More

  ನಟ ಕಾರಿಗೆ ಡಿಕ್ಕಿ ಹೊಡೆದು ಬೈಕ್​ ಸವಾರ ಸಾವು; ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ

  ಹೈದರಾಬಾದ್​​: ನಲ್ಗೊಂಡ ಬಳಿಯ ಅಡ್ಡಕಿ-ನಾರ್ಕಟಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಟ ರಘುಬಾಬು ಅವರ ಮಾಲಿಕತ್ವದ ಕಾರು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸಾವನ್ನಪ್ಪಿದ್ದಾರೆ.

  ಬೈಪಾಸ್ ರಸ್ತೆಯಲ್ಲಿ ಚಲನಚಿತ್ರ ನಟ ರಘುಬಾಬು ಅವರ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ. ಮೃತರನ್ನು ನಲ್ಗೊಂಡ ಟೌನ್ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಯಾಂಡೈನ್ ಜನಾರ್ದನ್ ರಾವ್ ಎಂದು ಗುರುತಿಸಲಾಗಿದೆ.

  ಸುಮಾರು 50 ಮೀಟರ್ ದೂರದವರೆಗೆ ನಟ ರಘುಬಾಬು ಅವರ ಕಾರು ಮತ್ತು ಬೈಕ್​ನ್ನು ಎಳದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತದ ಕುರಿತು ನಲ್ಗೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  ಪೊಲೀಸರು ಹಾಗೂ ಕುಟುಂಬಸ್ಥರ ಪ್ರಕಾರ, ಪಟ್ಟಣದ ಶ್ರೀನಗರ ಕಾಲೋನಿಯ ಸಂದಿನೇನಿ ಜನಾರ್ದನ ರಾವ್ (51) ಬಿಆರ್ ಎಸ್ ಟೌನ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ ವೆಂಚರ್‌ಗೆ ಹೋಗಿ ಸಂಜೆ ವಾಪಸಾಗುತ್ತಿದ್ದಾಗ ಹೈದರಾಬಾದಿನಿಂದ ಮಿರ್ಯಾಲಗೂಡಕ್ಕೆ ತೆರಳುತ್ತಿದ್ದ ಕೆಎ 03 ಎಂಪಿ 69 14 ನಂಬರಿನ ಬಿಎಂಡಬ್ಲ್ಯು ಕಾರು ಜನಾರ್ದನ ರಾವ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಜನಾರ್ದನ ರಾವ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

  https://twitter.com/CoreenaSuares2/status/1780652975331164217/history

  ಮೃತರ ಪತ್ನಿ ನಾಗಮಣಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜನಾರ್ದನ ರಾವ್ ಅವರ ಹುಟ್ಟೂರು ನಕಿರೇಕಲ್ ಮಂಡಲದ ಮಂಗಳಪಲ್ಲಿ ಗ್ರಾಮ. ಜನಾರ್ಧನ್ ರಾವ್ ಅವರು ಪತ್ನಿ ನಾಗಮಣಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

  ಆದರೆ ಅಪಘಾತದ ನಂತರ ಸ್ಥಳೀಯರು ರಘುಬಾಬು ಜೊತೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಬೈಕ್‌ನಲ್ಲಿ ಬಂದವರು ಎಲ್ಲಿಂದ ಬಂದರು ಮತ್ತು ಅಪಘಾತ ಹೇಗೆ ಸಂಭವಿಸಿತು ಎಂದು ರಘುಬಾಬು ಅವರೊಂದಿಗೆ ಮಾತನಾಡುತ್ತಿರುವುದನ್ನು ಕೆಳಗಿನ ವೀಡಿಯೊದಲ್ಲಿ ನೀವು ನೋಡಬಹುದು. ಆದರೆ ರಘುಬಾಬು ಉದ್ವಿಗ್ನಗೊಂಡಾಗ ಪಕ್ಕದಲ್ಲಿದ್ದವರು ನೀರು ಕುಡಿಯುವಂತೆ ಸೂಚಿಸಿದರು.

  3 ತಿಂಗಳಿಗೊಮ್ಮೆ 100 ಬಾರಿ ರಕ್ತದಾನ ಮಾಡಿದ ನಟ; ಕರೆ ಮಾಡಿ ಅಭಿನಂದಿಸಿದ ಮೆಗಾಸ್ಟಾರ್

  ಹೊಟ್ಟೆಯಲ್ಲಿ ಮಗುವಿಟ್ಟುಕೊಂಡೆ ಶೂಟಿಂಗ್​​​ ಸೆಟ್​​ಗೆ ಬಂದ ಸ್ಟಾರ್ ಹೀರೋಯಿನ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts