More

    ಮಾಜಿ ಪ್ರಧಾನಿ ಇಮ್ರಾನ್​ ವಿರುದ್ಧ ಆಘಾತಕಾರಿ ಆರೋಪ ಮಾಡಿದ ಪಾಕ್ ನಟಿ

    ಇಸ್ಲಾಮಾಬಾದ್: ಲೈಂಗಿಕತೆಗಾಗಿ ಹಾತೊರೆಯುತ್ತಿದ್ದ, ಕೊಕೈನ್​ ಸೇವಿಸುತ್ತಿದ್ದ, ಲಾಭಕ್ಕಾಗಿ ಧರ್ಮ ಮಾರಿಕೊಂಡ, ಸುಳ್ಳುಗಾರ, ದುಷ್ಟ ವ್ಯಕ್ತಿ…. ಈಗಾಗಲೇ ಸಾಕಷ್ಟು ವಿವಾದಗಳಿಂದ ತುಂಬಿರುವ ಪಾಕಿಸ್ತಾನದ ಮಾಜಿ ಪ್ರಧಾನಿ, ಕ್ರಿಕೆಟ್​ ಲೋಕದ ತಾರೆ ಇಮ್ರಾನ್​ ಖಾನ್​ ವಿರುದ್ಧ ಮತ್ತಷ್ಟುಆಘಾತಕಾರಿ ಆರೋಪಗಳು ಕೇಳಿಬಂದಿವೆ.

    ಪಾಕಿಸ್ತಾನಿ ಮಾಡೆಲ್ ಮತ್ತು ನಟಿ ಹಜ್ರಾ ಖಾನ್ ಪನೆಜೈ ಅವರು ಬರೆದಿರುವ ಹೊಸ ಪುಸ್ತಕವೊಂದು ಈಗ ಬಿರುಗಾಳಿ ಎಬ್ಬಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಇಂತಹ ಅನೇಕ ಆಘಾತಕಾರಿ ಆರೋಪಗಳನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ.

    ‘ವೇರ್ ದಿ ಓಪಿಯಮ್ ಗ್ರೋಸ್: ಸರ್ವೈವಿಂಗ್ ಪಾಕಿಸ್ತಾನ್ ಆ್ಯಸ್​ ಎ ವುಮನ್, ಆ್ಯನ್​ ಆ್ಯಕ್ಟರೆಸ್​ ಆ್ಯಂಡ್​ ನೊವಿಂಗ್ ಇಮ್ರಾನ್​ ಖಾನ್​ (Where the Opium Grows: Surviving Pakistan as a Woman, an Actress and Knowing Imran Khan) ಎಂಬುದು ಈ ಪುಸ್ತಕದ ಹೆಸರು. ಪನೇಜೈ ಅವರ ಆತ್ಮಚರಿತ್ರೆ ಇದಾಗಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್​ ವಿರುದ್ಧ ಲೈಂಗಿಕತೆ ಕಡೆಗೆ ಅವರ ಒಲವು ಸೇರಿ ಹಲವು ಆರೋಪಗಳನ್ನು ಇದರಲ್ಲಿ ಮಾಡಿದ್ದಾರೆ.

    ಜಿಯೋ ನ್ಯೂಸ್ ವರದಿ ಪ್ರಕಾರ ಹಜ್ರಾ ಅವರು ಕ್ರಿಕೆಟಿಗ-ರಾಜಕಾರಣಿ ಇಮ್ರಾನ್​ ಅವರನ್ನು ‘ಸುಳ್ಳುಗಾರ ಮತ್ತು ದುಷ್ಟ ವ್ಯಕ್ತಿ’ ಎಂದೂ ಜರೆದಿದ್ದಾರೆ. ಅತ್ಯಂತ ವಿವಾದಾತ್ಮಕ ಪುಸ್ತಕದಲ್ಲಿ ಮಾಜಿ ಪ್ರಧಾನಿಯ ವೈಯಕ್ತಿಕ ಜೀವನದ ರಹಸ್ಯಗಳಿವೆ ಎಂದು ಹೇಳಲಾಗಿದೆ.

    ಶುಕ್ರವಾರ ಪುಸ್ತಕವನ್ನು ಬಿಡುಗಡೆ ಮಾಡುವಾಗ ಬಲೂಚಿಸ್ತಾನದ ನಟಿ ಪನೇಜೈ ಅವರು, ಇಮ್ರಾನ್​
    ಕೊಕೇನ್ ಸೇವಿಸುತ್ತಾರೆ ಎಂದಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ ಬರೆದ ಪ್ರತಿ ಪದವನ್ನು ತಾವು ಸಮರ್ಥಿಸಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

    ಇಮ್ರಾನ್​ ಜತೆ ಹೇಗೆ ಸಂಪರ್ಕಕ್ಕೆ ಬಂದರು ಎಂಬುದನ್ನು ವಿವರಿಸಿದ ಅವರು, ತಮ್ಮ ತಂದೆ ಪಿಟಿಐಗೆ ಸೇರಿದ ನಂತರ ಖಾನ್ ಅವರನ್ನು ಭೇಟಿಯಾದೆ ಎಂದಿದ್ದಾರೆ. “ಹೀರೋ ಮತ್ತು ಮಸಿಹಾ” ಎಂದು ಪರಿಗಣಿಲ್ಪಡುವ ಈ ವ್ಯಕ್ತಿ ತಮ್ಮ ಖಾಸಗಿ ಜೀವನದಲ್ಲಿ ಅತ್ಯಂತ ವಿಭಿನ್ನ ಎಂದು 2014ರ ವೇಳೆಗೆ ಅರಿತುಕೊಂಡಿದ್ದಾಗಿ ಹೇಳಿದ್ದಾರೆ. 21 ವರ್ಷದ ಹುಡುಗಿಯನ್ನು ಇಮ್ರಾನ್​ ಗರ್ಭ ಧರಿಸುವಂತೆ ಮಾಡಿದರು ಎಂದೂ ಹೇಳಿದ್ದಾರೆ.

    2014ರಲ್ಲಿ ಈ ಪುಸ್ತಕದ ಕರಡನ್ನು ಸ್ವೀಕರಿಸಿದ ಮೊದಲ ವ್ಯಕ್ತಿ ಇಮ್ರಾನ್​ ಖಾನ್ ಆಗಿದ್ದಾರೆ ಎಂದೂ ಹಜ್ರಾ ಉಲ್ಲೇಖಿಸಿದ್ದಾರೆ. ಪುಸ್ತಕವನ್ನು ಪ್ರಕಟಿಸಲು ಅನುಮತಿ ಪಡೆಯಲು ಸಾಕಷ್ಟು ಹೆಣಗಾಡಬೇಕಾಯಿತು ಎಂದಿದ್ದಾರೆ.

    ತನ್ನ ಒಳಿತಿಗಾಗಿ “ತನ್ನ ಧರ್ಮವನ್ನು ಮಾರಿದನು. ನಾವು ಈ ವ್ಯಕ್ತಿಯನ್ನು ನಾಯಕ ಎಂದುಕೊಂಡು ಅವನ ಪರವಾಗಿ ಜಗಳವಾಡುತ್ತಿದ್ದೇವು. ಆದರೆ ಈಗ ನಾನು ಈ ಕುರಿತು ನನ್ನ ಸ್ನೇಹಿತರಿಂದ ಕ್ಷಮೆ ಕೇಳಬೇಕಾಗಿದೆ ಎಂದು ನಟಿ ಹೇಳಿದ್ದಾರೆ.

    ಮೇಡ್ ಇನ್​ ಇಂಡಿಯಾ ಟೆಸ್ಲಾ ಇವಿ ಕಾರುಗಳು ಕೈಗೆಟಕುವ ಬೆಲೆಗೆ

    ಕರ್ನಾಟಕದ ಎರಡು ಐತಿಹಾಸಿ ತಾಣಗಳು ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಲು ಸಜ್ಜು

    ಚೀನಾದಲ್ಲಿ ನ್ಯೂಮೋನಿಯಾ, ಇನ್​ಫ್ಲುಯೆಂಜಾ ಉಲ್ಬಣ; ಮುನ್ನೆಚ್ಚರಿಕೆ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts