More

    ಮೇಡ್ ಇನ್​ ಇಂಡಿಯಾ ಟೆಸ್ಲಾ ಇವಿ ಕಾರುಗಳು ಕೈಗೆಟಕುವ ಬೆಲೆಗೆ

    ಕೆಲವು ವರ್ಷಗಳ ತಿಕ್ಕಾಟದ ನಂತರ ಭಾರತ ಸರ್ಕಾರ ಮತ್ತು ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಇಂಕ್ ಒಪ್ಪಂದಕ್ಕೆ ಬರುತ್ತಿರುವಂತೆ ತೋರುತ್ತಿದೆ. ಭಾರತ ಸರ್ಕಾರವು ಟೆಸ್ಲಾ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಟೆಸ್ಲಾದೊಂದಿಗೆ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ವರದಿಯಾಗಿದೆ. ಅಲ್ಲದೆ, ಕಂಪನಿಯು ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಿ ಕಾರು ಬಿಡುಗಡೆ ಮಾಡಲಿದೆ. ಹಾಗಿದ್ದರೆ ಭಾರತದಲ್ಲಿ ಈ ಟೆಸ್ಲಾ ಕಾರುಗಳ ಬೆಲೆ ಎಷ್ಟಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

    ಭಾರತದಲ್ಲಿ ಟೆಸ್ಲಾ ಕಾರುಗಳ ಬೆಲೆ ರೂ 17 ಲಕ್ಷ (20,000 ಡಾಲರ್​) ಆಗಬಹುದು ಎಂದು ಭಾರತ ಸರ್ಕಾರದ ನಿಕಟ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
    .
    ಅಮೆರಿಕಾದ ವಿದ್ಯುತ್​ ವಾಹನ (EV) ತಯಾರಕ ಟೆಸ್ಲಾ ಭಾರತದಲ್ಲಿ ಸ್ಥಾಪಿಸಲಿರುವ ತನ್ನ ಹೊಸ ಉತ್ಪಾದನಾ ಸೌಲಭ್ಯದ ಬಹುಪಾಲು ಮಾದರಿಗಳ ಕಾರುಗಳ ಬೆಲೆ ರೂ 17 ಲಕ್ಷ ( 20,000 ಡಾಲರ್) ನಿಗದಿಪಡಿಸಲಿ ಎಂದು ವರದಿಯಾಗಿದೆ. ಉದಯೋನ್ಮುಖ ಮಾರುಕಟ್ಟೆಗಳಿಗಾಗಿ ಈ ವಾಹನವನ್ನು ತಯಾರಿಸುವ ಕೆಲಸ ಈಗಾಗಲೇ ನಡೆದಿದೆ ಎಂದು ಟೆಸ್ಲಾ ಹೇಳಿದೆ.

    ಈ ಕಾರುಗಳನ್ನು ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಟೆಸ್ಲಾದಿಂದ ರೀತಿಯ ಕೈಗೆಟುಕುವ EV ಕಾರ್​ ಬ್ರ್ಯಾಂಡ್​, ದೇಶಕ್ಕೆ ಗೇಮ್-ಚೇಂಜರ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

    ಮೋದಿ ಜತೆ ಮಾತುಕತೆ:

    ಎಲೋನ್ ಮಸ್ಕ್ ಈ ವರ್ಷದ ಜುಲೈನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದರು. ಭೇಟಿಯ ಸಮಯದಲ್ಲಿ, ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವ ಯೋಜನೆಗಳಿಗೆ ವೇಗ ದೊರೆಯಿತು. 5 ಲಕ್ಷ ಎಲೆಕ್ಟ್ರಿಕ್ ವಾಹನಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಟೆಸ್ಲಾ ಕಂಪನಿಯು ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿದೆ.

    ಟೆಸ್ಲಾ ಮತ್ತು ಭಾರತ ಸರ್ಕಾರವು ಹೊಸ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಭಾರತದಲ್ಲಿ ಟೆಸ್ಲಾ ಕಾರುಗಳ ಆಮದುಗಳನ್ನು ಪ್ರಾರಂಭಿಸಲಾಗುತ್ತದೆ, ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ಕನಿಷ್ಠ 2 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಸ್ಥಾಪಿಸಲಿದೆ. ಇದಲ್ಲದೆ, ಕಂಪನಿಯು ತನ್ನ ಬಿಡಿಭಾಗಗಳ ಖರೀದಿ ಮುಂದಾಗಿದೆ. ಇದಲ್ಲದೆ, ಭಾರತದಲ್ಲಿ ವಾಹನಗಳ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಕಂಪನಿಯು ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದಾಗಿದೆ.

    ಯಾವ ರಾಜ್ಯದಲ್ಲಿ?:

    ಕಂಪನಿಯು ಭಾರತದ ಮೂರು ರಾಜ್ಯಗಳ ಪೈಕಿ ಒಂದರಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಬಯಸುತ್ತಿದೆ ಎಂದು ಮೂಲಗಳು ಹೇಳುತ್ತವೆ. ಆಯ್ಕೆಗಳಲ್ಲಿ ಮೊದಲ ರಾಜ್ಯ ಗುಜರಾತ್, ನಂತರದ ಇತರ ಎರಡು ರಾಜ್ಯಗಳು ಮಹಾರಾಷ್ಟ್ರ ಮತ್ತು ತಮಿಳುನಾಡು. ಈಗ ಕಂಪನಿಯು ತನ್ನ ಕಾರ್ಖಾನೆಯನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಿದೆ ಎಂಬುದು ಅಂತಿಮಗೊಂಡಿಲ್ಲ. ಆದಾಗ್ಯೂ, ವರದಿಗಳ ಪ್ರಕಾರ, ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಭಾರತ ಸರ್ಕಾರ ಮತ್ತು ಟೆಸ್ಲಾ ಈ ಘೋಷಣೆಯನ್ನು ಮಾಡಬಹುದಾಗಿದೆ.

    ನಡೆಯದ ಪಿಯೂಷ್ ಗೋಯಲ್-ಮಸ್ಕ್ ಭೇಟಿ:

    ರಾಜ್ಯಸಭೆಯ ಸಂಸದ ಪಿಯೂಷ್ ಗೋಯಲ್ ಅವರು ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಟೆಸ್ಲಾ ಕಾರ್ಖಾನೆಗೆ ಭೇಟಿ ನೀಡಿದ ದಿನಗಳ ನಂತರ ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಪ್ರವೇಶದ ಕುರಿತು ಈ ಘೋಷಣೆ ಹೊರಬಂದಿದೆ. ಅವರು ಟೆಸ್ಲಾದ ಸಿಇಒ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು; ಆದಾರೂ ಕೆಲವು ಅನಿರೀಕ್ಷಿತ ಸಂದರ್ಭಗಳಿಂದಾಗಿ, ಮಸ್ಕ್ ಅವರು ಕಾರ್ಖಾನೆಯಲ್ಲಿ ಗೋಯಲ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಂತರ ಅವರು X ನಲ್ಲಿ ಟ್ವೀಟ್ ಹಂಚಿಕೊಂಡರು, “ನೀವು ಟೆಸ್ಲಾಗೆ ಭೇಟಿ ನೀಡಿರುವುದು ಗೌರವವಾಗಿದೆ! ಇಂದು ಕ್ಯಾಲಿಫೋರ್ನಿಯಾಗೆ ಪ್ರಯಾಣಿಸಲು ಸಾಧ್ಯವಾಗದಿದ್ದಕ್ಕಾಗಿ ನನ್ನ ಕ್ಷಮೆಯಾಚಿಸುತ್ತೇನೆ, ಆದರೆ, ಭವಿಷ್ಯದ ದಿನಾಂಕದಂದು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts