More

  ರಾಜಸ್ಥಾನದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ; ಶೇಕಡಾ 74.62ರ ವೋಟಿಂಗ್​ನಿಂದ ಯಾರಿಗೆ ಲಾಭ?

  ಜೈಪುರ: 1990ರ ದಶಕದಿಂದಲೂ ಪ್ರತಿ ಬಾರಿ ಚುನಾವಣೆ ನಡೆದಾಗ ಆಡಳಿತಾರೂಢ ಪಕ್ಷವನ್ನು ಅಧಿಕಾರದಿಂದ ಹೊರಹಾಕುವುದು ರಾಜಸ್ಥಾನದಲ್ಲಿ ವಾಡಿಕೆಯಾಗಿ ಪರಿಣಮಿಸಿದೆ. ಈ ಬಾರಿಯೂ ಇದು ಮರುಕಳಿಸಿದರೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಸೋಲನುಭವಿಸಿ, ಬಿಜೆಪಿಯು ಮತ್ತೆ ಅಧಿಕಾರಕ್ಕೇರಬಹುದಾಗಿದೆ.

  ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯಿತು. ಒಂದಿಷ್ಟು ಸಣ್ಣಪುಟ್ಟ ಕಲಹಗಳ ಹೊರತಾಗಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಸಂಜೆಯವರೆಗೆ ಶೇ. 68ರಷ್ಟು ಮತದಾನವಾಗಿದ್ದು ತಿಳಿದುಬಂದಿತ್ತು. ಈಗ ಅಂತಿಮವಾಗಿ ಎಷ್ಟು ಮತದಾನವಾಗಿದೆ ಎಂಬುದು ಅಧಿಕೃತವಾಗಿ ಘೋಷಣೆಯಾಗಿದೆ. ಶೇಕಡಾ 74.62ರಷ್ಟು ಜನರು ಮತ ಚಲಾಯಿಸಿದ್ದರು. ಕಳೆದ ಬಾರಿ 2018ರಲ್ಲಿ ಜರುಗಿದ ಚುನಾವಣೆಗಿಂತ ಇದು ಸ್ವಲ್ಪ ಅಧಿಕ. ಕಳೆದ ಬಾರಿ ಶೇಕಡಾ 74.24 ಜನರು ಮತ ಚಲಾಯಿಸಿದ್ದರು,

  ಒಟ್ಟು 200 ಕ್ಷೇತ್ರಗಳ ಪೈಕಿ ಪ್ರಸ್ತುತ 199 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,862 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೃತಪಟ್ಟ ಕಾರಣ ಒಂದು ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ.

  ಒಂದಿಷ್ಟು ಹೆಚ್ಚು ಮತದಾನವಾಗಿರುವುದು ಯಾವ ಪಕ್ಷಕ್ಕೆ ವರವಾಗಿ ಪರಿಣಮಿಸುತ್ತದೆ ಎಂಬುದು ಮುಂದಿನ ತಿಂಗಳು ಗೊತ್ತಾಗಲಿದೆ. ಏಕೆಂದರೆ, ಡಿಸೆಂಬರ್ 3 ರಂದು ಮತಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

  ಅಂಚೆ ಮತಪತ್ರಗಳ ಮೂಲಕವೂ ಇದೇ ರೀತಿಯ ಏರಿಕೆ ಕಂಡುಬಂದಿದೆ. 2018ರಲ್ಲಿ ಅಂಚೆ ಮತಪತ್ರಗಳ ಮೂಲಕ 74.71 ಪ್ರತಿಶತ ಮತದಾನವಾಗಿದ್ದರೆ ಈ ಬಾರಿ ಇದು 75.45 ಪ್ರತಿಶತಕ್ಕೆ ತಲುಪಿದೆ.

  1990 ರ ದಶಕದಿಂದಲೂ ಆಡಳಿತಾರೂಢ ಸರ್ಕಾರವನ್ನು ಸತತವಾಗಿ ಹೊರಗಿಟ್ಟ ರಾಜಸ್ಥಾನದಲ್ಲಿ ಹೆಚ್ಚಿನ ಮತದಾನದ ಪ್ರಮಾಣವು ಅಧಿಕಾರದಿಂದ ಹೊರಗುಳಿಯುತ್ತದೆ ಎಂಬ ಸಾಂಪ್ರದಾಯಿಕ ಬುದ್ಧಿವಂತಿಕೆಯು ಅನಗತ್ಯವಾಗಿದೆ.

  ರಾಜಸ್ಥಾನದಲ್ಲಿ ಬಿಜೆಪಿಯ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಚುನಾವಣೆ ಫಲಿತಾಂಶದ ಇಂಡಿಯಾ ಮೈತ್ರಿಕೂಟ ಅಳಿಸಿ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

  ತೆಲಂಗಾಣದ ತೂಪ್ರಾನ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ” ನಶಿಸುವುದನ್ನು ನಾನು ಮೂರು ರಾಜ್ಯಗಳಲ್ಲಿ ನೋಡಿದ್ದೇನೆ. ಅಲ್ಲಿನ ಮಹಿಳೆಯರು, ರೈತರು ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಲು ಹೊರಟಿದ್ದಾರೆ ಎಂದಿದ್ದಾರೆ.

  ಬಿರುಗಾಳಿಗೆ ಹೊಡೆತಕ್ಕೆ ಮುಳುಗಿದ ಹಡಗು; 4 ಭಾರತೀಯರು ಸೇರಿ 13 ಸಿಬ್ಬಂದಿ ನಾಪತ್ತೆ

  ಮಾಜಿ ಪ್ರಧಾನಿ ಇಮ್ರಾನ್​ ವಿರುದ್ಧ ಆಘಾತಕಾರಿ ಆರೋಪ ಮಾಡಿದ ಪಾಕ್ ನಟಿ

  ಮೇಡ್ ಇನ್​ ಇಂಡಿಯಾ ಟೆಸ್ಲಾ ಇವಿ ಕಾರುಗಳು ಕೈಗೆಟಕುವ ಬೆಲೆಗೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts