಳೊಳಗೆ ಸಿಲುಕಿಕೊಂಡಿದ್ದರಿಂದ ಅಡ್ಡಲಾಗಿ ಕೊರೆಯುವ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ನವೆಂಬರ್ 12 ರಂದು ಉತ್ತರಾಖಂಡ್‌ನ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗವು ಭೂಕುಸಿದ ಕಾರಣ 41 ಕಾರ್ಮಿಕರು ಒಳಗಡೆ ಸಿಕ್ಕಿಬಿದ್ದಿದ್ದಾರೆ.

    ರಾಜಸ್ಥಾನದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ; ಶೇಕಡಾ 74.62ರ ವೋಟಿಂಗ್​ನಿಂದ ಯಾರಿಗೆ ಲಾಭ?

    ಬಿರುಗಾಳಿಗೆ ಹೊಡೆತಕ್ಕೆ ಮುಳುಗಿದ ಹಡಗು; 4 ಭಾರತೀಯರು ಸೇರಿ 13 ಸಿಬ್ಬಂದಿ ನಾಪತ್ತೆ

    ಮಾಜಿ ಪ್ರಧಾನಿ ಇಮ್ರಾನ್​ ವಿರುದ್ಧ ಆಘಾತಕಾರಿ ಆರೋಪ ಮಾಡಿದ ಪಾಕ್ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts